UN NETWORKS
ವಾಮಂಜೂರು : ವಾಮಂಜೂರು ಸೈಂಟ್ ರೇಮಂಡ್ಸ್ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯಲ್ಲಿ ದ.ಕ. ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ರಾಜ್ಯಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಟ್ಟದ ನೆಟ್‍ಬಾಲ್ ಪಂದ್ಯಾಟಕ್ಕೆ ಅಂತಿಮ ತೆರೆ ಬಿದ್ದಿದೆ. ಹದಿನಾಲ್ಕು ವರ್ಷ ವಯೋಮಿತಿ ವಿಭಾಗದಲ್ಲಿ ಬಾಲಕರ ಹಾಗೂ ಬಾಲಕಿಯರ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯು ಪ್ರಥಮ ಸ್ಥಾನ ಪಡೆದು ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
ಹದಿನೇಳು ವರ್ಷ ವಯೋಮಿತಿಯೊಳಗಿನ ಬಾಲಕಿಯರ ವಿಭಾಗದಲ್ಲಿ ಬೆಂಗಳೂರು ಉತ್ತರ ಜಿಲ್ಲೆ ಪ್ರಥಮ, ಹಾಸನ ಜಿಲ್ಲೆ ದ್ವಿತೀಯ, ಮತ್ತು ದಕ್ಷಿಣ ಕನ್ನಡ ಜಿಲ್ಲೆ ತೃತೀಯ ಸ್ಥಾನ ಪಡೆಯಿತು. ದಕ್ಷಿಣ ಕನ್ನಡ ಜಿಲ್ಲೆಯ ಶಾಯಿಮಾ ಉತ್ತಮ ಸವ್ಯಸಾಚಿಯಾಗಿ, ಬೆಂಗಳೂರು ಉತ್ತರ ಜಿಲ್ಲೆಯ ಮನಸ್ವೀ ರಕ್ಷಣಾತ್ಮಕ ಆಟಗಾರ್ತಿಯಾಗಿ, ಹಾಸನ ಜಿಲ್ಲೆಯ ಕವನ ಉತ್ತಮ ಶೂಟರ್ ಗಳಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು.
ಹದಿನಾಲ್ಕು ವರ್ಷ ವಯೋಮಿತಿಯೊಳಗಿನ ಬಾಲಕರ ವಿಭಾಗದಲ್ಲಿ ದಕ್ಷಿಣ ಕನ್ನಡ ಪ್ರಥಮ, ಹಾಸನ ದ್ವಿತೀಯ, ಬೆಂಗಳೂರು ಉತ್ತರ ತೃತೀಯ ಸ್ಥಾನ ಪಡೆಯಿತು. ಉತ್ತಮ ಸವ್ಯಸಾಚಿಯಾಗಿ ಬೆಂಗಳೂರು ಉತ್ತರದ ವರುಣ್, ರಕ್ಷಣಾತ್ಮಕ ಆಟಗಾರನಾಗಿ ಪ್ರನೀತ್ ದಕ್ಷಿಣ ಕನ್ನಡ ಹಾಗೂ ಉತ್ತಮ ಶೂಟರ್‍ಗಳಾಗಿ ಹಾಸನ ಜಿಲ್ಲೆಯ ನಿರಂಜನ್ ಪ್ರಶಸ್ತಿಯನ್ನು ಸ್ವೀಕರಿಸಿದರು. ಹದಿನಾಲ್ಕು ವರ್ಷ ವಯೋಮಿತಿಯೊಳಗಿನ ಬಾಲಕಿಯರ ವಿಭಾಗದಲ್ಲಿ ದಕ್ಷಿಣ ಕನ್ನಡ ಪ್ರಥಮ, ಬೆಂಗಳೂರು ಉತ್ತರ ದ್ವಿತೀಯ, ಹಾಸನ ತೃತೀಯ ಸ್ಥಾನವನ್ನು ಪಡೆಯಿತು. ಉತ್ತಮ ಸವ್ಯಸಾಚಿಯಾಗಿ ಬೆಂಗಳೂರು ಉತ್ತರದ ವೈಷ್ಣವಿ, ರಕ್ಷಣಾತ್ಮಕ ಆಟಗಾರ್ತಿಯಾಗಿ ಹಾಸನ ಜಿಲ್ಲೆಯ ಮಾನ್ಯ, ಉತ್ತಮ ಶೂಟರ್ ಆಗಿ ಆಯೋಷಾ ತಸೀಂ ದಕ್ಷಿಣ ಕನ್ನಡ ಜಿಲ್ಲೆ ಇವರುಗಳು ಪ್ರಶಸ್ತಿಯನ್ನು ಸ್ವೀಕರಿಸಿದರು.
