UN NETWORKS
ಪುತ್ತೂರು: ಇದು ಒಂದು ತಾಯಿಯ ಕರುಣಾಜನಕ ಕಥೆ. ಪುತ್ತೂರು ತಾಲೂಕಿನ ಐತೂರು ಗ್ರಾಮದ ಮೂಜೂರು ಎಂಬಲ್ಲಿ ವಾಸಿಸುತ್ತಿರುವ ದಿವಂಗತ ಮೊಹಮ್ಮದ್ ಕಾಸಿಂ ರವರ ಪತ್ನಿ ಉಮೈಬಾ ಅವರ ಪರಿಸ್ಥಿತಿ ನೋಡಿದರೆ ಎಂಥವರ ಕಣ್ಣಲ್ಲೂ ನೀರು ಚಿಮ್ಮದಿರದು. ಕಳೆದ ಹತ್ತು ವರ್ಷಗಳಿಂದ ಗಂಡನನ್ನು ಕಳೆದುಕೊಂಡ ಉಮೈಬಾ ಕಷ್ಟದಿಂದ ಜೀವನ ಸಾಗಿಸುತ್ತಿರುವ ನಿರ್ಗತಿಕ ಕುಟುಂಬ. ಎರಡು ವರ್ಷದ ಹಿಂದೆ ತನ್ನ ಮನೆಯ ಹೊರಗೆ ಬಟ್ಟೆ ಒಣ ಹಾಕಲು ಮನೆಯ ಅಂಗಳಕ್ಕೆ ಹೋದಾಗ ಬಿದ್ದು ಗಾಯಗೊಂಡ ಉಮೈಬಾ ರವರ ಕಾಲು ಮುರಿದ ಪರಿಣಾಮವಾಗಿ ಶಸ್ತ್ರ ಚಿಕಿತ್ಸೆಯ ಮೂಲಕ ರಾಡ್ ಹಾಕಲಾಯಿತು. ತದನಂತರ ಮೂರು ಶಸ್ತ್ರ ಚಿಕಿತ್ಸೆಯೂ ನಡೆಯಿತು. ಸೊಂಟದ ಎಲುಬು ತೆಗೆದು ಕಾಲಿಗೆ ಇಡುವಂತೆ ವೈದ್ಯರು ತಿಳಿಸಿದಾಗ ಅದಕ್ಕೂ ಒಪ್ಪಿಕೊಂಡು ಚಿಕಿತ್ಸೆ ನಡೆಸಿದರು. ಆದರೆ ಯಾವುದೇ ಚಿಕಿತ್ಸೆಯಿಂದಲೂ ಫಲ ದೊರೆಯಲಿಲ್ಲ. ನಂತರ ಆರ್ಥಿಕ ಮುಗ್ಗಟ್ಟಿನಿಂದಾಗಿ ಮನೆಯಲ್ಲೇ ಉಳಿದುಕೊಂಡ ಉಮೈಬಾ ಅವರಿಗೆ ಊರವರು ಸೇರಿ ಸಣ್ಣ ಮನೆಯೊಂದನ್ನು ಕಟ್ಟಿಸಿ, ಧನಸಹಾಯ ಕೂಡಾ ಮಾಡಿದರು.
ಪ್ರಸ್ತುತ ಕಾಲಿನಲ್ಲಿ ರಾಡ್ ಇರುವ ನೋವಿನಜೊತೆಗೆ ದೇಹವಿಡೀ ಗಾಯದಿಂದಾಗಿ ಶರೀರವಿಡೀ ತುರಿಕೆಯಿಂದ ಕೂಡಿದ ತಾಯಿಯ ಈ ರೋಧನವು ನೋಡಲಸಾಧ್ಯ. ನೋವಿನೊಂದಿಗೆ ನರಳುವ ತಾಯಿ ತುರಿಸುವಾಗ ಶರೀರವಿಡೀ ರಕ್ತ ಸೋರಲು ಪ್ರಾರಂಭವಾಗುತ್ತದೆ. ಅತ್ತ ತನಗೆ ಚಿಕಿತ್ಸೆ ಮುಂದುವರಿಸಲಾಗದೇ ಇತ್ತ ಮಕ್ಕಳ ಪಾಲನೆ ಮಾಡಲಾರದೇ ಚಡಪಡಿಸುತ್ತಿರುವ ಈ ಅಸಹಾಯಕ ತಾಯಿಗೆ ಕೂಡಲೇ ಅವರಿಗೆ ಚಿಕಿತ್ಸೆ ಅಗತ್ಯವಿದ್ದು, ದಾನಿಗಳ ಮೊರೆ ಹೋಗಲಲ್ಲದೇ ಬೇರೆ ದಾರಿಯಿಲ್ಲದಾಗಿದೆ.ಆದುದರಿಂದ ನಮ್ಮ ಹೆತ್ತ ತಾಯಿಯ ಸ್ಥಾನದಲ್ಲಿರುವ ಈ ನಿರ್ಗತಿಕ ತಾಯಿ ಕೊಡುಗೈ ದಾನಿಗಳ ಸಹಕಾರವನ್ನು ಎದುರು ನೋಡುತ್ತಿದ್ದು, ಈ ತಾಯಿಗೆ ನೆರವಾಗಬೇಕಾಗಿ ತಮ್ಮಲ್ಲೆರಲ್ಲೂ ವಿನಮ್ರವಾಗಿ ವಿನಂತಿಸುತ್ತಿದ್ದೇನೆ.
ಈ ತಾಯಿಯ ಕುರಿತ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.
Bank Name: Vijaya Bank
Account holder name: Umaiba
Account No.: 116201011000119
Branch: Nettana
IFS Code: VIJB0001162