Site icon Ullalavani

ದುಶ್ಚಟಮುಕ್ತ ಸಮಾಜ ನಿರ್ಮಾಣಕ್ಕಾಗಿ ಜನಜಾಗೃತಿ ಜಾಥಾ ಮತ್ತು ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

UN NETWORKS

ಕೊಣಾಜೆ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಂಗಳೂರು ತಾಲೂಕು ಇದರ ವತಿಯಿಂದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ , ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ , ಕೊಣಾಜೆ ವಲಯ ಪ್ರಗತಿ ಬಂಧು ಸ್ವಸಹಾಯ ಸಂಘದ ಒಕ್ಕೂಟ, ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ,ವಿಜಯ ಗ್ರಾಮೀಣಾಭಿವೃದ್ಧಿ ಸಮಿತಿ, ವಿಜಯ ಬ್ಯಾಂಕ್, ಕೊಣಾಜೆ ಗ್ರಾಮ ಪಂಚಾಯತ್, ವಿಶ್ವಮಂಗಳ ವಿದ್ಯಾಸಂಸ್ಥೆ , ಜನಜಾಗೃತಿ ಕೊಣಾಜೆ ವಲಯ ಸಮಿತಿ ಇದರ ಸಹಕಾರದಲ್ಲಿ ಡಾ ಡಿ. ವೀರೇಂದ್ರ ಹೆಗ್ಗಡೆ ಮತ್ತು ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆಯವರ ಮಾರ್ಗದರ್ಶನದೊಟ್ಟಿಗೆ ಮಹಾತ್ಮ ಗಾಂದೀಜಿ ಯವರ 150ನೇ ಜಯಂತಿ ಸಂಭ್ರಮಾಚರಣೆಯ ಪ್ರಯುಕ್ತ ದುಶ್ಚಟಮುಕ್ತ ಸಮಾಜ ನಿರ್ಮಾಣಕ್ಕಾಗಿ ಜನಜಾಗೃತಿ ಜಾಥಾ ಮತ್ತು ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಕೊಣಾಜೆ ವಿಶ್ವಮಂಗಳದಲ್ಲಿ ಗುರುವಾರ ನಡೆಯಿತು.

ವಿಜಯಬ್ಯಾಂಕ್ ಕೇಂದ್ರೀಯ ಮುಖ್ಯ ವ್ಯವಸ್ಥಾಪಕ ರಾಜರಾಜೇಶ್ ಕುಲಕರ್ಣಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಜೀವನದ ಮೊದಲ ಹಂತ ಸುಂದರವಾಗಿದ್ದರೂ ಕೂಡಾ ವಿದ್ಯಾರ್ಥಿ ಜೀವನ ಭದ್ರಬುನಾದಿ ಆಗಬೇಕು. ವಿದ್ಯಾರ್ಥಿಗಳನ್ನು ಸಮರ್ಪಕವಾದ ಹಾದಿಯಲ್ಲಿ ಕೊಂಡು ಹೋಗುವ ಕಾರ್ಯವನ್ನು ಜನಜಾಗೃತಿ ವೇದಿಕೆ ಬಹಳ ಜಾಗೃತಿಯಿಂದ ಮಾಡುತ್ತಾ ಬಂದಿದೆ ಎಂದರು.
ಸಂಪಲ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ನಿರ್ದೇಶಕ ವಿನ್ಸಂಟ್ ಪಾಯ್ಸ್ ಮಾತನಾಡಿ, ಯಾವುದೇ ತರಗತಿಯಲ್ಲಿ ಅನುತೀರ್ಣರಾದರೂ ಸಂಪ್ಲಿಮೆಂಟರಿ ಪರೀಕ್ಷೆ ಇರುತ್ತದೆ. ಆದರೆ ಜೀವನದಲ್ಲಿ ಫೈಲ್ ಆದರೆ ಸರಿ ಮಾಡಲು ಸಾಧ್ಯವೇ ಇಲ್ಲ. ತರಗತಿಯಲ್ಲಿ ಕಲಿಯುವ ವಿದ್ಯಾರ್ಥಿಗಳ ಜೀವನ ವ್ಯರ್ಥವಾಗಿ ಖಾಲಿಯಾಗಬಾರದು. ತರಗತಿಯಲ್ಲಿ ಅಧ್ಯಾಪಕರಿಂದ ಪೆಟ್ಟು ತಿಂದವರು ತಪ್ಪು ದಾರಿಯಲ್ಲಿ ಹೋಗುವುದಿಲ್ಲ ಎಂದರು.

