Site icon Ullalavani

ಉಳ್ಳಾಲ: ಶ್ರೀ ಸೋಮೇಶ್ವರಿಗೆ ಸ್ವರ್ಣಮುಖವಾಡ ಸಮರ್ಪಣೆ

UN NETWORKS

ಉಳ್ಳಾಲ : ಮುನ್ನೂರು ಗ್ರಾಮದ ಶ್ರೀ ಸೋಮನಾಥ ಉಳಿಯದ ಶ್ರೀ ಸೋಮೇಶ್ವರೀ ದೇವಿಗೆ ಸ್ವರ್ಣ ಮುಖವಾಡ ಸಮರ್ಪಣೆಯು ಗುರುವಾರ ನಡೆಯಿತು. ಬ್ರಹ್ಮಶ್ರೀ ಕುಂಟಾರು ರವೀಶ್ ತಂತ್ರಿಯವರ ಮಾರ್ಗದರ್ಶನದಲ್ಲಿ ಧಾರ್ಮಿಕ ವಿಧಿವಿಧಾನಗಳ ಬಳಿಕ ಉಡುಪಿ ಅದಮಾರು ಮಠಾಧೀಶರಾದ ಶ್ರೀ ವಿಶ್ವ ಪ್ರಿಯ ತೀರ್ಥ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಶ್ರೀದೇವಿಗೆ ಸರ್ಣಮುಖವಾಡವನ್ನು ಸಮರ್ಪಿಸಲಾಯಿತು.

ಈ ಸಂದರ್ಭ ಆಶೀರ್ವವಚನಗೈದ ಶ್ರೀಗಳು ಮಕ್ಕಳಿಗೆ ಎಳೆಪ್ರಾಯದಲ್ಲಿಯೇ ಸಂಸ್ಕಾರ ತಿಳಿಹೇಳುವುದರ ಜತೆಗೆ ತಪ್ಪುದಾರಿ ಹಿಡಿದಾಗ ತಿದ್ದುವ ಕೆಲಸವು ಹೆತ್ತವರಿಂದಾಗಬೇಕು ಎಂದು ನುಡಿದರು. ಭಜನೆಯಿಂದ ವಿಭಜನೆಯಿಲ್ಲ, ಕೇವಲ ನವರಾತ್ರಿಯಲ್ಲದೆ ಪ್ರತಿನಿತ್ಯವು ದುರ್ಗೆಯ ನಾಮಸ್ಮರಣೆ ಮಾಡುವ ಮೂಲಕ ತಮ್ಮ ಜೀವನವನ್ನು ಸುವರ್ಣಮಯಗೊಳಿಸಬೇಕು ಎಂದರು. ದೇವಳದ ಆಡಳಿತ ಸಮಿತಿ ಅಧ್ಯಕ್ಷ ಜೆ.ರವೀಂದ್ರ ನಾಯ್ಕ್, ಗೌರವಾಧ್ಯಕ್ಷ ವಿಶ್ವನಾಥ ನಾಯ್ಕ್ ಕಲ್ಲಾಪು,ಪ್ರಧಾನ ಕಾರ್ಯದರ್ಶಿ ಯು.ದಯಾನಂದ ನಾಯ್ಕ್ ಕುಲಶೇಖರ,ಕಾರ್ಯಾಧ್ಯಕ್ಷ ಶಿವಾನಂದ ನಾಯ್ಕ್ ಸೋಮನಾಥ ಉಳಿಯ, ಕೋಶಾಧಿಕಾರಿ ಧರ್ಮಪಾಲ್ ನಾಯ್ಕ್, ಶ್ರೀ ಅರಸು,ಧೂಮಾವತಿ ಬಂಟ ದೈವಸ್ಥಾನದ ಮಧ್ಯಸ್ಥರಾದ ಎಸ್.ರಾಮ ನಾಯ್ಕ್, ಗಾಳದ ಕೊಂಕಣಿ ಅಭ್ಯುದಯ ಸಂಘದ ಅಧ್ಯಕ್ಷ ನರಸಿಂಹ ನಾಯ್ಕ್ ಹರೇಕಳ,ಉಪಾಧ್ಯಕ್ಷ ರಂಜನ್ ನಾಯ್ಕ್ ಮಣ್ಣಗುಡ್ಡೆ,ಜತೆ ಕಾರ್ಯದರ್ಶಿ ವೆಂಕಟೇಶ್ ಬಂಟ್ವಾಳ,ಕೋಶಾಧಿಕಾರಿ ಚಂದ್ರಶೇಖರ ಬಪ್ಪಾಲ್,ಶ್ರೀ ಸೋಮೇಶ್ವರಿ ಸೌ.ಸ.ಸಂಘದ ಅಧ್ಯಕ್ಷ ಉಮನಾಥ ನಾಯ್ಕ್ ಉಳ್ಳಾಲ,ಶ್ರೀ ಸೋಮೇಶ್ವರಿ ಮಹಿಳಾ ಮಂಡಲದ ಅಧ್ಯಕ್ಷೆ ಕಸ್ತೂರಿ ಎಸ್ ನಾಯ್ಕ್ ,ಮಾಜಿ ಅಧ್ಯಕ್ಷೆ ಹೇಮ ಮಂಕಿಸ್ಟ್ಯಾಂಡ್ ,ಅಜಿತ್ ನಾಯ್ಕ್ ಮುಂಬೈ, ಮೊದಲಾದವರಿದ್ದರು. ಕೋಡಿ ಜಯ ನಾಯ್ಕ್ ಸ್ವಾಗತಿಸಿ ,ವಂದಿಸಿದರು. ಇದೇ ವೇಳೆ ಮಹಾ ಚಂಡಿಕಾ ಹೋಮ, ದೇವಳದ ಪ್ರಧಾನ ಅರ್ಚಕ ಅಶ್ವನಿ ಭಟ್ ಅವರು ದೇವರ ಮಹಾಪೂಜೆ ನೆರವೇರಿಸಿದರು.ನಂತರ ಸಾರ್ವಜನಿಕ ಅನ್ನಸಂತರ್ಪಣೆಯು ಜರಗಿತು.

Exit mobile version