Site icon Ullalavani

ಯಾವುದೇ ಕೋರ್ಸ್ ಶ್ರೇಷ್ಠ ಅಲ್ಲ, ಕೀಳೂ ಅಲ್ಲ, ಅದರದ್ದೇ ಆದ ಸ್ಥಾನಮಾನವಿದೆ-ಪ್ರೊ. ಡಾ.ಬಿ.ರಾಜಶೇಖರ್

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ದೇರಳ ಕಟ್ಟೆ: ವೃತ್ತಿ ಜೀವನದಲ್ಲಿ ಎಲ್ಲ ಕ್ಷೇತ್ರವೂ ಶ್ರೇಷ್ಠವೇ. ಕಲಿತಿರುವ ಎಲ್ಲ ಕೋರ್ಸ್ ಶ್ರೇಷ್ಠವಾದುದೇ. ಅದರಲ್ಲಿ ಮೇಲು ಕೀಳು ನೋಡಬಾರದು. ಯಾವುದೂ ಕೀಳಲ್ಲ. ಅದರದ್ದೇ ಆದ ಸ್ಥಾನಮಾನವಿದೆ ಎಂದು ಮಣಿಪಾಲ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್‍ನ ಸ್ಥಾಪಕ ಡೀನ್ ಪ್ರೊ. ಡಾ. ಬಿ. ರಾಜಶೇಖರ್ ಹೇಳಿದರು.

ಅವರು ದೇರಳಕಟ್ಟೆಯ ನಿಟ್ಟೆ ವಿಶ್ವವಿದ್ಯಾಲಯದ ಕೆ.ಎಸ್.ಹೆಗ್ಡೆ ಅಡಿಟೋರಿಯಂನಲ್ಲಿ ಶನಿವಾರ ನಡೆದ ನಿಟ್ಟೆ ವಿಶ್ವವಿದ್ಯಾಲಯದ ಸ್ಪೀಚ್ ಆ್ಯಂಡ್ ಹಿಯರಿಂಗ್ ಕಾಲೇಜಿನ ಐದನೆಯ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡಿ ಮಾತನಾಡಿದರು.

ನಿರೀಕ್ಷೆ ಇರಬೇಕು. ಅದು ವಿಪರೀತವಾಗಿರಬಾರದು. ನಮ್ಮತನ ನಾವು ಸಾಧಿಸಿ ತೋರಿಸಬೇಕು. ವೃತ್ತಿ ಬದುಕಿನಲ್ಲಿ ನಾವಿಡುವ ಮೊದಲ ಹೆಜ್ಜೆಯೇ ಬಹಳ ದೊಡ್ಡದಾಗಿರಬೇಕಿಂದಿಲ್ಲ. ಕ್ರಮೇಣ ನಾವು ಬೆಳೆಯುತ್ತೇವೆ. ಹಾಗಾಗಿ ಅಲ್ಲಿ ನಾವು ಏನು ಎಂಬುದನ್ನು ತೋರಿಸಬೇಕಾದರೆ ಪ್ರಾಮಾಣಿಕ ಪ್ರಯತ್ನ ಮುಖ್ಯವಾಗುತ್ತದೆ ಎಂದು ನುಡಿದರು.

