Site icon Ullalavani

ಯೆನೆಪೋಯ: “ಮೆಡಿಕಲ್ ಆರ್ಟ್ ಗ್ಯಾಲರಿ ಪ್ರದರ್ಶನ” ಉದ್ಘಾಟನೆ

UN NETWORKS

ಯೆನೆಪೋಯ: ಜೀವನದ ಪ್ರತಿಯೊಂದು ಕ್ಷಣಗಳು ಕಲೆಯಾಗಿದೆ. ಬದುಕು, ಆಲೋಚನೆಗಳು ಎಲ್ಲವೂ ಕಲೆ ಆಧಾರಿತವಾಗಿದೆ. ಕಲೆಯಲ್ಲಿಯೂ ವಿಜ್ಞಾನವಿದೆ. ಇದನ್ನು ತೋರಿಸುವಂತಹ ಕೆ¯ಸ ಗ್ರೂಪ್ ಏಸ್ತೇಟ್ ನಿಂದ ಆಗಿದೆ ಎಂದು ಯೆನೆಪೋಯ ಸ್ವಾಯುತ್ತೆ ಆಗಲಿರುವ ವಿಶ್ವವಿದ್ಯಾಲಯದ ಉಪಕುಲಪತಿ ಡಾ| ಎಂ ವಿಜಯಕುಮಾರ್ ಅಭಿಪ್ರಾಯಪಟ್ಟರು.

ಅವರು ದೇರಳಕಟ್ಟೆಯ ಯೆನೆಪೋಯ ಸ್ವಾಯುತ್ತೆಗೊಳ್ಳಲಿರುವ ವಿಶ್ವವಿದ್ಯಾಲಯದ ಯೆಂಡ್ಯುರೆನ್ಸ್ ಝೋನ್ ನಲ್ಲಿ ` ಗ್ರೂಪ್ ಏಸ್ತೇಟ್ ಮೆಡಿಕಲ್ ಆರ್ಟ್ ಗ್ಯಾಲರಿ’ ಡಾ.ಅಖ್ತರ್ ಹುಸೈನ್ ಇವರ ಕೈಚಳಕದಲ್ಲಿ ಬಿಡಿಸಿದ ವೈದ್ಯಕೀಯ ವಿಜ್ಞಾನದ ಕಲಾಕೃತಿಗಳ ಗ್ಯಾಲರಿಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ನಾಸ್ರೀನ್ ಅಬ್ದುಲ್ಲಾ ಕುಂಞ ಯೆನೆಪೋಯ ಉದ್ಘಾಟಿಸಿದರು.
ಗ್ರೂಪ್ ಏಸ್ತೇಟ್ ಇದರ ಮುಖ್ಯಸ್ಥ ಡಾ| ಅಖ್ತರ್ ಹುಸೈನ್ ಮಾತನಾಡಿ, ಪ್ರಸ್ತುತ ಕಾಲದಲ್ಲಿ ಪುಸ್ತಕಗಳಿಗಿಂತ ಚಿತ್ರಗಳು ಆಕರ್ಷಕವಾಗಿರುತ್ತದೆ. ವೈದ್ಯಕೀಯ ಕಲೆಯನ್ನು ರಚಿಸಿರುವ ಮೂಲಕ ಯುವ ವೈದ್ಯರಿಗೆ ಸುಲಭವಾಗಿ ಪಾಠಕ್ಕಿಂತ ಚಿತ್ರಗಳು ಅರ್ಥವಾಗುವುದು. ವಿಶ್ವವಿದ್ಯಾಲಯಗಳಲ್ಲಿ ಇಂತಹ ಆರ್ಟ್ ಗ್ಯಾಲರಿಗಳು ಅನನ್ಯ. ವಿದ್ಯಾರ್ಥಿಗಳು ಕೌಶಲ್ಯವೃದ್ಧಿಗೆ ಕಲೆಯೂ ಒಂದು ಸಾಧನ. ಇದನ್ನು ಬೆಳೆಸುವ, ವಿದ್ಯಾರ್ಥಿಗಳಲ್ಲಿ ಅಡಗಿರುವ ಕಲೆಯನ್ನು ಹೊರತರುವ ಕೆಲಸ ಗ್ರೂಪ್ ಏಸ್ತೇಟ್ ನಿಂದ ಆಗಲಿದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಸ್ರೀನ್ ಯೆನೆಪೋಯ ಅಬ್ದುಲ್ಲಾ ಕುಂಞ ಮಾತನಾಡಿ, ಪ್ರತಿಯೊಬ್ಬರಲ್ಲೂ ಕಲೆ ಅಡಕವಾಗಿರುತ್ತದೆ. ಇದನ್ನು ಹೊರಚೆಲ್ಲಲು ಮತ್ತು ಕೌಶಲ್ಯವೃದ್ಧಿಯನ್ನು ಬೆಳೆಸುವ ಮೂಲಕ ವಿದ್ಯಾರ್ಥಿಗಳ ಚಿಂತನೆಗಳಲ್ಲಿ ಕಲೆಯ ಗೌರವ ಹೆಚ್ಚಾಗಲಿ ಎಂದು ಹಾರೈಸಿದರು.

ಕುಲಸಚಿವ ಡಾ| ಗಂಗಾಧರ ಸೋಮಯಾಜಿ ಉಪಸ್ಥಿತರಿದ್ದರು.

Exit mobile version