Site icon Ullalavani

`ಹತ್ತು ದಿನಗಳೊಳಗೆ ಮರಳು ನೀತಿ ಜಾರಿಯಾಗದಿದ್ದಲ್ಲಿ ಉಗ್ರ ಪ್ರತಿಭಟನೆ’: ಸುನಿಲ್ ಬಜಾಲ್

UN NETWORKS

ಉಳ್ಳಾಲ: ಮುಂದಿನ ಹತ್ತು ದಿನಗಳ ಒಳಗೆ ಮರಳು ನೀತಿಯನ್ನು ಜಿಲ್ಲಾಡಳಿತ ಜಾರಿಗೊಳಿಸದೇ ಇದ್ದಲ್ಲಿ ಉಗ್ರ ರೀತಿಯ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್( ಸಿಡಬ್ಲ್ಯುಎಫ್ ಐ) ನ ಜಿಲ್ಲಾಧ್ಯಕ್ಷ ಸುನಿಲ್ ಕುಮಾರ್ ಬಜಾಲ್ ಹೇಳಿದ್ದಾರೆ.

ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ (ಸಿಡಬ್ಲ್ಯುಎಫ್ ಐ) ಉಳ್ಳಾಲ ವಲಯ ಸಮಿತಿ ಆಶ್ರಯದಲ್ಲಿ ತೊಕ್ಕೊಟ್ಟು ಕಚೇರಿಯಲ್ಲಿ ಭಾನುವಾರ ಮರಳು ನೀತಿಗೆ ಆಗ್ರಹಿಸಿ ನಡೆದ ವಿಶೇಷ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಕಟ್ಟಡ ಕಾರ್ಮಿಕರು ಸರಿಯಾದ ಮರಳು ಸಿಗದೆ ಕೆಲಸವಿಲ್ಲದೆ ಅತಂತ್ರರಾಗಿದ್ದಾರೆ. ಇದು ಇನ್ನೂ ಮುಂದುವರಿದಲ್ಲಿ ಕಾರ್ಮಿಕರ ಕುಂಟುಂಬ ಬೀದಿಗೆ ಬರುವುದರಲ್ಲಿ ಸಂಶಯವಿಲ್ಲ. ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಾಟ ದಂಧೆಗಳು ಎಗ್ಗಿಲ್ಲದೆ ನಡೆಯುತ್ತಾ, ಜಿಲ್ಲೆಯ ಮರಳು ಬೇರೆ ರಾಜ್ಯಕ್ಕೆ ಕೊಂಡೊಯ್ಯಲಾಗುತ್ತಿದೆ. ಆದರೆ ಜಿಲ್ಲೆಯ ಜನ ಮರಳು ಇಲ್ಲದೆ, ಕೆಲಸವಿಲ್ಲದೆ, ಅತಂತ್ರರಾಗಿರುವುದು ಖಂಡನೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿಡಬ್ಲ್ಯು ಎಫ್ ಐ.ನ ಉಳ್ಳಾಲ ವಲಯ ಅಧ್ಯಕ್ಷ ಜನಾರ್ದನ ಕುತ್ತಾರ್ ವಹಿಸಿದ್ದರು.

ಸಿಐಟಿಯು ಉಳ್ಳಾಲ ವಲಯ ಅಧ್ಯಕ್ಷ ಕೃಷ್ಣಪ್ಪ ಸಾಲ್ಯಾನ್, ಪಿಂಚಣಿದಾರರ ಉಳ್ಳಾಲ ವಲಯದ ಅಧ್ಯಕ್ಷ ಸುಂದರ ಕುಂಪಲ, ಸಿಡಬ್ಲ್ಯುಎಫ್ ಐ ರಾಜ್ಯ ಸಮಿತಿ ಸದಸ್ಯ ಜಯಂತ್ ನಾೈಕ್ ಉಪಸ್ಥಿತರಿದ್ದರು. ಚಂದ್ರಹಾಸ್ ಪಿಲಾರ್ ಸ್ವಾಗತಿಸಿದರು. ರೋಹಿದಾಸ್ ವಂದಿಸಿದರು.

Exit mobile version