Site icon Ullalavani

ಯುವತಿಗೆ ಲೈಂಗಿಕ ಕಿರುಕುಳ: ಆರೋಪಿ ಬಂಧನ

UN NETWORKS

ಉಳ್ಳಾಲ: ನಿರ್ಮಾಣ ಹಂತದ ಕಟ್ಟಡದ ನೋಂದಾವಣಿ ಕಚೇರಿಯಲ್ಲಿ ಅಕೌಂಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಯುವತಿಗೆ, ಸೈಟ್ ಮೆನೇಜರ್ ಓರ್ವ ಲೈಂಗಿಕ ಕಿರುಕುಳ ನೀಡಿ ಪೊಲೀಸರ ವಶಕ್ಕೆ ಬಿದ್ದಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಕೋಟೆಕಾರು ಸಮೀಪ ಸೋಮವಾರ ಸಂಜೆ ಸಂಭವಿಸಿದೆ.

ಉಪ್ಪಳ ನಿವಾಸಿ ಅಬ್ದುಲ್ ಲತೀಫ್ ( 30) ಬಂಧಿತ. ಕೋಟೆಕಾರು ಹಿಂದೂಸ್ಥಾನ್ ಬಾವಾ ಬಿಲ್ಡರ್ಸ್ ನಿರ್ಮಾಣ ಹಂತದ ಕಟ್ಟಡ ಕಾಮಗಾರಿ ಸ್ಥಳದಲ್ಲಿ ಯುವತಿ ಓರ್ವಳೇ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭ ಅಬ್ದುಲ್ ಲತೀಫ್ ಒಳಪ್ರವೇಶಿಸಿ ಬಾಗಿಲಿನ ಕೀಯನ್ನು ನೀಡುವ ನೆಪ ಮಾಡಿ ಲತೀಫ್ ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ. ಅಲ್ಲದೆ ವಿಚಾರ ಹೊರಗೆ ಹೇಳಿದಲ್ಲಿ ಕೊಲ್ಲುವ ಬೆದರಿಕೆಯನ್ನು ಒಡ್ಡಿದ್ದಾನೆ. ಈ ಕುರಿತು ಯುವತಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿ ಕೊಂಡಿರುವ ಪೊಲೀಸರು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ಖಂಡಿಸಿರುವ ಹಿಂದು ಸಂಘಟನೆಗಳು ಆರೋಪಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದೆ.

Exit mobile version