Site icon Ullalavani

ದೇರಳಕಟ್ಟೆ: ಎಐಸಿಎಸ್ ಫುಟ್ಬಾಲ್ ಟೂರ್ನಮೆಂಟ್-2018ಗೆ ಚಾಲನೆ

UN NETWORKS

ಯೇನೆಪೊಯ: ಯೇನೆಪೊಯ ಸಂಸ್ಥೆಯ ಪ್ರತಿಯೊಂದು ಚಟುವಟಿಕೆ ಭಿನ್ನವಾಗಿದ್ದು ಪಠ್ಯಕ್ರಮದ ಜೊತೆಗೆ ಇತರ ಪಠ್ಯೇತರ ಚಟುವಟಿಕೆಗಳಿಗೂ ಹೆಚ್ಚಿನ ಪ್ರೋತ್ಸಾಹ ನೀಡುತ್ತಾ ಬಂದಿರುವುದು ಶ್ಲಾಘನೀಯ ಎಂದು ಮಂಗಳೂರು ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಡಾ. ಕಿಶೋರ್ ಕುಮಾರ್ ಸಿ.ಕೆ. ಅಭಿಪ್ರಾಯಪಟ್ಟರು.

ಮಂಗಳೂರಿನ ಯೇನೆಪೊಯ ಸ್ಕೂಲ್ ವತಿಯಿಂದ ದೇರಳಕಟ್ಟೆಯ ಯೇನೆಪೊಯ ವಿವಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಎಐಸಿಎಸ್ ಫುಟ್ಬಾಲ್ ಟೂನೃಮೆಂಟ್-2018 ಕ್ಕೆ ಚಾಲನೆ ನೀಡಿ ಮಾತನಾಡಿದರು.ಫುಟ್ಬಾಲ್ ಕ್ರೀಡೆ ಮಾನಸಿಕ ಹಾಗೂ ದೈಹಿಕ ಸದೃಢತೆಗೆ ಪೂರಕ. ಫರ್ಹಾದ್ ಯೇನೆಪೊಯ ಅವರು ಫುಟ್ಬಾಲ್ ಕ್ರೀಡೆಯ ಉತ್ತೇಜನಕ್ಕಾಗಿ ಮಂಗಳೂರು ಫುಟ್ಬಾಲ್ ಕ್ಲಬ್ ಆರಂಭಿಸಿರುವುದು ಈ ಭಾಗದ ಅದೆಷ್ಟೋ ಪ್ರತಿಭಾವಂತರಿಗೆ ವೇದಿಕೆ ಆಗಲಿದೆ ಎಂದರು.

ಯೇನೆಪೊಯ ಸ್ಕೂಲ್‍ನ ಆಡಳಿತ ನಿರ್ದೇಶಕ ಫರ್ಹಾದ್ ಯೇನೆಪೊಯ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಯೇನೆಪೊಯ ಗ್ರೂಪ್‍ನ ನಿರ್ದೇಶಕ ಜಾವೆದ್ ಯೇನೆಪೊಯ, ಯೇನೆಪೊಯ ಶಾಲೆಯ ಪ್ರಾಂಶುಪಾಲ ಜೋಸೆಫ್ ಮಖೀರತ್ ಹಾಗೂ ಕಾರ್ಯಕ್ರಮ ವ್ಯವಸ್ಥಾಪಕಿ ರೇಶ್ಮಾ ನಾಯಕ್ ಉಪಸ್ಥಿತರಿದ್ದರು.

ವಿಷ್ಣು ಅಲೋಕನ್ ಸ್ವಾಗತಿಸಿದರು. ಸಾರಾ ಝೇವಿಯರ್ ಕಾರ್ಯಕ್ರಮ ನಿರೂಪಿಸಿದರು. ಋತುರಾಜ್ ವಂದಿಸಿದರು. ಅಮನ್ ಅಖ್ತರ್ ಗುತ್ತಿಗಾರ್ ಅತಿಥಿಗಳನ್ನು ಪರಿಚಯಿಸಿದರು. ಪಂದ್ಯಾಟದಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ 28ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Exit mobile version