UN NETWORKS
ಉಳ್ಳಾಲ: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ ತೊಕ್ಕೊಟ್ಟು ಸೆಕ್ಟರ್ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಎಸ್ ಎಸ್ ಎಫ್ ಅಳೇಕಲ ಶಾಖೆಯ ವತಿಯಿಂದ “ಮದ್ಯ ಮುಕ್ತ ಗ್ರಾಮ” ಜಾಗೃತಿ ಅಭಿಯಾನ ಕಾರ್ಯಕ್ರಮವು ಅಕ್ಟೋಬರ್ 2 ರಂದು ಮಗ್ರಿಬ್ ನಮಾಝಿನ ಬಳಿಕ ಅಳೇಕಲದ ಹೃದಯ ಭಾಗದಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ ಕರ್ನಾಟಕ ರಾಜ್ಯ ಸರ್ಕಾರದ ನಗರಾಭಿವೃದ್ಧಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾದ ಸನ್ಮಾನ್ಯ ಯು.ಟಿ ಖಾದರ್ ರವರು ಮದ್ಯ ಮುಕ್ತ ಗ್ರಾಮ- ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವ ಎಸ್ಎಸ್ಎಫ್ ಸಂಘಟನೆಯನ್ನು ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಉಳ್ಳಾಲ ನಗರಸಭಾ ಸದಸ್ಯರಾದ ಯು.ಎ ಇಸ್ಮಾಯಿಲ್, ಅಝ್ಗರ್ ಆಲಿ, ಜಾಫರ್ ಯು.ಎನ್ ಭಾಗವಹಿಸಿ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ತೊಕ್ಕೋಟು ಸೆಕ್ಟರ್ ಅಧ್ಯಕ್ಷರಾದ ಜಾಫರ್ ಯು ಎಸ್ ರವರು ಕಾರ್ಯಕರ್ತರಿಗೆ ಪ್ರತಿಜ್ಞಾ ವಿಧಿಯನ್ನು ಭೋಧಿಸಿದರು. ಕಾರ್ಯಕ್ರಮದಲ್ಲಿ ಉಳ್ಳಾಲ ನಗರಸಭಾ ಸದಸ್ಯರಾದ ಅಶ್ರಫ್ ಮಾಸ್ತಿಕಟ್ಟೆ, ಅಝೀಝ್ ಕೋಡಿ ಹಾಗೂ ಹಾಜಿ ಸಯ್ಯಿದ್ ಖುಬೈಬ್ ತಂಙಳ್, ಅಬ್ದುಲ್ ಲತೀಫ್ ಕತರ್, ಅಶ್ರಫ್ ಯು.ಡಿ, ಯು.ಬಿ ಹಂಝ ಸಹಿತ ಹಲವಾರು ಊರಿನ ಗಣ್ಯರು, ಸಾರ್ವಜನಿಕರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು. ಸೆಕ್ಟರ್ ಅಧ್ಯಕ್ಷ ಜಾಫರ್ ಯು.ಎಸ್ ಕಾರ್ಯಕ್ರಮ ನಿರೂಪಿಸಿದರು.
ಆರಿಫ್ ಅಳೇಕಲ ಸ್ವಾಗತಿಸಿ, ಫಾಝಿಲ್ ಅಳೇಕಲ ವಂದಿಸಿದರು.