ಸಮರೋಪ ಸಮಾರಂಭದಲ್ಲಿ ನಗರಾಭಿವೃದ್ಧಿ ಮತ್ತು ವಸತಿ ಸಚಿವರಾದ ಯು.ಟಿ.ಖಾದರ್ ಅವರು ಶುಭವನ್ನು ಹಾರೈಸಿದರು.
ಇದೇ ಸಂದರ್ಭದಲ್ಲಿ ಪಂದ್ಯಾಟದ ಯಶಸ್ವಿಗೆ ಕಾರಣಕರ್ತರಾದ ದೈಹಿಕ ಶಿಕ್ಷಣ ಶಿಕ್ಷಕರುಗಳಾದ ಜಯರಾಜ್, ಡೊನಾಲ್ಡ್ ಲೋಬೋ, ಸೂರಜ್ ಅವರನ್ನು ಅಭಿನಂದಿಸಲಾಯಿತು. ಹಾಗೂ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ತ್ಯಾಗಂ ಹರೇಕಳ ಇವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆಯನ್ನು ವಂ. ಭ. ಸಿಸಿಲಿಯಾ ಮೆಂಡೋನ್ಸಾ ಅವರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ವಾಮಾಂಜೂರು ಇಂಜಿನಿಯರಿಂಗ್ ಕಾಲೇಜಿನ ಸಂಚಾಲಕರಾದ ಫಾದರ್ ಪ್ರಕಾಶ್ ನಿವೃತ್ತ ದೈಹಿಕ ಶಿಕ್ಷಣ ಪರಿವೀಕ್ಷಾಣಾಧಿಕಾರಿ ಗುರುನಾಥ್ ಬಾಗೇವಾಡಿ, ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ರಘುನಾಥ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಾಣಾಧಿಕಾರಿ ವಿಷ್ಣು ಹೆಬ್ಬಾರ್.ಮುಖ್ಯೋಪಾಧ್ಯಾಯಿನಿಯವರಾದ ಭ. ರೀಟಾ ಶರಲ್, ಭ. ಸಗಯ ಸೆಲ್ವಿ, ಭ .ರೋಶನಿ ಬಿ.ಎಸ್, ತಾಲೂಕು ಸಂಘದ ಪದಾಧಿಕಾರಿಗಳಾದ ಲಿಲ್ಲಿ ಪಾಯ್ಸ, ಲ್ಯಾನ್ಸೀ ಸಿಕ್ವೇರ, ಪ್ರೀತಂ ಉಳ್ಳಾಲ, ದೈಹಿಕ ಶಿಕ್ಷಣ ನಿರ್ದೇಶಕರಾದ ಪ್ರೇಮನಾಥ ಶೆಟ್ಟಿ, ಜಯರಾಮ ಗೌಡ, ಪುರುಷೋತ್ತಮ ಕೊಣಾಜೆ ಮುಂತಾದವರು ಉಪಸ್ಥಿತರಿದ್ದರು.
ಮುಖ್ಯೋಪಾಧ್ಯಾಯಿನಿ ವಂ. ಭ. ಡಾ. ಸಾಧನ ಬಿ.ಎಸ್ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ವಿನ್ಸೆಂಟ್ ಲೋಬೋ ಕಾರ್ಯಕ್ರಮ ನಿರೂಪಿಸಿದರು.