ಮುಡಿಪು:ಲಾರಿ-ಸ್ಕೂಟರ್ ಡಿಕ್ಕಿ,ಮಹಿಳೆ ಮೃತ್ಯು,ಸವಾರನಿಗೆ ಗಂಭೀರ ಗಾಯ
UllalaVani
UN NETWORKS
ಮುಡಿಪು: ಬಂಟ್ವಾಳ ತಾಲೂಕಿನ ಕುರ್ನಾಡು ಮಿತ್ತಕೋಡಿ ಬಳಿ ಟಿಪ್ಪರೊಂದು ಸ್ಕೂಟರ್ ಗೆ ಡಿಕ್ಕಿ ಹೊಡೆದು ಸ್ಕೂಟರ್ ಸಹ ಸವಾರೆ ಸ್ಥಳದಲ್ಲೇ ಮೃತಪಟ್ಟಿದ್ದು, ಚಾಲಕನ ಅಜಾರೂಕತೆಯೇ ಅಪಘಾತಕ್ಕೆ ಕಾರಣ ಎಂದು ಆರೋಪಿಸಿ ಆಕ್ರೋಶಿತಗೊಂಡ ಸ್ಥಳೀಯರು ಟಿಪ್ಪರ್ ನ ಗಾಜಿಗೆ ಹಾನಿ ಮಾಡಿದ ಘಟನೆ ಶುಕ್ರವಾರ ರಾತ್ರಿ ಸಂಭವಿಸಿದೆ.
ಪಾನೆಲ ನಿವಾಸಿ ಜುಬೈದಾ (35) ಮೃತಪಟ್ಟ ದುರ್ದೈವಿಯಾಗಿದ್ದು, ಪತಿ ಇಸ್ಮಾಯಿಲ್ ಅವರೊಂದಿಗೆ ಸ್ಕೂಟರ್ ನಲ್ಲಿ ಮನೆ ಕಡೆ ತೆರಳುತ್ತಿದ್ದಾಗ ಅಜಾಗರೂಕತೆ ಮತ್ತು ಅತೀವೇಗದಲ್ಲಿ ಬಂದ ಟಿಪ್ಪರ್ ಡಿಕ್ಕಿ ಹೊಡೆದಿದ್ದು ಗಂಭೀರ ಗಾಯಗೊಂಡಿದ್ದ ಜುಬೈದಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಉಳ್ಳಾಲ ಮತ್ತು ಸಂಚಾರಿ ದಕ್ಷಿಣ ಠಾಣಾ ಪೋಲೀಸರು ಆಗಮಿಸಿದ್ದು, ಪ್ರಕರಣ ದಾಖಲಾಗಿದೆ.