Site icon Ullalavani

ಉಳ್ಳಾಲ: ಬೆಳ್ಳಿಗದೆಯ ಕುಸ್ತಿ ಪಂದ್ಯಾಟದ ಫಲಿತಾಂಶ

UN NETWORKS

ಉಳ್ಳಾಲ: ಉಳ್ಳಾಲದ ಶಾರದಾ ಉತ್ಸವದ ಪ್ರಯುಕ್ತ ಶಾರದನಿಕೇತನದಲ್ಲಿ ನಡೆದ ದಿ. ಪೈಲ್ವಾನ್ ಮೋತಿ ಪುತ್ರನ್ ಉಳ್ಳಾಲ ಇವರ ಸ್ಮರಣಾರ್ಥ 18ನೇ ವರ್ಷದ ದ.ಕ. ಜಿಲ್ಲಾ ಮಟ್ಟದ ಬೆಳ್ಳಿಗದೆಯ ಕುಸ್ತಿ ಪಂದ್ಯಾಟದಲ್ಲಿ ದುರ್ಗಾಪರಮೇಶ್ವರೀ ಚಿತ್ರಾಪುರದ ಕುಸ್ತಿಪಟುಗಳಾದ ಪ್ರವೀಣ್ `ಶಾರದಾ ಕಿಶೋರ್’ ಮತ್ತು ರವಿ ಅವರು `ಶಾರದಾ ಕೇಸರಿ’ ಪ್ರಶಸ್ತಿಯನ್ನು ಪಡೆದುಕೊಂಡರೆ, ಬೋಳಾರದ ಶಿವಾಜಿ ಫಿಸಿಕಲ್‍ನ ಸುಪ್ರಿತ್ `ಶಾರದಾ ಶ್ರೀ’ ಪ್ರಶಸ್ತಿಯೊಂದಿಗೆ ಬೆಳ್ಳಿಗದೆಯನ್ನು ತನ್ನದಾಗಿಸಿಕೊಂಡರೆ ದುರ್ಗಾಪರಮೇಶ್ವರೀ ಚಿತ್ರಾಪುರ `ತಂಡ ಪ್ರಶಸ್ತಿ’ಯನ್ನು ಪಡೆದುಕೊಂಡಿದೆ.

ಶ್ರೀ ವೀರಮಾರುತಿ ವ್ಯಾಯಾಮ ಶಾಲೆ ಹಾಗೂ ಮೊಗವೀರ ಹಿ.ಪ್ರಾ. ಶಾಲಾ ಹಳೆ ವಿದ್ಯಾರ್ಥಿ ಸಂಘದ ಬ್ರದರ್ಸ್ ಸ್ಪೋಟ್ರ್ಸ್ ಕ್ಲಬ್ ಮೊಗವೀರಪಟ್ಣ ಇದರ ಸಹಯೋಗದಲ್ಲಿ ನಡೆದ 35 ಕೆ.ಜಿ. ವಿಭಾಗದ `ಶಾರದಾ ಕಿಶೋರ್’ ಟೈಟಲ್‍ಗೆ ನಡೆದ ಪಂದ್ಯಾಟದಲ್ಲಿ ದುರ್ಗಾಪರಮೇಶ್ವರೀ (ಡಿ.ಪಿ.)ಚಿತ್ರಾಪುರದ ಪ್ರವೀಣ್ ಬೋಳಾರದ ಶಿವಾಜಿ ಫಿಜಿಕಲ್‍ನ ಅಕ್ಷಯ್ ಅವರನ್ನು ಸೋಲಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರೆ, 61ಕೆಜಿ ವಿಭಾಗದ `ಶಾರದಾ ಶ್ರೀ` ಟೈಟಲ್‍ಗೆ ನಡೆದ ಪಂದ್ಯಾಟದಲ್ಲಿ ಶಿವಾಜಿ ಫಿಸಿಕಲ್‍ನ ಸುಪ್ರಿತ್ ಅವರು ವೀರಭಾರತಿ (ವಿ.ಬಿ.) ಬೆಂಗ್ರೆಯ ಅನನ್ಯಾ ಅಮೀನ್ ಅನನ್ಯ ಅಮೀನ್ ಅವರನ್ನು ಸೋಲಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು. 74 ಕೆ.ಜಿ, ವಿಭಾಗದ `ಶಾರದಾ ಕೇಸರಿ’ ವಿಭಾಗದಲ್ಲಿ ಡಿ.ಪಿ. ಚಿತ್ರಾಪುರದ ರವಿ ಅವರು ತನ್ನದೇ ತಂಡದ ವೇಲು ರಾಜ್ ಅವರನ್ನು ಸೋಲಿಸಿ ಪ್ರಶಸ್ತಿಯನ್ನು ಪಡೆದುಕೊಂಡರು.

