Site icon Ullalavani

ಮಲಾರಿನಲ್ಲಿ SKSSF ವಿಖಾಯ ವತಿಯಿಂದ ಮುಆವನಃ ಕಾರ್ಯಕ್ರಮ

UN NETWORKS

ಉಳ್ಳಾಲ : SKSSF ವಿಖಾಯ ಮಲಾರ್ ಶಾಖೆ ವತಿಯಿಂದ ಮುಆವನಃ ಕಾರ್ಯಕ್ರಮವು ಸಮುದಾಯ ಭವನ ಮಲಾರ್ ಜಂಕ್ಷನ್ ನಲ್ಲಿ ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷರಾದ ಮುಹಮ್ಮದ್ ಮೋನು ಮಲಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು .ಸ್ಥಳೀಯ ಖತೀಬರಾದ ಅಬ್ದುಸ್ಸಲಾಂ ಫೈಝಿ ಇರ್ಫಾನಿ ದುಃಆ ನೆರವೇರಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಎಂ.ಎಸ್ ರಿಯಾಝ್ ಫೈಝಿ ಮಲಾರ್ ಪ್ರಸ್ತಾವಿಕವಾಗಿ ಮಾತನಾಡಿದರು .ಸಯ್ಯಿದ್ ಮದನಿ ಅರಬಿಕ್ ಕಾಲೇಜು ವಿದ್ಯಾರ್ಥಿ ಉವೈಸ್ ತೋಕೆ ಕನ್ನಡ ಭಾಷಣಗೈದರು .ಸಮಾಜ ಸೇವೆ ಯಲ್ಲಿ ನಮ್ಮ ಗ್ರಾಮದ ಅಭಿವೃದ್ಧಿ ಸಾಧ್ಯವೆಂದು ಪಾವೂರು ಪಂಚಾಯತ್ ಅಧ್ಯಕ್ಷರಾದ ಫಿರೋಝ್ ಮಲಾರ್ ಅವರು ಭಾಷಣ ಮಾಡಿದರು.

ಸಮಸ್ತ ದಕ್ಷಿಣ ಕರ್ನಾಟಕ ಮುಶಾವರ ಕಾರ್ಯದರ್ಶಿ ಉಸ್ತಾದ್ ಕುಕ್ಕಿಲ ದಾರಿಮಿ ಮುಖ್ಯ ಭಾಷಣಗೈದರು . ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ವಿಖಾಯ ಸಹಿತ SKSSF ಕಾರ್ಯಕರ್ತರನ್ನು ಫಾರೂಖ್ ಹಾಜಿ ಕಲ್ಲಡ್ಕ , ಮಂಗಳೂರು ತಾಲೂಕು ಪಂಚಾಯತ್ ಸದಸ್ಯ ಬಿ.ಎಸ್ ಬಶೀರ್ ಜೋಕಟ್ಟೆ , ಅಝಾದ್ ಯೂತ್ ಕಲ್ಚರಲ್ ಅಸೋಸಿಯೇಶನ್ ಜೋಕಟ್ಟೆ ಅಧ್ಯಕ್ಷ ಬಿ.ಕೆ ಫಯಾಝ್ ಜೋಕಟ್ಟೆ ವಿಖಾಯ ನಾಯಕರಾದ ಮುಸ್ತಫಾ ಕಟ್ಟದಪಡ್ಪು ಮತ್ತು ಬಶೀರ್ ಮಜಲು ಸನ್ಮಾನಿಸಿದರು . ವೇದಿಕೆಯಲ್ಲಿ SKSSF ಮಡಂತ್ಯಾರು ಕ್ಲಸ್ಟರ್ ಅಧ್ಯಕ್ಷರಾದ ಹಕೀಮ್ ಬಂಗೇರಕಟ್ಟೆ , SKSSF ಬಂಗೇರಕಟ್ಟೆ ಶಾಖಾಧ್ಯಕ್ಷ ಹನೀಫ್ , SKSSF ವಿಖಾಯ ಮಂಗಳೂರು ವಲಯಾಧ್ಯಕ್ಷ ಸ್ವಾಲಿಹ್ ಕಣ್ಣೂರು , ಯಾದ್ ಫೌಂಡೇಶನ್ ಮಲಾರ್ ಅಧ್ಯಕ್ಷರಾದ ರಿಯಾಝ್ ಗಾಡಿಗದ್ದೆ , ಆಸರೆ ಫೌಂಡೇಶನ್ ಮಲಾರ್ ಅಧ್ಯಕ್ಷರಾದ ಬಶೀರ್ ಅಕ್ಷರನಗರ , ಖಾಲಿದ್-ಬಿನ್-ವಲೀದ್ ಮಸ್ಜಿದ್ ಮಲಾರ್ ಜಂಕ್ಷನ್ ಅಧ್ಯಕ್ಷರಾದ ಮಜೀದ್ ಮಾಸ್ಟರ್ , ಖಾಲಿದ್ ದಯಂಬು , ಇರ್ಶಾದ್ ಕುವೆನಾಡು , ಶಮೀರ್ ಹೂಹಾಕುವಕಲ್ಲು , ಜಾಫರ್ ಶರೀಫ್ ಮೌಲವಿ ಸಾಂಬಾರತೋಟ , SKSSF ದೇರಳಕಟ್ಟೆ ಕ್ಲಸ್ಟರ್ ಅಧ್ಯಕ್ಷರಾದ ಸಯ್ಯಿದ್ ಅಲೀ , ಪ್ರಧಾನ ಕಾರ್ಯದರ್ಶಿ ನೌಶಾದ್ ದೇರಳಕಟ್ಟೆ ಮತ್ತಿತ್ತರರು ಉಪಸ್ಥಿತರಿದ್ದರು.

ವಿಖಾಯ ಮಲಾರ್ ಕಾರ್ಯದರ್ಶಿ ಅಲ್ತಾಫ್ ಅಹ್ಮದ್ ಸ್ವಾಗತಿಸಿದರು , ಕೆರೀಮ್ ಮುಸ್ಲಿಯಾರ್ ಮಲಾರ್ ಕಾರ್ಯಕ್ರಮ ನಿರೂಪಿಸಿದರು .

Exit mobile version