Site icon Ullalavani

ಪಂಡಿತ್ಹೌಸ್: ಮುನ್ನೂರು ಪಂ. ಅಧ್ಯಕ್ಷ ಉಪಾಧ್ಯಕ್ಷೆ ಭಾವಚಿತ್ರಕ್ಕೆ ಹಾನಿ


 

ಮುನ್ನೂರು: ಅಭಿನಂದನೆ ಕೋರಿ ಹಾಕಲಾದ ಬ್ಯಾನರಲ್ಲಿದ್ದ ಮುನ್ನೂರು ಪಂಚಾಯಿತಿ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷೆ ಭಾವಚಿತ್ರಕ್ಕೆ ಕಿಡಿಗೇಡಿಗಳು ಹಾನಿಗೊಳಿಸಿರುವ ಘಟನೆ ಪಂಡಿತ್ಹೌಸಿನಲ್ಲಿ ನಡೆದಿದೆ.


ಮುನ್ನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಮತ್ತು ಉಪಾಧ್ಯಕ್ಷೆ ಐರಿನ್ ಡಿಸೋಜಾ ಅವರ ಭಾವಿತ್ರಗಳಿರುವ ಜಾಗವನ್ನು ಕಿಡಿಗೇಡಿಗಳು ಹರಿದು ಹಾಕಿದ್ದಾರೆ. ತೊಕ್ಕೊಟ್ಟುವಿನಿಂದ ಮುಡಿಪು ತನಕ ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆಗೊಳಿಸಿದ ಕ್ಷೇತ್ರದ ಶಾಸಕ ಹಾಗೂ ಸಚಿವ ಯು.ಟಿ.ಖಾದರ್ ಅವರಿಗೆ ಅಭಿನಂದನೆ ಕೋರಿ ಪಂಡಿತ್ ಹೌಸ್ ಜಂಕ್ಷನ್ನಿನಲ್ಲಿ ಮುನ್ನೂರು ಪಂಚಾಯಿತಿ ವತಿಯಿಂದ ಬ್ಯಾನರ್ ಅಳವಡಿಸಲಾಗಿತ್ತು. ಬ್ಯಾನರಿನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಸಚಿವ ಯು.ಟಿ.ಖಾದರ್, ಜಿ.ಪಂ ಸದಸ್ಯ ಎನ್.ಎಸ್.ಕರೀಂ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ್ ಉಳ್ಳಾಲ್, ಮುನ್ನೂರು ಪಂಚಾಯಿತಿ ಸದಸ್ಯರಾದ ಪುಷ್ಪಲತಾ ಅಂಚನ್, ಹಸನಬ್ಬ, ವಿಲ್ಫ್ರೆಡ್ ಡಿಸೋಜಾ ಸಹಿತ ಅಧ್ಯಕ್ಷ ಉಪಾಧ್ಯಕ್ಷರ ಭಾವಚಿತ್ರಗಳನ್ನು ಹಾಕಲಾಗಿತ್ತು. ಆದರೆ ಕಿಡಿಗೇಡಿಗಳು ಉಳಿದವರ ಚಿತ್ರಕ್ಕೆ ಹಾನಿಗೊಳಿಸದೇ ಕೇವಲ ಅಧ್ಯಕ್ಷ-ಉಪಾಧ್ಯಕ್ಷೆಯ ಚಿತ್ರಕ್ಕೆ ಹಾನಿಗೊಳಿಸಿರುವುದು ಇಬ್ಬರ ಮೇಲಿನ ದ್ವೇಷದಿಂದ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

Exit mobile version