Site icon Ullalavani

ಕರ್ನಾಟಕ ರಾಜ್ಯ ಟಿಪ್ಪು ಸುಲ್ತಾನ್ ನ ಸಭೆ

UN NETWORKS

ಉಳ್ಳಾಲ: ಕರ್ನಾಟಕ ರಾಜ್ಯ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾ ವೇದಿಕೆ ಇದರ ಸಂಸ್ಥಾಪಕರು, ರಾಜ್ಯಾಧ್ಯಕ್ಷರಾದ ಜನಾಬ್ ಟಿಪ್ಪು ಖಾಸೀಂ ಅಲಿಯವರು ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರನ್ನಾಗಿ ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ ಯವರನ್ನು ನೇಮಕ ಮಾಡಿರುತ್ತಾರೆ.

ರಾಜ್ಯಾಧ್ಯಕ್ಷರ ಆದೇಶದ ಮೇರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ನಾಯಕರೊಂದಿಗೆ ಸಮಾಲೋಚನೆ ನಡೆಸಿ ಸಲಹೆ ಸೂಚನೆಗಳನ್ನು ಪಡೆದು ಮಂಗಳೂರಿನ ಡಾನ್ ಬಾಸ್ಕೊ ಸಭಾಂಗಣದಲ್ಲಿ ಜಿಲ್ಲೆಯ ಕೆಲವು ಸಾಮಾಜಿಕ ಹಾಗೂ ರಾಜಕೀಯವಾಗಿಯೂ ಕೆಲಸ ಮಾಡುವ ವ್ಯಕ್ತಿಗಳನ್ನು ಕರೆದು ಸಭೆಯನ್ನು ನಡೆಸಿ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯನ್ನು ಎಲ್ಲರ ಸಹಾಯದೊಂದಿಗೆ ರಚಿಸಿ ಜನರ ಜಿಲ್ಲಾಧ್ಯಕ್ಷರಾದ ಇಸ್ಮಾಯಿಲ್ ಶಾಫಿ ಯವರು ಜಿಲ್ಲಾ ಸಮಿತಿಗೆ ಪ್ರಧಾನ ಕಾರ್ಯದರ್ಶಿಯಾಗಿ ರಫೀಕ್ ಪಾಣೇಲ, ಕೋಶಾಧಿಕಾರಿಯಾಗಿ ನಝೀರ್ ಸಾಮಣಿಗೆ, ಜಿಲ್ಲಾ ಸಂಚಾಲಕರಾಗಿ ಹನೀಫ್ ಮಲಾರ್, ಮಾದ್ಯಮ ಪ್ರತಿನಿಧಿಯಾಗಿ ಸೋಶಿಯಲ್ ಫಾರೂಕ್ ಉಳ್ಳಾಲ್, ಹಿರಿಯ ಉಪಾಧ್ಯಕ್ಷರಾಗಿ ವಿಷ್ಣುಮೂರ್ತಿ ಬಟ್ಟ್ ಕೊಟ್ಟಾರ, ಉಪಾಧ್ಯಕ್ಷರಾಗಿ S ಹಸನಬ್ಬ ಪರಂಗಿಪೇಟೆ ಮತ್ತು ಅಬ್ಬಾಸ್ ತಾಲೀಮ್ ಬೋಳಾರ್, ಕಾರ್ಯದರ್ಶಿಯಾಗಿ K.S ಅಬೂಬಕ್ಕರ್ ಪಲ್ಲ ಮಜಲು, ಸಂಘಟನಾ ಕಾರ್ಯದರ್ಶಿಗಳಾಗಿ ಯೂಸುಫ್ ಉಚ್ಚಿಲ್ ಹಾಗೂ ಅಝೀಝ್ ಕುತ್ತಾರ್, ಹಿರಿಯ ಸಲಹೆಗಾರರಾಗಿ ಇಸ್ಮಾಯಿಲ್ ತಲಪಾಡಿ ಹಾಗು ಅಬ್ದುಲ್ ಲತೀಫ್ ವಗ್ಗ, ಗೌರವ ಅಧ್ಯಕ್ಷರಾಗಿ E.K ಹುಸೈನ್ ಕೂಳೂರು ಇವರನ್ನು ನೇಮಕ ಮಾಡಲಾಯಿತು.

Exit mobile version