Site icon Ullalavani

ಓಲ್ಡ್ ಸ್ಟೂಡೆಂಟ್ಸ್ ಅಸೋಸಿಯೇಶನ್ ಹಯಾತುಲ್ ಇಸ್ಲಾಂ ಮದರಸ ಅಧ್ಯಕ್ಷರಾಗಿ ಆಯ್ಕೆ

UN NETWORKS

ಉಳ್ಳಾಲ: ಅಸ್ಸಾಲಾಮು ಅಲೈಕುಮ್ ನಮ್ಮೆಲ್ಲರ ಅಭಿಮಾನದ ಬದ್ರಿಯ ಜುಮಾ ಮಸೀದಿ ಇದರ ಅಧೀನದಲ್ಲಿ ಕಾರ್ಯಚರಿಸುತ್ತಿರುವ ಹಯಾತುಲ್ ಇಸ್ಲಾಂ ಮದರಸ ಇದರ ಹಳೆ ವಿದ್ಯಾರ್ಥಿಗಳು ಮಸೀದಿ,ಮದರಸ ಅಭಿವೃದ್ಧಿ ಹಾಗೂ ಸಮಾಜದ ಹಿತಗೋಸ್ಕರ ಕಟ್ಟಿ ಬೆಳಸಿದ ಸಂಸ್ಥೆ ಯಾದ ಓಲ್ಡ್ ಸ್ಟೂಡೆಂಟ್ ಅಸೋಸಿಯೇಷನ್ ಹಯಾತುಲ್ ಇಸ್ಲಾಂ ಮದರಸ ದೇರಳಕಟ್ಟೆ ಇದರ 2ನೇ ಮಹಾ ಸಭೆಯು ಸಂಸ್ಥೆಯ ಕಚೇರಿಯಲ್ಲಿ ಕೆ.ಎಂ ರಶೀದ್ ರವರ ಅಧ್ಯಕ್ಷತೆ ಯಲ್ಲಿ ನಡೆಯಿತು.

ಸದರ್ ಉಸ್ತಾದ್ ದುವ ದೊಂದಿಗೆ ಆರಂಭಗೊಂಡಿತು ಅಶ್ರಫ್ ಡಿ.ಎ ಸ್ವಾಗತಿಸಿ ವಾರ್ಷಿಕ ವರದಿ ಮಂಡಿಸಿದರು ಶಿಹಾಬುದ್ದಿನ್ ಡಿ ಲೆಕ್ಕ ಪತ್ರ ಮಾಡಿಸಿದರು. ಸೇರಿದ ಸದಸ್ಯರು ಸಲಹೆ ಸೂಚನೆಗಳನ್ನು ನೀಡಿದರು. ಕೆ.ಎಂ ರಶೀದ್ ರವರು ಅಧ್ಯಕ್ಷ ಭಾಷಣ ಮಾಡಿದರು. 2018-2019ನೇ ಸಾಲಿನ ಕಾರ್ಯಕಾರಿ ಸಮಿತಿ ಸದಸ್ಯರಾಗಿ 15 ಮಂದಿ ಯನ್ನು ಆಯ್ಕೆ ಮಾಡಲಾಯಿತು. ಈ ಪೈಕಿ ಗೌರವಾಧ್ಯಕ್ಷರಾಗಿ ಅಬ್ದುಲ್ ಆರ್ ಅಹ್ಮದ್ ಶೇಟ್, ಯಾಸರ್ ಡಿ ರವರನ್ನು ಅಧ್ಯಕ್ಷರಾಗಿ, ಇಕ್ಬಾಲ್ ಎಚ್ ಆರ್ ರವರನ್ನು ಉಪಾಧ್ಯಕ್ಷ ರಾಗಿ, ಶಿಹಾಬುದ್ದಿನ್ .ಡಿ ರವರನ್ನು ಪ್ರ.ಕಾರ್ಯದರ್ಶಿ ಯಾಗಿ, ಇರ್ಷಾದ್ ಟಿ ಮತ್ತು ಅಬ್ದುಲ್ ನಾಸಿರ್ ರವರನ್ನು ಜೊ. ಕಾರ್ಯದರ್ಶಿ ಯಾಗಿ ,ಕಲಂದರ್ ಶಾಫಿ ರವರನ್ನು ಖಜಾಂಜಿ ಯಾಗಿ , ಡಿ.ಎ.ಅಶ್ರಫ್ ಲೆಕ್ಕಪರಿಶೋಧಕರಾಗಿ ಹಾಗೂ ರಶೀದ್. ಕೆ.ಎಂ , ನಾಸಿರ್ ಡಿ .ಎ,ರಿಯಾಝ್.ಡಿ.ಎಂ,ಬಶೀರ್ , ಕಲಂದರ್.ಡಿ, ಇಸಾಕ್. ಡಿ,ಆಶಿಕ್,ರಫೀಕ್ ರವರನ್ನು ಸದಸ್ಯರಾಗಿ ಆಯ್ಕೆ ಮಾಡಲಾಯಿತು.

Exit mobile version