Site icon Ullalavani

ಭಾರತೀಯ ಅಧ್ಯಾತ್ಮಿಕ ಚಿಂತನೆಗೆ ಇಡೀ ಜಗತ್ತು ಗೌರವ ನೀಡಿದೆ : ಪ್ರೊ.ಎಂ.ಬಿ.ಪುರಾಣಿಕ್

UN NETWORKS

ತಲಪಾಡಿ: ಭಾರತದ ಈ ಪುಣ್ಯಭೂಮಿಯಲ್ಲಿ ರಕ್ಷಣೆಗೆ ದುರ್ಗೆ, ಸಮೃದ್ಧಿಗೆ ಲಕ್ಷ್ಮೀ, ಜ್ಞಾನಕ್ಕೆ ಸರಸ್ವತಿ ಸೇರಿ ಉತ್ಕಟಗೊಳ್ಳುವ ಆದಿಶಕ್ತಿಯ ಆರಾಧನೆಯೊಂದಿಗೆ ಹತ್ತು ದಿನಗಳ ಕಾಲ ಶ್ರದ್ಧಾಭಕ್ತಿಯಿಂದ ಪೂಜಿಸುವ ನವರಾತ್ರಿ ಹಬ್ಬವು ನಾಡಿನೆಲ್ಲೆಡೆ ಚೈತನ್ಯದ ಅಲೆ ಬೀಸಿದೆ.

ನಾವೆಲ್ಲರೂ ಯಾವುದೇ ಫಲಾಪೇಕ್ಷೆಯಿಲ್ಲದೆ ಭಗವಂತನ ಆರಾಧನೆಯನ್ನು ಪ್ರತಿಯೊಂದು ಜೀವಿಯಲ್ಲೂ ಅಂತರ್ಗತವಾಗಿರುವ ದೇವಿಯನ್ನು ಪೂಜಿಸುವ ಮೂಲಕ ಮಾಡಬೇಕು. ವ್ಯಕ್ತಿತ್ವದ ಪರಿಪೂರ್ಣತೆಗೆ ಭಗವಂತನ ಸ್ಮರಣೆಯನ್ನು ಮಾಡುತ್ತಾ ಆ ಮೂಲಕ ಬುದ್ದಿಯ ಜೊತೆಗೆ ನಮ್ಮ ಸಂಸ್ಕಾರವೂ ಬೆಳೆಯಬೇಕೆಂದು ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷರಾರ ಪ್ರೊ.ಎಂ.ಬಿ.ಪುರಾಣಿಕ್ ಅಭಿಪ್ರಾಯಪಟ್ಟರು. ಅವರು ತಲಪಾಡಿಯ ಶಾರದಾ ವಿದ್ಯಾನಿಕೇತನದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ಹಮ್ಮಿಕೊಳ್ಳಲಾದ ಶಾರದಾ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ವಿದ್ಯಾರ್ಥಿಗಳನ್ನು, ಉದ್ದೇಶಿಸಿ ಮಾತನಾಡಿದರು.

ವಿಶೇಷವಾಗಿ ಅಲಂಕರಿಸಲಾದ ವೇದಿಕೆಯಲ್ಲಿ ಪ್ರತಿಷ್ಠಾಪಿಸಿದ ಶಾರದಾ ದೇವಿಯನ್ನು ಅಷ್ಟವಧಾನ ಸೇವೆಯ ಮೂಲಕ ಪೂಜಿಸಲಾಯಿತು. ಶಾಲೆಯ ವಿದ್ಯಾರ್ಥಿಗಳಿಂದ ಸಾಮೂಹಿಕ ಭಗವದ್ಗೀತೆಯ ಪಠಣ ಹಾಗೂ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು, ಶಿಕ್ಷಕ ಹಾಗೂ ಶಿಕ್ಷಕೇತರ ವರ್ಗದವರಿಂದ ಭಜನಾ ಕಾರ್ಯಕ್ರಮವು ನೆರವೇರಿತು. ಈ ಸಂದರ್ಭದಲ್ಲಿ ಶಾಲಾ ಹೊಸ ವೆಬ್ ಸೈಟ್ www.sharadavidyanikethana.com ನ್ನು ಶಾಲಾ ಅಧ್ಯಕ್ಷರಾರ ಪ್ರೊ.ಎಂ.ಬಿ.ಪುರಾಣಿಕ್ ಅನಾವರಣಗೊಳಿಸಿದರು.

ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲರಾದ ಸುಷ್ಮ ದಿನಕರ್, ಶಾರದಾ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ| ಬಾಲಕೃಷ್ಣ ಭಾರದ್ವಾಜ್, ಡೇ ಬೋರ್ಡಿಂಗ್ ನ ಪ್ರಾಂಶುಪಾಲರಾದ ಲತಾಂಜಲಿ ರೈ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಿನಾಯಕ್ ಬಿ.ಜಿ., ಶಾರದಾ ಆಯುರ್ವೇದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ರವಿಗಣೇಶ್, ಹಿರಿಯ ತರಬೇತುದಾರ ಸತೀಶ್ ಆರ್, ಆಡಳಿತಾಧಿಕಾರಿ ವಿವೇಕ್ ತಂತ್ರಿ, ಉಪಪ್ರಾಂಶುಪಾಲರಾದ ಮೋಹನ್ ದಾಸ್, ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕ ಹಾಗೂ ಶಿಕ್ಷಕೇತರ ಬಂಧುಗಳು ಉಪಸ್ಥಿತರಿದ್ದರು.

ಸಂಸ್ಕೃತ ಅಧ್ಯಾಪಕರಾದ ಶುಭಕರ್ ಹಾಗೂ ಕೃಷ್ಣಮೂರ್ತಿ ಪೂಜಾ ಕಾರ್ಯಕ್ರಮವನ್ನು ನಡೆಸಿದರು.

Exit mobile version