Site icon Ullalavani

ಕೊಡಗು ಸಂತ್ರಸ್ತರಿಗೆ ರಾಜ್ಯ ಸುನ್ನೀ ಸಂಘಟನೆಗಳಿಂದ 25 ಮನೆ ನಿರ್ಮಾಣ

UN NETWORKS
ಮಂಜನಾಡಿ: ಕೊಡಗು ಜಿಲ್ಲೆಯಲ್ಲಿ ನಡೆದ ಭೀಕರ ಪ್ರಕೃತಿ ವಿಕೋಪದಲ್ಲಿ ಮನೆ ಕಳೆದುಕೊಂಡಿರುವ ನಿರ್ವಸಿತರಿಗೆ ಮನೆಗಳನ್ನು ನಿರ್ಮಿಸಿಕೊಡಲು ಕರ್ನಾಟಕ ರಾಜ್ಯ ಸುನ್ನೀ ಸಂಘಟನೆಗಳು ನಿರ್ಧರಿಸಿದ್ದು,  ಕೊಡಗು ಸುನ್ನೀ ಯುವ ನಾಯಕ ಅಬ್ದುಲ್ ಲತೀಫ್ ಶುಂಠಿಕೊಪ್ಪ ಸಂತ್ರಸ್ತರಿಗಾಗಿ ನೀಡಿರುವ ಒಂದು ಎಕ್ರೆ ಜಾಗದಲ್ಲಿ 20 ರಿಂದ 25  ಮನೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಕರ್ನಾಟಕ ಸುನ್ನೀ ಸಂಘಟನೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಪಿ.ಪಿ ಅಹ್ಮದ್ ಸಖಾಫಿ ಕಾಶಿಪಟ್ನ ಹೇಳಿದರು.
ಅವರು ಮಂಜನಾಡಿಯ ಅಲ್ ಮದೀನಾ ದಲ್ಲಿ ಶನಿವಾರ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ ಮಾಹಿತಿ ನೀಡಿದರು.
ಮನೆಗಳ ನಿರ್ಮಾಣಕ್ಕೆ  ರೂ.35 ಲಕ್ಷ ಸಂಗ್ರಹವಾಗಿದೆ.  ಸರ್ಕಾರ ಹಾಗೂ ದಾನಿಗಳ ನೆರವಿನಿಂದವಮನೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಉಲಮಾ ನಾಯಕರ ಆಶಯದಂತೆ ಎಸ್ ವೈಎಸ್ , ಎಸ್ಸೆಸ್ಸೆಫ್ ಮತ್ತು ಕೆಸಿಎಫ್ ಕಾರ್ಯಕರ್ತರು ಧನ ಸಂಗ್ರಹಕ್ಕೆ ಇಳಿದಿದ್ದಾರಡ. ಮುಅಲ್ಲಿಂ ಮತ್ತು ಮೆನೇಜ್ ಮೆಂಟ್ ನಾಯಕರು ಸಹಕರಿಸಿದ್ದಾರೆ. ಭೂಮಿ ದಾಖಲೆಗಳಿಗೆ ಸಂಬಂಧಿಸಿದ ಪ್ರಕ್ರಿಯೆಗಳು ಪೂರ್ಣ ಗೊಂಡ  ಬಳಿಕ ಮನೆ ನಿರ್ಮಾಣ ಕಾರ್ಯ ಆರಂಭಿಸಲಾಗುವುದು. ಜಾತಿ ಮತ ಬೇಧವಿಲ್ಲದೆ ಅರ್ಹ  ಬಡ ಸಂತ್ರಸ್ತರನ್ನು ಗುರುತಿಸಿ ಮನೆಗಳನ್ನು ವಿತರಿಸಲಾಗುವುದು. ಕೇರಳದ ಸಂತ್ರಸ್ತ ವಿದ್ಯಾರ್ಥಿ ಗಳಿಗೆ ಕರ್ನಾಟಕ ಎಸ್ ಎಸ್ ಎಫ್ ವತಿಯಿಂದ ಈಗಾಗಲೇ ಸುಮಾರು  ರೂ.15 ಲಕ್ಷ ಪುಸ್ತಕ ಹಾಗೂ ಪಠ್ಯೋಪಕರಣಗಳನ್ನು ಒದಗಿಸಲಾಗಿದೆ.
ಸುದ್ಧಿಗೋಷ್ಠಿಯಲ್ಲಿ ಕರ್ನಾಟಕ ಸುನ್ನೀ ಸಂಘಟನೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಪಿ.ಪಿ‌ ಅಹ್ಮದ್ ಸಖಾಫಿ ಕಾಶಿಪಟ್ನ, ರಾಜ್ಯ ಸುನ್ನೀ ಜಂಇಯತುಲ್ ಉಲಮಾ ಅಧ್ಯಕ್ಷ ಖಾಝಿ ಪಿ.ಎಂ ಇಬ್ರಾಹಿಂ ಮುಸ್ಲಿಯಾರ್ ಬೇಕಲ್,  ಕರ್ನಾಟಕ ಸುನ್ನೀ ಸಂಘ ಟನೆಗಳ ಒಕ್ಕೂಟದ ಅಧ್ಯಕ್ಷ ಪಿ.ಎಂ ಅಬ್ಬಾಸ್ ಮುಸ್ಲಿಯಾರ್ ಅಲ್ ಮದೀನಾ,  ಸುನ್ನಿ ಜಂಇಯತುಲ್ ಉಲಮಾ ಕರ್ನಾಟಕದ ಪ್ರಧಾನ ಕಾರ್ಯದರ್ಶಿ ಎಂ.ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಸುನ್ನಿ ಯುವಜನ ಸಂಘದ ಅಧ್ಯಕ್ಷ ಜಿ.ಎಂ ಮಹಮ್ಮದ್ ಕಾಮಿಲ್ ಸಖಾಫಿ, ಎಮ್ ಎಸ್ ಎಂ ಝೈನಿ ಕಾಮಿಲ್ , ಕೆ.ಎಂ ಅಬೂಬಕರ್ ಸಿದ್ದೀಖ್ ಮೋಂಟುಗೋಳಿ, ಅಬ್ದುರ್ರಹ್ಮಾನ್ ಜೆಪ್ಪು, ಎಂ.ಬಿ.ಎಂ ಸಾದಿಕ್ ಮಾಸ್ಟರ್ ಉಪಸ್ಥಿತರಿದ್ದರು.
Exit mobile version