Site icon Ullalavani

ದೇರಳಕಟ್ಟೆ: ಯೇನೆಪೊಯ ವಿವಿಯಲ್ಲಿ ಪೌಷ್ಠಿಕಾಂಶ ಅಧ್ಯಯನ ಕೇಂದ್ರ ಉದ್ಘಾಟನೆ

UN NETWORKS

ದೇರಳಕಟ್ಟೆ: ಪರಿಸರಕ್ಕೆ ಅನುಗುಣವಾಗಿ ಅಧ್ಯಯನ ನಡೆಸಿ ಪೋಷಕಾಂಶ ಕುರಿತ ನೂತನ ಸಂಶೋಧನೆ ವರದಿ ರಚಿಸಿ ಅದನ್ನು ನೀತಿಯನ್ನಾಗಿ ರಚಿಸುವತ್ತ ಯೇನೆಪೊಯ ವಿಶ್ವವಿದ್ಯಾಲಯದ ಅಧ್ಯಯನ ಕೇಂದ್ರ ಕಾರ್ಯಾಚರಿಸಬೇಕು ಎಂದು ಇಂಡಿಯನ್ ಮೆಡಿಕಲ್ ರಿಸರ್ಚ್ ಕೌನ್ಸಿಲ್‍ನ ನಿವೃತ್ತ ಮಹಾ ನಿರ್ದೇಶಕ ಪ್ರೊ. ವಿಶ್ವ ಮೋಹನ್ ಕಟೋಚ್ ಹೇಳಿದರು.

ದೇರಳಕಟ್ಟೆಯ ಯೇನೆಪೊಯ ಪರಿಗಣಿಸಲಾಗಿರುವ ವಿವಿಯ ಕ್ಯಾಂಪಸ್‍ನ ಇಎಂಡಿ ಆಡಿಟೋರಿಂಯನಲ್ಲಿಗುರುವಾರ ನಡೆದ ಯೇನೆಪೊಯ ನ್ಯೂಟ್ರಿಶಿಯನ್ ಅಧ್ಯಯನ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಯೇನೆಪೊಯ ವಿಶ್ವವಿದ್ಯಾಲಯದಲ್ಲಿ ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ಚಿಂತನೆಗಳ ಮೂಲಕ ಸಂಶೋಧನೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಹಲವು ದಶಕಗಳಿಂದ ನಡೆದುಕೊಂಡು ಬಂದಿರುವಂತೆ ಪಾಶ್ಚಿಮಾತ್ಯ ದೇಶಗಳ ಬರಹಗಾರರು ಬರೆದಿರುವ ಪಠ್ಯಕ್ರಮಗಳ ಆಧಾರದಲ್ಲಿ ಪೋಷಕಾಂಶದ ನಿರ್ಧಾರವಾಗುತ್ತಿದೆ. ಆದರೂ ದೇಶದಲ್ಲಿ ಅಪೌಷ್ಠಿಕತೆ ಕೊರತೆಗಳು ಇದೆ.

ಅಪೌಷ್ಠಿಕತೆ ಸಾಮಾಜಿಕ ಸ್ವಾಸ್ಥ್ಯದ ಮೇಲೆ ಅಡ್ಡ ಪರಿಣಾಮ , ಮಾನಸಿಕ ಹಾಗೂ ದೈಹಿಕ ನ್ಯೂನ್ಯತೆಗಳು , ರೋಗ ನಿರೋಧಕ ಶಕ್ತಿ ಕುಂಠಿತವಾಗುತ್ತಿದೆ. ಈ ನಿಟ್ಟಿನಲ್ಲಿ ಉತ್ತಮ ಉದ್ದೇಶದಿಂದ ಸ್ಥಾಪನೆಗೊಂಡ ಅಧ್ಯಯನ ಕೇಂದ್ರದಲ್ಲಿ ಪೌಷ್ಠಿಕತೆಗೆ ಪೂರಕವಾದ ಸಂಶೋಧನೆಗಳು ನಡೆದು ಅದರ ವರದಿ ಆಧಾರದಲ್ಲಿ ನೀತಿ ಜಾರಿಯಾಗುವಂತೆ ಪ್ರಯತ್ನಿಸಬೇಕೆಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ದೇರಳಕಟ್ಟೆಯ ಯೇನೆಪೊಯ ಪರಿಗಣಿಸಲಾಗಿರುವ ವಿವಿಯ ಕುಲಾಧಿಪತಿ ವೈ. ಅಬ್ದುಲ್ಲ ಕುಂಞ ಮಾತನಾಡಿ ನೂತನ ಕೇಂದ್ರವನ್ನು ಜನಸಾಮಾನ್ಯರಿಗೆ ಉಪಯೋಗವಾಗುವಂತೆ ರಚಿಸಲಾಗಿದೆ. ಭಾರತ ಸರಕಾರ ಆರೋಗ್ಯದ ಕುರಿತಾಗಿ ಹಲವು ಯೋಜನೆ ಜಾರಿಗೊಳಿಸಲಾಗಿದೆ. ಕ್ಷಯರೋಗಿಗಳಿಗೂ ಅನುಕೂಲಕ್ಕಾಗಿ ಮೊಬೈಲ್ ಆ್ಯಪ್ ಹೊರತಂದಿದೆ. ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಯೇನೆಪೊಯ ವಿವಿ ಕ್ರಾಂತಿಕಾರಿ ಬೆಳವಣಿಗೆ ಕಂಡಿದೆ ಎಂದರು.

ಕುಲಪತಿ ಡಾ. ವಿಜಯ ಕುಮಾರ್ ಹಾಗೂ ಕುಲಸಚಿವ ಡಾ. ಗಂಗಾಧರ ಸೋಮಯಾಜಿ ಕೆ.ಎಸ್ ಉಪಸ್ಥಿತರಿದ್ದರು.
ಯೇನೆಪೊಯ ಪರಿಗಣಿಸಲಾಗಿರುವ ವಿವಿಯ ನ್ಯೂಟ್ರಿಶಿಯನ್ ಅಧ್ಯಯನ ಕೇಂದ್ರದ ಮುಖ್ಯಸ್ಥ ಡಾ. ಅನುರಾಗ್ ಭಾರ್ಗವ ಸ್ವಾಗತಿಸಿದರು. ಡಾ. ಸುಧಾಕರ ಪ್ರಸಾದ್ ವಂದಿಸಿದರು.

Exit mobile version