Site icon Ullalavani

ಅ.27 ಯೆನೆಪೋಯ ಘಟಿಕೋತ್ಸವ

UN NETWORKS

ಉಳ್ಳಾಲ: ದೇರಳಕಟ್ಟೆಯ ಯೆನೆಪೋಯ ಪರಿಗಣಿಸಲಾಗಿರುವ ವಿಶ್ವವಿದ್ಯಾಲಯದ 8ನೇ ವಾರ್ಷಿಕ ಘಟಿಕೋತ್ಸವ ವಿವಿ ಕ್ಯಾಂಪಸ್‍ನ ಯೆನ್‍ಡ್ಯುರೆನ್ಸ್ ಸಭಾಂಗಣದಲ್ಲಿ ಅ. 27ರಂದು ಬೆಳಗ್ಗೆ 10.15ಗಂಟೆಗೆ ನಡೆಯಲಿದೆ.

ಕುಲಾಧಿಪತಿ ವೈ. ಅಬ್ದುಲ್ಲ ಕುಂಞ ಅಧ್ಯಕ್ಷತೆ ವಹಿಸಿ ಪಿಎಚ್‍ಡಿ, ಎಂಸಿಎಚ್, ಡಿಎಂ, ಎಂಡಿ, ಎಂಎಸ್, ಎಂಡಿಎಸ್, ಎಂಎಸ್ಸಿ, (ಶುಶ್ರೂಷೆ), ಎಂಪಿಟಿ. ಸ್ನಾತಕೋತ್ತರ ಡಿಪ್ಲೊಮಾ ಮತ್ತು ಎಂಬಿಬಿಎಸ್, ಬಿಡಿಎಸ್, ಬಿಎಸ್ಸಿ( ಶುಶ್ರೂಷೆ) ಹಾಗೂ ಬಿಪಿಟಿ ಪದವೀಧರರಿಗೆ ಪದವಿ ಪ್ರದಾನ ಮಾಡಲಿರುವರು. ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವ ಜೋಧ್ಪುರ್‍ನ ಅಖಿಲ ಭಾರತೀಯ ವೈದ್ಯಕೀಯ ಶಿಕ್ಷಣ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ , ಡಾ. ಸಂಜೀವ್ ಮಿಶ್ರ, ಘಟಿಕೋತ್ಸವ ಭಾಷಣ ಮಾಡುವರು. ಮಹಾರಾಷ್ಟ್ರದ ಕರಾಡ್‍ನ ಕೃಷ್ಣ ವೈದ್ಯಕೀಯ ಶಿಕ್ಷಣ ಸಂಸ್ಥೆಯ ಕುಲಾಧಿಪತಿ ಡಾ. ವೇದ್‍ಪ್ರಕಾಶ್ ಮಿಶ್ರ ಅವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕುಲಸಚಿವ ಡಾ. ಗಂಗಾಧರ ಸೋಮಯಾಜಿ ಕೆ. ಎಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version