Site icon Ullalavani

ಫಲಾಹ್ ಪ್ರೌಢಶಾಲೆಯಲ್ಲಿ ನಯೀ ತಾಲೀಮ್ ಸಪ್ತಾಹಕ್ಕೆ ಚಾಲನೆ

UN NETWORKS

ತಲಪಾಡಿ: ಫಲಾಹ್ ಅನುದಾನಿತ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಮಹಾತ್ಮ ಗಾಂಧೀಜಿಯವರ 150ನೆ ಜನ್ಮದಿನಾಚರಣೆಯ ಪ್ರಯುಕ್ತ ನಯೀ ತಾಲೀಮ್ ದಿವಸವನ್ನು ಆಚರಿಸುವ ಮೂಲಕ ನಯೀ ತಾಲೀಮ್ ಸಪ್ತಾಹಕ್ಕೆ ಸಂಸ್ಥೆಯ ಅಧ್ಯಕ್ಷರಾದ ಹಾಜಿ ಯು.ಬಿ. ಮೊಹಮ್ಮದ್ ಚಾಲನೆ ನೀಡಿದರು.

ಕೋಶಾಧಿಕಾರಿ ಇಸ್ಮಾಯಿಲ್ ನಾಗತೋಟ ಶಾಲಾ ಅಕ್ಷರ ಕೈತೋಟವನ್ನು ಉದ್ಘಾಟಿಸಿ, ಮಹಾತ್ಮ ಗಾಂಧೀಜಿಯವರಿಗೆ ನುಡಿನಮನ ಸಲ್ಲಿಸಿದರು. ಸರ್ಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿ ಅಶ್ವಿನಿ.ಎಸ್, ವಿದ್ಯಾರ್ಥಿಗಳಾದ ಮಹಮ್ಮದ್ ಉದೈಫ್ ಹಾಗೂ ಜೈನಾಬಿ ಅಫ್ರೀನಾ ಗಾಂಧೀಜಿಯ ವಿಚಾರ ಧಾರೆಯ ಬಗ್ಗೆ ಮಾತನಾಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಮಾಜಿ ಕಾರ್ಯದರ್ಶಿ, ಅರಬಿಕುಂಞ ಮುಖ್ಯ ಶಿಕ್ಷಕ ಮೊಹಮ್ಮದ್ ರಫೀಕ್, ಹಿರಿಯ ಶಿಕ್ಷಕಿ ಐರಿನ್, ಸಾಧನಾ, ಲತಾ ಪಿ, ನವೀನ್ ಪ್ರಸಾದ್, ರಮೇಶ್, ಮೊದಲಾದವರು ಉಪಸ್ಥಿತರಿದ್ದರು.

ಶಿಕ್ಷಕಿ ಚಂದ್ರಕಲಾ ಎಂ. ಸ್ವಾಗತಿಸಿ ವನಿತಾ ಕೆ. ವಂದಿಸಿದರು. ಸಿಟಿಇ ಪ್ರಶಿಕ್ಷಣಾರ್ಥಿ ಪದ್ಮಶ್ರೀ ಕೆ. ಕಾರ್ಯಕ್ರಮ ನಿರೂಪಿಸಿದರು.

Exit mobile version