Site icon Ullalavani

ಗಾಳದ ಕೊಂಕಣಿ ಸಮಾಜ ಬಾಂಧವರ ನಿಯೋಗ ಭೇಟಿ

UN NETWORKS

ಮಂಚಿ: ಗಾಳದ ಕೊಂಕಣಿ ಸಮಾಜ ಬಾಂಧವರ ನಿಯೋಗ ಮಂಚಿ ಮೋಂತಿಮಾರು ಶ್ರೀ ದುರ್ಗಾಪರಮೇಶ್ವರಿ ದೇವಿ ದೇವಸ್ಥಾನದಲ್ಲಿ ಮೊಕ್ಕಾಂ ಹೂಡಿರುವ ಗೋವ ಕೈವಲ್ಯ ಮಠಾಧೀಶ ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿ ಅವರನ್ನು ಭಾನುವಾರ ಭೇಟಿ ಮಾಡಿದರು.

ಸಮಾಜ ಬಾಂಧವರಿಗೆ ಆಶೀರ್ವಚನಗೈದ ಶ್ರೀಗಳು ಸಂಘದ ಚಟುವಟಿಕೆಯನ್ನು ಶ್ಲಾಘಿಸಿದರು. ಸಂಘದ ಅಧ್ಯಕ್ಷ ನರಸಿಂಹ ನಾಯ್ಕ್ ಅವರನ್ನು ಶ್ರೀಗಳು ಶಾಲುಹೊದಿಸಿ ಗೌರವಿಸಿದರು. ಸಮಾಜದ ವತಿಯಿಂದ ಶ್ರೀಗಳ ಪಾದಪೂಜೆ ನೆರೆವೇರಿಸಲಾಯಿತು. ನಿಯೋಗದಲ್ಲಿ ಗಾಳದ ಕೊಂಕಣಿ ಅಭ್ಯುದಯ ಸಂಘದ ಅಧ್ಯಕ್ಷ ನರಸಿಂಹ ನಾಯ್ಕ್ ಹರೇಕಳ,ಪ್ರಧಾನ ಕಾರ್ಯದರ್ಶಿ ಮುರಳೀಧರ ನಾಯ್ಕ್, ಜತೆ ಕಾರ್ಯದರ್ಶಿ ವೆಂಕಟೇಶ್ ಬಂಟ್ವಾಳ, ಮಾಜಿ ಕಾರ್ಯದರ್ಶಿ ಕೋಡಿ ಜಯನಾಯ್ಕ್, ಶ್ರೀ ಸೋಮೇಶ್ವರೀ ಸೌ.ಸ. ಸಂಘದ ಅಧ್ಯಕ್ಷ ಉಮಾನಾಥ ನಾಯ್ಕ್ ಉಳ್ಳಾಲ, ಸೋಮನಾಥ ಉಳಿಯ ಶ್ರೀ ಸೋಮೇಶ್ವರೀ ದೇವಿ ದೇವಸ್ಥಾನದ ಆಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿ ಯು. ದಯಾನಂದ ನಾಯ್ಕ್, ಮಹೇಶ್ ಬಂಟ್ವಾಳ, ಪ್ರವೀಣ ನಾಯ್ಕ್ ಬಂಟ್ವಾಳ, ಕೋಡಿ ಲಕ್ಷ್ಮಣ ನಾಯ್ಕ್, ಆಶೋಕ್ ನಾಯ್ಕ್,ರಾಜೇಂದ್ರ ನಾಯ್ಕ್, ಜಯರಾಮ, ಪ್ರೇಮನಾಥ್, ಹರಿಣ್ , ಶ್ರೀನಿವಾಸ್ ನಾಯ್ಕ್ ಹಾಗೂ ಪ್ರವೀಣ್ ಬಜಾಲ್ ಉಪಸ್ಥಿತರಿದ್ದರು.

Exit mobile version