UN NETWORKS
ಉಳ್ಳಾಲ: ಯೇನಪೋಯ ಡೀಮ್ಡ್ ವಿಶ್ವವಿದ್ಯಾಲಯ ಇದರ ದೈಹಿಕ ಶಿಕ್ಷಣ ವಿಭಾಗ ವತಿಯಿಂದ ಯೇನಪೋಯ ಕ್ರೀಡಾಂಗಣದಲ್ಲಿ ನಡೆದ ದಕ್ಷಿಣ ಭಾರತ ಮಟ್ಟದ ಅಂತರ್ ಕಾಲೇಜು 5ನೇ ವಾಲಿಬಾಲ್ ಪಂದ್ಯದಲ್ಲಿ ನಿಟ್ಟೆ ಕಾರ್ಕಳ ಪ್ರಥಮ ಸ್ಥಾನಿಯಾಗಿ, ನಿಟ್ಟೆ ಡೀಮ್ಡ್ ವಿಶ್ವವಿದ್ಯಾಲಯ ದ್ವಿತೀಯ ಪ್ರಶಸ್ತಿಗಳಿಸಿತು.ಮತ್ತು 11ನೇ ಬಿ.ಎಸ್.ಕುಮಾರ್ ಬಾಸ್ಕೆಟ್ ಬಾಲ್ ಪಂದ್ಯಾಟದಲ್ಲಿ ಪುರುಷರ ವಿಭಾಗದಲ್ಲಿ ಯೇನಪೋಯ ವಿಶ್ವವಿದ್ಯಾಲಯ ಪ್ರಥಮ ಸ್ಥಾನಿಯಾಗಿ, ನಿಟ್ಟೆ ಕಾರ್ಕಳ ದ್ವಿತೀಯ ಪ್ರಶಸ್ತಿಗಳಿಸಿತು. ಹುಡುಗಿಯರ ವಿಭಾಗದಲ್ಲಿ ಯೇನಪೋಯ ಡೀಮ್ಡ್ ವಿಶ್ವವಿದ್ಯಾಲಯ ತಂಡ ಚಾಂಪಿಯನ್ ಶಿಪ್ ಪಡೆಯಿತು.
11ನೇ ಬಿ.ಎಸ್.ಕುಮಾರ್ ಸ್ಮಾರಕ ಬಾಸ್ಕೆಟ್ ಬಾಲ್ ಪಂದ್ಯಾಕೂಟದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾರತೀಯ ಭಾಸ್ಕೆಟ್ ಬಾಲ್ ತಂಡದ ಆಟಗಾರ, ಕೊಚ್ಚೀನ್ ಕಸ್ಟಮ್ ಅಧಿಕಾರಿ ಯುಡ್ರಿಕ್ ಪಿರೇರಾ, ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ. ಕಿಶೋರ್ ಕುಮಾರ್ ಸಿ.ಕೆ, ಸಮಾರಂಭದ ಅದ್ಯಕ್ಷತೆಯನ್ನು ಯೇನಪೋಯ ಡೀಮ್ಡ್ ವಿಶ್ವವಿದ್ಯಾನಿಲಯದ ಉಪ ಕುಲಪತಿಗಳಾದ ಡಾ.ಎಮ್.ವಿಜಯಕುಮಾರ್ ವಹಿಸಿದ್ದರು.
ಯೇನಪೋಯ ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ, ಕ್ರೀಡಾ ಮುಖ್ಯಸ್ಥರಾದ ಮಹಮ್ಮದ್ ಬಾವ, ಬಿ.ಎಸ್.ಎ ಕುಮಾರ್ ಕುಟುಂಬದ ಸದಸ್ಯ ಅಬ್ದುಲ್ ರೆಹಮಾನ್ ಹಾಗೂ ಯೇನಪೋಯ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕಿ ಶಿಲ್ಪಶ್ರೀ ಉಪಸ್ಥಿತರಿದ್ದರು.