Site icon Ullalavani

ಅ.15-20: ಕೊಲ್ಯ ಶ್ರೀ ಶಾರದಾ ಮಹೋತ್ಸವ

UN NETWORKS

ಉಳ್ಳಾಲ: ಕೊಲ್ಯ ಶ್ರೀ ಶಾರದಾ ಸೇವಾ ಟ್ರಸ್ಟ್ ಇದರ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿ ಆಶ್ರಯದಲ್ಲಿ 37 ನೇ ವರ್ಷದ ಶ್ರೀ ಶಾರದಾ ಮಹೋತ್ಸವ ಅ.15 ರಂದು ಶ್ರೀ ಶಾರದಾ ಮಾತೆ ವಿಗ್ರಹ ಪ್ರತಿಷ್ಠೆಯೊಂದಿಗೆ ಆರಂಭಗೊಂಡು ಅ.20ರ ರಾತ್ರಿ 8 ಕ್ಕೆ ಶೋಭಾಯಾತ್ರೆಯೊಂದಿಗೆ ಸೋಮೇಶ್ವರ ಕಡಲ ಕಿನಾರೆಯಲ್ಲಿ ಜಲಸ್ತಂಭನಗೊಳ್ಳಲಿದೆ ಎಂದು ಶ್ರೀ ಶಾರದಾ ಸೇವಾ ಟ್ರಸ್ಟ್ ಕೊಲ್ಯದ ಟ್ರಸ್ಟೀ ತೋನ್ಸೆ ಪುಷ್ಕಳ್ ಕುಮಾರ್ ಹೇಳಿದರು.

ತೊಕ್ಕೊಟ್ಟುವಿನಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ಅ.15 ಬೆಳಿಗ್ಗೆ 11 ಕ್ಕೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಶ್ರೀ ಮಂಗಳಾದೇವಿ ದೇವಸ್ಥಾನದ ಮೊಕ್ತೇಸರ ರಾಮ ನಾಯ್ಕ್ ಕೋಟೆಕಾರು ಉದ್ಘಾಟಿಸಲಿದ್ದಾರೆ. ಕುಂಭೇಶ್ವರ ವಿವಿದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಗೋಪಾಲ ಸಾಲಿಯಾನ್ ಕಣ್ವತೀರ್ಥ ಅಧ್ಯಕ್ಷತೆಯಲ್ಲಿ, ಹಿಂ.ಜಾ.ವೇ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯದರ್ಶಿ ರಾಧಾಕೃಷ್ಣ ಅಡ್ಯಂತಾಯ ಧಾರ್ಮಿಕ ಉಪನ್ಯಾಸ, ಉದ್ಯಮಿ ಮನೋಜ್ ಸರಿಪಳ್ಳ, ಸತೀಶ್ ಮುಚ್ಚೂರು, ಹರಿದಾಸ್.ಕೆ.ಮಾಡೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಅ.17 ರಂದು ಶಾಲಾಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ಸಾಂಸ್ಕøತಿಕ ಸ್ಪರ್ಧೆ ನಡೆಯಲಿದೆ.

ಅ.19 ರಂದು ಸಮಾರೋಪ ದಲ್ಲಿ ಕಡಂಬೋಡಿ ಮಹಾಬಲ ಪೂಜಾರಿ ಅಧ್ಯಕ್ಷತೆ ವಹಿಸಲಿದ್ದಾರೆ. ಆರ್ ಎಸ್ ಎಸ್ ಕಾರ್ಯವಾಹ ನಾ.ಸೀತಾರಾಮ ಧಾರ್ಮಿಕ ಉಪನ್ಯಾಸ, ಚಲನಚಿತ್ರ ನಿರ್ಮಾಪಕ ರಾಜಶೇಖರ್ ಕೋಟ್ಯಾನ್, ಲಯನ್ ಸುಂದರ ಶೆಟ್ಟಿ ಬೆಟ್ಟಂಪಾಡಿ, ನಿಟ್ಟೆ ಕ್ಷೇಮ ಆಸ್ಪತ್ರೆಯ ಸುನಿಲ್ ಕೊಲ್ಯ, ಲೋಲಾಕ್ಷಿಹರೀಶ್ ಕಿನ್ಯಾ ಮುಖ್ಯ ಅತಿಥಿಗಳಾಗಿ` ಭಾಗವಹಿಸಲಿದ್ದಾರೆ.
ಈ ಸಂದರ್ಭ ಶಿಕ್ಷಣ ಸೇವೆಗಾಗಿ ನಿವೃತ್ತ ಮುಖ್ಯೋಪಾಧ್ಯಾಯ ವಿಶ್ವನಾಥ್, ದೇಶ ಸೇವೆ ನಿವೃತ್ತ ಸೇನಾನಿ ಸುಧಾಕರ್ ಕುಂಪಲ, ಸಮಾಜಸೇವಕಿ ಲಲಿತಾ ಸುಂದರ್ ಇವರನ್ನು ಸನ್ಮಾನಿಸಿ, ಕರಾಟೆ ಪ್ರತಿಭೆಗಳಾದ ಮಾ| ಚಿರಾಯು ಮತ್ತು ಮಾ| ಆದೀಶ್ ಅವರನ್ನು ಅಭಿನಂದಿಸಲಾಗುವುದು ಎಂದರು.

ಈ ವೇಳೆ ಸಾರ್ವಜನಿಕ ಶ್ರೀ ಶಾರದಾ ಸೇವಾ ಟ್ರಸ್ಟ್ ಕೊಲ್ಯ ಅಧ್ಯಕ್ಷ ಪ್ರಕಾಶ್.ಹೆಚ್, ಕಾರ್ಯದರ್ಶಿ ಮೋಹನ್ ಶೆಟ್ಟಿ ಕುಂಪಲ, ಗೌರವಾಧ್ಯಕ್ಷ ಸೀತಾರಾಮ ಬಂಗೇರ, ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿ ಅಧ್ಯಕ್ಷ ಅಶೋಕ್, ಕಿಶೋರ್ ಕುಮಾರ್ , ರಾಜೇಶ್, ಲಿಂಗಪ್ಪ ಉಪಸ್ಥಿತರಿದ್ದರು.

Exit mobile version