UN NETWORKS
ಮಂಗಳೂರು: ರಾಜ್ಯದ ಏಳು ಪ್ರಮುಖ ನಗರಗಳನ್ನು ಸ್ಮಾರ್ಟ್ ಸಿಟಿಯನ್ನಾಗಿ ಪರಿವರ್ತಿಸುವ ಯೋಜನೆ ಮುಂದಿದ್ದು, ನಗರಗಳು ಸಮರ್ಥನೀಯವಾಗಿ ಬೆಳೆಯಲು ಸ್ಮಾಟ್ ಏಷ್ಯಾ ಶೃಂಗಸಭೆ ಸಹಕಾರಿಯಾಗಲಿದೆ ಎಂದು ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಜನಸಂಖ್ಯೆ ಬೆಳೆಯುತ್ತಿರುವ ರಾಜ್ಯದಲ್ಲಿ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಹಾಗೂ ಶುಚಿತ್ವ ಕಾಪಾಡಲು ತ್ಯಾಜ್ಯ ನಿರ್ವಹಣೆ, ನೀರು ಸಂರಕ್ಷಣೆ, ತ್ಯಾಜ್ಯ ನಿರ್ವಹಣಾ ಘಟಕಗಳು, ಸಂಚಾರಿ ನಿಯಮಗಳ ಪಾಲನೆಗೆ ಆಧುನಿಕ ತಂತ್ರಜ್ಞಾನಗಳ ಅವಶ್ಯಕತೆ ಇದೆ. ಈ ಕುರಿತು ಪರಿಸರ ಪೂರಕವಾಗಿ ಸಾಧನಗಳನ್ನು ಬಳಸಲು ಗ್ರಾಮೀಣ ಭಾಗದ ಜನತೆಯೂ ಮುಂದಾಗಬೇಕಿದೆ. ರಾಜ್ಯ ಸರಕಾರವೂ ಸ್ಮಾರ್ಟ್ ಏಷ್ಯಾ ಇಂಡಿಯಾ ಜತೆಗೆ ಕೈಜೋಡಿಸಲಿದೆ ಎಂದರು. ತೈಪೈ ವರ್ಲ್ಡ್ ಟ್ರೇಡ್ ಸೆಂಟರಿನ ಮುಖ್ಯಸ್ಥ ಜೇಮ್ಸ್ ಸಿ.ಎಫ್. ಹುವಾಂಗ್ ಮಾತನಾಡಿ ಸ್ಮಾರ್ಟ್ ಏಷ್ಯಾ ಇಂಡಿಯಾ ಪರಸ್ಪರ ಸಹಕಾರಿಯಾಗುವ ಹಲವು ಅವಕಾಶಗಳನ್ನು ಸೃಷ್ಟಿಸಲಿದೆ. ಭಾರತ ಮತ್ತು ತೈವಾನ್ ನಡುವೆ ದ್ವಿಪಕ್ಷೀಯ ಸಂಬಂಧವನ್ನು ಇನ್ನಷ್ಟು ಬಲಗೊಳಿಸಲಿದೆ ಎಂದರು.
ಸ್ಮಾರ್ಟ್ ಸಿಟಿ ಕ್ಷೇತ್ರದಲ್ಲಿ ಹೆಚ್ಚು ಪರಿಹಾರಗಳನ್ನು ಒದಗಿಸುವ ನಿಟ್ಟಿನಲ್ಲಿ ಪ್ರದರ್ಶನ ಮತ್ತು ಶೃಮಗಸಭೆಯನ್ನು ಆಯೋಜಿಸಲಾಗಿದೆ. ಸ್ಮಾರ್ಟ್ ಟ್ರಾನ್ಸ್ ಪೊರ್ಟೇಶನ್, ಸಮಾಟ್ ್ ಎನರ್ಜಿ ಮತ್ತು ವಾಟರ್ ಮ್ಯಾನೇಜ್ ಮೆಂಟ್ , ಸ್ಮಾರ್ಟ್ ಸಿಟಿ ಡೆವಲಪ್ ಮೆಂಟ್ ಮತ್ತು ಎನ್ವಿರಾನ್ಮೆಂಟಲ್ ಸಸ್ಟೇನೆಬಿಲಿಟಿ ಹಾಗೂ ಐಒಟಿ ಸೊಲ್ಯೂಷನ್ ಗಳು ಈ ಬಾರಿ ಪ್ರದರ್ಶನದ ಮುಖ್ಯ ವಸ್ತುಗಳಾಗಿವೆ. 100 ಮಳಿಗೆಗಳಲ್ಲಿ 50 ಅತ್ಯುತ್ತಮ ತೈವಾನ್ ಕಂಪೆನಿಗಳು ತಮ್ಮ ತಂತ್ರಜ್ಞಾನವನ್ನು ಪ್ರದರ್ಶನಕ್ಕೆ ಇಡಲಿದೆ. ವಿವಿಧ ಕಂಪೆನಿಗಳು ಪ್ರದರ್ಶನದಲ್ಲಿ ಭಾಗವಹಿಸಲಿವೆ.
ಕರ್ನಾಟಕ ನಗರಾಭಿವೃದ್ಧಿ ಇಲಾಖೆ, ಕೇಂದ್ರ ಸರಕಾರದ ಸೆಣಬು ಮಂಡಳಿ, ಟಾಟ ಗ್ರೂಪ್, ಲೋಧಾ ಗ್ರೂಪ್, ಮಿಜಹೊ ಬ್ಯಾಂಕ್, ಇಂಡಿಯನ್ ನ್ಯಾಷನಲ್ ಇನ್ ಫೋರ್ಮೆಟಿಕ್ಸ್ ಸೆಂಟರ್, ನಾಶಿಕ್ ಎಂಜಿನಿಯರಿಂಗ್ ಇಂಡಸ್ಟ್ರಿಯಲ್ ಕ್ಲಸ್ಟರ್ ಇತ್ಯಾದಿ ಪ್ರದರ್ಶನದ ಪ್ರಮುಖ ಖರೀದಿದಾರರಾಗಿದ್ದಾರೆ.ಈ ಸಂದರ್ಭ ಟಿಡಬ್ಲ್ಯುಟಿಸಿ ಅಧ್ಯಕ್ಷ ಜೇಮ್ಸ್ ಸಿ.ಎಫ್. ಹುವಾಂಗ್, ಫಿಕ್ಕಿ ಕರ್ನಾಟಕ ಮಂಡಳಿಯ ಅಧ್ಯಕ್ಷ ಶೇಖರ್ ವಿಶ್ವನಾಥನ್ ಮತ್ತು ಕಾರ್ಯದರ್ಶಿಗಳಾದ ಅಂಜುಮ್ ಪರ್ವೇಜ್ ಉಪಸ್ಥಿತರಿದ್ದರು.