ಕೊಣಾಜೆ ಯೆನೆಪೋಯ ಆಸ್ಪತ್ರೆಯ ಮನಃಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ. ರವಿಚಂದ್ರ ಕಾರ್ಕಳ ಮಾತನಾಡಿದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಮಂಗಳೂರು ತಾಲೂಕು ಇದರ ಅಧ್ಯಕ್ಷ ಮಹಾಬಲ ಚೌಟ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕೊಣಾಜೆ ಗ್ರಾ.ಪಂ. ಉಪಾಧ್ಯಕ್ಷ ಲಲಿತಾರಾವ್, ಸದಸ್ಯರಾದ ಮುತ್ತು ಶೆಟ್ಟಿ, ವಿಜಯಾ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ನಿರ್ದೇಶಕ ಪ್ರಸಾದ್ ರೈ ಕಲ್ಲಿಮಾರ್, ಕೊಣಾಜೆ ವಲಯ ಜನಜಾಗೃತಿ ವೇದಿಕೆಯ ಅಧ್ಯಕ್ಷ ಸುದರ್ಶನ ರಾವ್, ಕೊಣಾಜೆ ಮಾಜಿ ಪಟೇಲರಾದ ರಘುರಾಮ ಕಾಜವ, ಸದಸ್ಯರಾದ ಪ್ರಶಾಂತ್ ಗಟ್ಟಿ, ಶಂಕರಾನಂದ ಇನ್ನವಳ್ಳಿ, ಅಚ್ಯುತಗಟ್ಟಿ, ಕೊಣಾಜೆ ವಿಜಯ ಬ್ಯಾಂಕ್‍ನ ವ್ಯವಸ್ಥಾಪಕ ಲಕ್ಷ್ಮೀಕಾಂತ್ ನಾಯಕ್, ಪ್ರಗತಿ ಬಂಧು ಒಕ್ಕೂಟದ ವಲಯಾಧ್ಯಕ್ಷ ಪ್ರವೀಣ್ ಬಗಂಬಿಲ, ವಿಶ್ವಮಂಗಳ ಸಂಸ್ಥೆಯ ಮುಖ್ಯ ಶಿಕ್ಷಕಿ ಅಂತು ಡಿ ಸೋಜ, ಶೋಭಾವತಿ, ವಲಯ ಸೇವಾ ಪ್ರತಿನಿಧಿ ಒಕ್ಕೂಟದ ಅಧ್ಯಕ್ಷರು ಮತ್ತು ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವಿಶ್ವಮಂಗಳ ಪ.ಪೂ. ಕಾಲೇಜಿನ ಪ್ರಾಂಶುಪಾಲ ಪೂರ್ಣಿಮಾ ಶೆಟ್ಟಿ ಸ್ವಾಗತಿಸಿದರು. ಶ್ರೀ ಕೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನಾಧಿಕಾರಿ ಉಮರಬ್ಬ ಪ್ರಾಸ್ತಾವಿಕವಾಗಿ ಮಾತನಾಡಿದರು ಕೊಣಾಜೆ ವಲಯ ಮೇಲ್ವಿಚಾರಕಿ ರೇಶ್ಮಾ ಕಾರ್ಯಕ್ರಮ ನಿರೂಪಣೆ ಮಾಡಿದರು.

Exit mobile version