ಮಹಿಳಾ ಕುಸ್ತಿ ಪಂದ್ಯಾಟದ ಫಲಿತಾಂಶ
45ಕೆಜಿ ವಿಭಾಗ : ಪ್ರಥಮ: ಅರ್ಪಿತಾ (ಡಿಪಿಎಸ್‍ಪಿ ಕಾರ್‍ಸ್ಟ್ರೀಟ್), ದ್ವಿತೀಯ: ಸೌಮ್ಯ (ಡಿವಿಎಸ್ ದಡ್ಡಲ್ ಕಾಡ್)
50ಕೆಜಿ ವಿಭಾಗ : ಪ್ರಥಮ: ಲಾವಣ್ಯ (ಶಿವಾಜಿ ಫಿಜಿಕಲ್ ಬೋಳಾರ), ದ್ವಿತೀಯ: ವೈಷ್ಣವಿ (ಡಿಪಿಎಸ್‍ಪಿ ಕಾರ್‍ಸ್ಟ್ರೀಟ್)
55ಕೆಜಿ ವಿಭಾಗ : ಪ್ರಥಮ: ಸರಿತಾ (ಡಿಪಿಎಸ್‍ಪಿ ಕಾರ್ ಸ್ಟ್ರೀಟ್), ದ್ವಿತೀಯ: ನಿಶ್ಮಿತಾ (ಡಿಪಿಎಸ್‍ಪಿ ಕಾರ್ ಸ್ಟ್ರೀಟ್)
60ಕೆಜಿ ವಿಭಾಗ : ಪ್ರಥಮ: ತೇಜಸ್ವಿನಿ (ಡಿಪಿಎಸ್‍ಪಿ ಕಾರ್ ಸ್ಟ್ರೀಟ್), ದ್ವಿತೀಯ: ರೋಶ್ಮಿತಾ(ಶಿವಾಜಿ ಪಿಜಿಕಲ್)
65ಕೆಜಿ ವಿಭಾಗ : ಪ್ರಥಮ: ತೇಜಶ್ರೀ (ಡಿಪಿಎಸ್‍ಪಿ ಕಾರ್ ಸ್ಟ್ರೀಟ್), ದ್ವಿತೀಯ: ಸುಷ್ಮಾ (ಶಿವಾಜಿ ಫಿಜಿಕಲ್ ಬೋಳಾರ)
ಪುರುಷರ ಕುಸ್ತಿ ಪಂದ್ಯಾಟದ ಫಲಿತಾಂಶ
38ಕೆಜಿ ವಿಭಾಗ : ಪ್ರಥಮ: ಪ್ರಜ್ವಲ್ ಆರ್.ಜೆ (ಶಿವಾಜಿ ಫಿಜಿಕಲ್ ಬೋಳಾರ), ದ್ವಿತೀಯ: ಮಂಜುನಾಥ್ ಎಸ್. (ಡಿ.ಪಿ ಚಿತ್ರಾಪುರ)
46ಕೆಜಿ ವಿಭಾಗ : ಪ್ರಥಮ: ಸುಜಿತ್ (ಆಂಜನೇಯ ಸಸಿಹಿತ್ಲು),ದ್ವಿತೀಯ: ಹನುಮಂತ್ (ಡಿಪಿ ಚಿತ್ರಾಪುರ)
50ಕೆಜಿ ವಿಭಾಗ : ಪ್ರಥಮ: ನಶಾಲ್ ಅಹಮ್ಮದ್ (ಬಿಎಚ್‍ಎಲ್ ಸುರತ್ಕಲ್), ದ್ವಿತೀಯ: ಪ್ರಕಾಶ್ ಠಾರೋಡ್ (ಡಿಪಿ ಚಿತ್ರಾಪುರ)
57ಕೆಜಿ ವಿಭಾಗ : ಪ್ರಥಮ: ನಾಗರಾಜ್ (ಡಿಪಿ ಚಿತ್ರಾಪುರ), ದ್ವಿತೀಯ: ಮಂಜುನಾಥ್ ಎಮ್. (ಡಿಪಿ ಚಿತ್ರಾಪುರ)
65ಕೆಜಿ ವಿಭಾಗ : ಪ್ರಥಮ: ದೀಪಕ್ (ಶಿವಾಜಿ ಫಿಜಿಕಲ್), ದ್ವಿತೀಯ: ಗಗನ್ ಶೆಟ್ಟಿ (ಶಿವಾಜಿ ಫಿಜಿಕಲ್)
84ಕೆಜಿ ವಿಭಾಗ :ಪ್ರಥಮ: ಸಾಜನ್ ಕರ್ಕೇರ (ವಿಬಿ ಬೆಂಗ್ರೆ), ದ್ವಿತೀಯ: ಶಾನ್ ಅಮಿನ್ (ವಿಬಿ ಬೆಂಗ್ರೆ)