ವೃತ್ತಿ ಬದುಕಿನಲ್ಲಿ ಒಂದು ಹಂತಕ್ಕೆ ಬಂದ ನಂತರ ಎಲ್ಲವೂ ಮುಗಿಯಿತೆಂದು ಸಮಾಧಾನ ಪಟ್ಟುಕೊಳ್ಳಬಾರದು. ಇನ್ನಷ್ಟು ಕ್ರಿಯಾಶೀಲರಾಗಿ ದುಡಿಯಬೇಕು. ಬದುಕಿನುದ್ದಕ್ಕೂ ಶಿಸ್ತು ಅತಿ ಮುಖ್ಯ. ಗುಣನಡತೆಯೂ ಮುಖ್ಯ. ಹಾಗೆಯೇ ಸಮಯವನ್ನು ಹೊಂದಿಸಿಕೊಳ್ಳುವುದು ಕೂಡಾ ಗುರುತರ ಜವಬ್ದಾರಿ ನಮ್ಮದಾಗಬೇಕು. ಹಾಗೆಯೇ ಅಡುವ ಆತು ಕೂಡಾ ನಮ್ಮ ಘನತೆಯನ್ನು ತೋರಿಸುತ್ತೆ ಎಂಬ ಬಗ್ಗೆ ನಿಗಾ ಇರಲಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್. ವಿನಯ್ ಹೆಗ್ಡೆ ಘಟಿಕೋತ್ಸವ ನಡೆಸಿಕೊಟ್ಟರು. ಬಳಿಕ ಮಾತನಾಡಿದ ಅವರು ಸ್ಪೀಚ್ ಆ್ಯಂಡ್ ಹಿಯರಿಂಗ್ ಸಂಬಂಧಿಸಿದಂತೆ ಇಪ್ಪತ್ತು ವರುಷಗಳ ಹಿಂದೆ ಇದ್ದ ವ್ಯವಸ್ಥೆಗೂ ಪ್ರಸ್ತುತ ದಿನಗಳಿಗೂ ಹೋಲಿಸಿದಾಗ ಮಹತ್ತರ ಬದಲಾವಣೆ ಕಾಣಬಹುದು. ಹಾಗಾಗಿ ಈ ಕ್ಷೇತ್ರದಲ್ಲಿ ಉತ್ತಮ ಭವಿಷ್ಯ ಇದ್ದು ಪ್ರಯತ್ನ ಮುಖ್ಯ ಎಂದರು.

ನಿಟ್ಟೆ ವಿಶ್ವವಿದ್ಯಾಲಯದ ಕುಲಸಚಿವ ಡಾ. ಎಂ.ಎಸ್. ಮೂಡಿತ್ತಾಯ, ಉಪನ್ಯಾಸಕಿ ಉಷಾ ಶಾಸ್ತ್ರಿ ಉಪಸ್ಥಿತರಿದ್ದರು.

ವಿದ್ಯಾರ್ಥಿನಿಯರಾದ ಅಲಿನಾ ಜೋಸ್, ಅಂಜು ಸಾರಾ ಜಾರ್ಜ್, ಅನು ಎ, ಅನುಪಮಾ ಪಿ.ಎಸ್, ಅನುಪಮಾ ಟಿ, ಶ್ರುತಿ ಅಶೋಕ್ ಬಂಗೇರ, ಫಾತಿಮಾ ನಾಫಿಯತಿ, ಪ್ರವೀಣಾ ಪಿಂಕಿ ಡಿಸೋಜ, ಲಕ್ಷ್ಮಿ ವಿ, ಮರಿಯಾ ಫ್ರಾನ್ಸಿನಾ, ನಮಿತಾ ಜ್ಯೋತಿ ಪ್ರಭು, ಪಿಮ್ಮಿ ಜೇಮ್ಸ್, ಪ್ರಜ್ವಿನ್ ಮರಿನಾ ಆಲ್ಫ್ರೆಡ್, ಸದಾ ಫರೀದ್, ಅನಿತಾ ಕುರಿಯನ್, ಶ್ರದ್ಧಾ ಪರಮೇಶ್ವರ್ ಹೆಗ್ಡೆ, ಸ್ವಾತಿ ಹಾಗೂ ತೆಸಾ ಮರಿರಾ ರಾಡ್ರಿಗಸ್ ಪದವಿ ಸ್ವೀಕರಿಸಿದರು.

ಅಡಿಯೋಲಾಜಿ ವಿಭಾಗ ಉಪನ್ಯಾಸಕ ಪ್ರಥಮೇಶ್ ಪದವೀಧರರ ಹೆಸರು ವಾಚಿಸಿ, ಪ್ರತಿಜ್ಞಾ ವಿಧಿ ಬೋಧಿಸಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ನಾಲ್ಕು ವರುಷಗಳ ಅನುಭವ ಹಂಚಿಕೊಂಡರು.

ಕಾಲೇಜಿನ ಪ್ರಾಂಶುಪಾಲ ಪೆÉÇ್ರ.ಟಿ. ದತ್ತಾತ್ರೇಯ ಸ್ವಾಗತಿಸಿದರು.

Exit mobile version