Site icon Ullalavani

ಎಸ್ ವೈ ಎಸ್ ಉಳ್ಳಾಲ ಸೆಂಟರ್ ನೂತನ ಪದಾಧಿಕಾರಿಗಳ ಆಯ್ಕೆ

UN NETWORKS

ಉಳ್ಳಾಲ : ಎಸ್ ವೈ ಎಸ್ ಉಳ್ಳಾಲ ಸೆಂಟರ್ ಆಶ್ರಯದಲ್ಲಿ ಸೆಂಟರ್ ಅಸೆಂಬ್ಲೇಜ್ ಹಾಗೂ  ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ ಉಳ್ಳಾಲ ಮಾಸ್ತಿಕಟ್ಟೆಯ ಇಸ್ಲಾಮಿಕ್ ನಾಲೇಜ್ ಸೆಂಟರಿನಲ್ಲಿ ಇತ್ತೀಚೆಗೆ ನಡೆಯಿತು.ಸೆಂಟರ್ ಅಧ್ಯಕ್ಷರಾದ ಸಯ್ಯಿದ್ ಜಲಾಲ್ ತಂಗಲ್ ಅಧ್ಯಕ್ಷತೆ ವಹಿಸಿದರು.ಮಾಧ್ಯಮ ವಕ್ತಾರ ನವಾಝ್ ಸಖಾಫಿ ಉಳ್ಳಾಲ ಕಾರ್ಯಕ್ರಮ ಉದ್ಘಾಟಿಸಿದರು. ಸೆಂಟರ್ ಉಪಾಧ್ಯಕ್ಷರಾದ ಬಶೀರ್ ಅಹ್ಸನಿ ತೋಡಾರ್ ತರಗತಿ ನಡೆಸಿದರು. ಸೆಂಟರ್ ಸಾಂತ್ವನ ವಿಭಾಗದ ಚೇರಮಾನ್ ಅಲ್ತಾಫ್ ಕುಂಪಲ ಪ್ರಾಸ್ತಾವಿಕವಾಗಿ ಮಾತನಾಡಿದರು.

ನಂತರ ಸೆಂಟರ್ ಸಮಿತಿಯನ್ನು ವಿಸರ್ಜಿಸಿ ನೂತನ ಸಮಿತಿಯನ್ವು ಆಯ್ಕೆ ಮಾಡಲಾಯಿತು.ಅಧ್ಯಕ್ಷರಾಗಿ ಸಯ್ಯಿದ್ ಜಲಾಲ್ ತಂಗಲ್ ಅಳೇಕಲ ಪುನರಾಯ್ಕೆಯಾದರು. ಉಪಾಧ್ಯಕ್ಷರುಗಳಾಗಿ ಬಿ.ಜಿ ಹನೀಫ್ ಹಾಜಿ ಉಳ್ಳಾಲ, ಬಶೀರ್ ಅಹ್ಸನಿ ತೋಡಾರ್, ಅಬ್ದುಸ್ಸಮದ್ ಹಳೆಕೋಟೆ, ಪ್ರಧಾನ ಕಾರ್ಯದರ್ಶಿಯಾಗಿ ಬಶೀರ್ ಸಖಾಫಿ ಉಳ್ಳಾಲ, ಜತೆ ಕಾರ್ಯದರ್ಶಿಗಳಾಗಿ ಅಲ್ತಾಫ್ ಕುಂಪಲ, ನೌಶಾದ್ ಕೋಡಿ, ಇಲ್ಯಾಸ್ ಕೈಕೋ, ಕೋಶಾಧಿಕಾರಿಯಾಗಿ ಇಸಾಕ್ ಪೇಟೆ, ಮಾಧ್ಯಮ ಕಾರ್ಯದರ್ಶಿಯಾಗಿ ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ, ಲೆಕ್ಕ ಪರಿಶೋಧಕರಾಗಿ ಹೈದರ್ ಮುಕ್ಕಚ್ಚೇರಿ, ಸಂಚಾಲಕರಾಗಿ ಅಬ್ದುರ್ರಶೀದ್ ಹಾಜಿ ಸುಂದರಿಭಾಗ್ ಹಾಗು 31 ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.

ಸೆಂಟರ್ ಹಾಲಿ ಉಪಾಧ್ಯಕ್ಷರಾದ ಬಿ.ಜಿ ಹನೀಫ್ ಹಾಜಿ ಉಳ್ಳಾಲ ಸ್ವಾಗತಿಸಿ ನೂತನ ಪ್ರಧಾನ ಕಾರ್ಯದರ್ಶಿ ಬಶೀರ್ ಸಖಾಫಿ ಉಳ್ಳಾಲ ಧನ್ಯವಾದಗೈದರು.

Exit mobile version