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಉಳ್ಳಾಲ ಅಬ್ಬಕ್ಕ ಉತ್ಸವ ಸಮಿತಿ ಗೌರವ ಉಪಾಧ್ಯಕ್ಷ ಸದಾನಂದ ಬಂಗೇರ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಸೋಮೇಶ್ವರ ಸೋಮನಾಥ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಶ್ವನಾಥ ಗಟ್ಟಿ ವಗ್ಗ, ದೇವಸ್ಥಾನದ ಮೊಕ್ತೇಸರ ರಾಘವ ಆರ್. ಉಚ್ಚಿಲ್, ಉಳ್ಳಾಲ ಉಮಾಮಹೇಶ್ವರಿ ಕಬ್ಬಡ್ಡಿ ಅಕಾಡೆಮಿ ರಾಷ್ಟ್ರೀಯ ಕಬಡ್ಡಿ ಆಟಗಾರರ ಅಧ್ಯಕ್ಷ ಗೋಪಿನಾಥ್ ಕಾಪಿಕಾಡ್, ದ.ಕ. ಜಿಲ್ಲಾ ಅಮೆಚೂರು ಕುಸ್ತಿ ಸಂಘದ ಅಧ್ಯಕ್ಷ ಪ್ರಕಾಶ್ ಕರ್ಕೇರ, ತುಳುನಾಡ ಕೇಸರಿ ಪ್ರಶಸ್ತಿ ವಿಜೇತ ಅರುಣ್ ಪುತ್ರನ್ ಬೆಂಗ್ರೆ, ಉದ್ಯಮಿ ಜುಲ್ಪೀಕರ್ ಸುರತ್ಕಲ್, ಪಣಂಬೂರು ಎನ್.ಎಮ್.ಪಿ.ಟಿ ಯ ರವಿರಾಜ್ ಪುತ್ರನ್ ಉಳ್ಳಾಲ್, ಉಳ್ಳಾಲ ಶ್ರೀ ಶಾರದಾ ಉತ್ಸವ ಸಮಿತಿ ಕಾರ್ಯಧ್ಯಕ್ಷ ವಿಜಯ ಪಂಡಿತ್, ಬೆಂಗಳೂರು ವಿಜಯ ಬ್ಯಾಂಕ್ ಶಾಖಾ ವ್ಯವಸ್ಥಾಪಕ ಕೃಷ್ಣರಾಜ ಎಚ್. ಪುತ್ರನ್ ಉಪಸ್ಥಿತರಿದ್ದರು.

ರೋಹಿದಾಸ್ ಬಂಗೇರ, ರಾಜೇಶ್ ಬಂಗೇರ, ಅರುಣ್ ಪುತ್ರನ್, ಸುನಿಲ್ ಪುತ್ರನ್, ಗುರುಪ್ರಸಾದ್, ಕಪಿಲ್ ಎಸ್. ಬಂಗೇರ, ಬಾನು ಪ್ರಕಾಶ್, ಮಧುರಾಜ್ ಅಮೀನ್, ಕಾಶೀನಾಥ್ ಪುತ್ರನ್, ತಿಲಕ್ ಎಸ್. ಬಂಗೇರ, ಸುದರ್ಶನ್ ಪುತ್ರನ್, ಕಿಶೋರ್ ಕಾಂಚನ್ ಉಪಸ್ಥಿತರಿದ್ದರು. ಗುರುಪ್ರಸಾದ್ ಪುತ್ರನ್ ಸ್ವಾಗತಿಸಿದರು. ರಾಜೇಶ್ ಪುತ್ರನ್ ವಿಜೇತರ ವಿವರಣೆ ನೀಡಿದರು. ವಿಶ್ವನಾಥ ಬಂಗೇರ ಕಾರ್ಯಕ್ರಮ ನಿರೂಪಿಸಿದರು. ಯಶವಂತ ಅಮೀನ್ ವಂದಿಸಿದರು.

Exit mobile version