UN NETWORKS
ಉಳ್ಳಾಲ: ಶೀಘ್ರದಲ್ಲೇ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ರಾಜ್ಯದಲ್ಲಿ ಆಡಳಿತ ನಡೆಸಲಿದೆ. ಬಳಿಕ ವಿಶೇಷ ಅನುದಾನವನ್ನು ಕೋಟೆಕಾರು ಗ್ರಾಮಕ್ಕೆ ಬಿಡುಗಡೆಗೊಳಿಸುವ ಮೂಲಕ ಜಿಲ್ಲೆಯಲ್ಲೇ ಮಾದರಿ ಪಟ್ಟಣ ಪಂಚಾಯಿತಿಯಾಗಿ ರೂಪುಗೊಳಿಸಲಾಗುವುದು ಎಂದು ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರು ಹೇಳಿದರು.
ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ಸಂಘ ಸಂಸ್ಥೆಗಳು -ಜನಪ್ರತಿನಿಧಿಗಳು ಜೊತೆಯಾಗಿ ಕಾರ್ಯ ನಿರ್ವಹಿಸುತ್ತಿರುವಂತಹ ಪ್ರದೇಶ ಬಗಂಬಿಲವಾಗಿದೆ. ಪ್ರದೇಶದ ಅಭಿವೃದ್ಧಿಗೆ ಶ್ರಮ ವಹಿಸಿ ಎಲ್ಲರೂ ದುಡಿಯುತ್ತಿರುವ ಕಾರ್ಯ ಶ್ಲಾಘನೀಯ. ಕೋಟೆಕಾರು ಪಟ್ಟಣ ಪಂಚಾಯಿತಿ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಸೊಳ್ಳೆಂಜೀರು ಉದ್ಘಾಟಿಸಿದರು.
ಈ ಸಂದರ್ಭ ಕೋಟೆಕಾರು ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಅನಿಲ್ ಬಗಂಬಿಲ, ಬಗಂಬಿಲ ಶ್ರೀ ಮಹಾದೇವಿ ಮಂದಿರದ ಅಧ್ಯಕ್ಷ ಶೇಖರ ಗಟ್ಟಿ, ಬಗಂಬಿಲ ಶ್ರೀ ಸತ್ಯನಾರಾಯಣ ಮಂದಿರ ಅಧ್ಯಕ್ಷ ಗಣೇಶ್ ಪೂಜಾರಿ, ವೇಣುಗೋಪಾಲ್, ಸುಧಾಕರ್, ಜಲಜಾಕ್ಷಿ, ಸುನಂದಾ, ಲತಾ ಮಧುಕರ್, ಯೋಗಿಣಿ, ರೀತೇಶ್, ಪ್ರದೀಪ್, ನವೀನ್, ವಸಂತ್ ಪೂಜಾರಿ, ನಾರಾಯಣ ಗಟ್ಟಿ, ಬಾಲಕೃಷ್ಣ ಮುಂತಾದವರು ಉಪಸ್ಥಿತರಿದ್ದರು. ಪ್ರವೀಣ್. ಐ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಪಟ್ಟಣ ಪಂಚಾಯಿತಿ ಆದ ನಂತರ, ಅತಿಹೆಚ್ಚು ಅಭಿವೃದ್ಧಿ ಹೊಂದಿದ ವಾರ್ಡು ಬಗಂಬಿಲ ಭಾಗವಾಗಿದೆ. ಈವರೆಗೆ 60 ಲಕ್ಷ ವೆಚ್ಚದ ಕಾಮಗಾರಿ ಬಗಂಬಿಲ ಭಾಗದಲ್ಲಿ ನಡೆದಿದೆ. ಮುಂದೆ 10 ಲಕ್ಷ ದ ಅಭಿವೃದ್ಧಿ ಕಾಮಗಾರಿ ಶೀಘ್ರವೇ ನಡೆಯಲಿದೆ. ಮಹಾದೇವಿ ಮಂದಿರದ ಅಡ್ಡರಸ್ತೆಗೆ ಇಂಟರ್ ಲಾಕ್ ಅಳವಡಿಕೆ ಬಹುದಿನಗಳ ಬೇಡಿಕೆಯಾಗಿತ್ತು. ಅದು ಈಗ ಈಡೇರಿದೆ.
ಅನಿಲ್ ಬಗಂಬಿಲ
ಉಪಾಧ್ಯಕ್ಷ, ಬಗಂಬಿಲ ವಾರ್ಡ್ ಸದಸ್ಯರು
ಕೋಟೆಕಾರು ಪಟ್ಟಣ ಪಂಚಾಯಿತಿ