Site icon Ullalavani

ಮಂಗಳೂರು ವಿವಿ ಪರಿಶೀಲನೆಗಾಗಿ ತಜ್ಞರ ಸಮಿತಿ ಭೇಟಿ

UN NETWORKS

ಕೊಣಾಜೆ: ಮಂಗಳೂರು ವಿಶ್ವವಿದ್ಯಾಲಯದ ವಿವಿಧ ನಿಕಾಯಗಳ ಸ್ನಾತಕೋತ್ತರ ವಿಭಾಗಗಳ ಶೈಕ್ಷಣಿಕ ಪ್ರಗತಿ, ವಿವಿ ಆಡಳಿತ, ಕೇಂದ್ರೀಯ ಸೌಲಭ್ಯಗಳು, ವಿವಿಧ ಸಂಶೋಧನಾ ಕೇಂದ್ರಗಳು , ಅಧ್ಯಯನ ಪೀಠಗಳು ಸೇರಿದಂತೆ ಸಮಗ್ರ ಪರಿಶೀಲನೆಗೆ ತಜ್ಞರ ಸಮಿತಿ ಭೇಟಿ ನೀಡಿದೆ.

ಸಮಿತಿ ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಎಸ್.ಎನ್. ಹೆಗ್ಡೆ, ತೆಲಂಗಾಣ ನಲಗೊಂಡ ಎಂ.ಜಿ. ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಕೆ.ಎನ್. ರೆಡ್ಡಿ, ತಮಿಳುನಾಡಿನ ಭಾರತೀದಾಸನ್ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಸಿ. ತಂಗಮುತ್ತು ಅವರನ್ನೊಳಗೊಂಡ ಸಮಿತಿ ಅ. 9ರಿಂದ 11ರವರೆಗೆ ಪರಿಶೀಲನೆ ನಡೆಸಿದೆ.

ಕುಲಸಚಿವ ಪ್ರೊ. ಎ.ಎಂ. ಖಾನ್ ಸ್ವಾಗತಿಸಿದರು. ವಿವಿಯ ನ್ಯಾಕ್ ಸಮಿತಿಯ ಸಂಯೋಜಕ ಪ್ರೊ.ಕೆ.ಆರ್. ಚಂದ್ರಶೇಖರ್ ಹಾಗೂ ಪರೀಕ್ಷಾಂಗ ಕುಲಸಚಿವ ಪ್ರೊ. ವಿ. ರವೀಂದ್ರಾಚಾರಿ ಉಪಸ್ಥಿತರಿದ್ದರು.

Exit mobile version