ಬದ್ರಿಯಾ ಯಂಗ್ ಮೆನ್ಸ್ ಅಸೋಸಿಯೇಷನ್ ದೇರಳಕಟ್ಟೆ ಅಧ್ಯಕ್ಷರಾಗಿ ಫೈಝಲ್ ಡಿ.ಎಂ ಆಯ್ಕೆ
UllalaVani
UN NETWORKS
ಉಳ್ಳಾಲ:ಬದ್ರಿಯಾ ಯಂಗ್ ಮೆನ್ಸ್ ಅಸೋಸಿಯೇಷನ್ ದೇರಳಕಟ್ಟೆ ಎಂಬ ಹೆಸರಿನಲ್ಲಿ ಸಮಾಜ ಸೇವೆ.ಹಾಗೂ ಸಮುದಾಯದ ಬಡ ನಿರ್ಗತಿಕ ಹೆಣ್ಣು ಮಕ್ಕಳ ಉಚಿತ ವಿವಾಹ ಕಾರ್ಯಕ್ರಮದ ಗುರಿಯನ್ನಿಟ್ಟುಕೊಂಡು ನೂತನ ಸಂಘಟನೆಗೆ ಚಾಲನೆಯನ್ನು ನೀಡಲಾಯಿತು.
ಇದರ ನೂತನ ಅಧ್ಯಕ್ಷರಾಗಿ ಫೈಝಲ್ ಡಿ.ಎಂ ಆಯ್ಕೆಗೊಂಡಿದ್ದಾರೆ. ದೇರಳಕಟ್ಟೆ ಕಚೇರಿಯಲ್ಲಿ ಜನಾಬ್ ಆಶಿಖ್ ಉಳ್ಳಾಲ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಂಘಟನೆಯ ಗೌರವಾದ್ಯಕ್ಷರಾಗಿ ಜನಾಬ್ ಹರ್ಷಾದ್ ಕುದ್ರೋಳಿ,ಉಪಾಧ್ಯಕ್ಷರುಗಳಾಗಿ ಹಾರಿಸ್ ಬದ್ಯಾರ್ಮು,ಝಮ್ಮಿಲ್ ಕಣ್ಣೂರ್ನೌ,ಫಾಲ್.ಬಿ. ಕಲಂದರ್ ಹಾಗೂ ಪ್ರದಾನ ಕಾರ್ಯದರ್ಶಿಯಾಗಿ ನೌಷಾದ್ ಬದ್ಯಾರ್, ಜೊತೆ ಕಾರ್ಯದರ್ಶಿಯಾಗಿ ಹಫೀಝ್ ಡಿ.ಎಂ.,ವರ್ಕಿಂಗ್ ಕಾರ್ಯದರ್ಶಿಯಾಗಿ ಪವಾಝ್ ದೇರಳಕಟ್ಟೆ,ಕೋಶಾಧಿಕಾರಿಯಾಗಿ ಆಶಿಖ್ ಉಳ್ಳಾಲ,ಹಾಗೂ 30 ಮಂದಿ ಸದಸ್ಯರ ಕಾರ್ಯಕಾರಿ ಸಮಿತಿಯನ್ನು ಆಯ್ಕೆಗೊಳಿಸಲಾಯಿತು.ಸಭೆಯಲ್ಲಿ ಸಂಘಟನೆಯ ನಿರ್ದೇಶಕರಾದ ಜನಾಬ್ ಸಯ್ಯದ್ ಅಲಿ.ಹನೀಫ್ ಜಿ.ಎಂ K.S.A ಘಟಕದ ಸದಸ್ಯರಾದ ಮೊಹಮ್ಮದ್ ಕಲಂದರ್ಜ, ಜನಾಬ್ ಅಝ್ಮಲ್ ಶಾಫಿ,ಸಫ್ರಾನ್,ಆಶಿಕ್ ಜಲಾಲ್ ಬಾಗ್, ಮುಂತಾದವರು ಉಪಸ್ಥಿತರಿದ್ದರು.