UN NETWORKS
ಉಳ್ಳಾಲ: ಜನರಲ್ಲಿ ಬಿಜೆಪಿಯ ಬಗ್ಗೆ ಉತ್ತಮ ಅಭಿಪ್ರಾಯ ಈಗಿಲ್ಲ. ನರೇಂದ್ರಮೋದಿ ಮುಂದೆ ದೇಶದ ಪ್ರಧಾನಿಯಾಗಲು ಸಾಧ್ಯವಿಲ್ಲ. ಈಗಿರುವ ಸ್ಥಾನ ಅವರಿಗೆ ಮುಂದೆ ಸಿಗುವುದಿಲ್ಲ. ಉತ್ತರಪ್ರದೇಶ, ಬಿಹಾರ, ಸೇರಿದಂತೆ ಬಹಳಷ್ಟು ರಾಜ್ಯಗಳಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಥಾನ ಗಳಿಸಲಿದೆ ಎಂದು ಸಚಿವ ಖಾದರ್ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್ ವಹಿಸಿದ್ದರು. ಈ ಸಂದರ್ಭ ಉಳ್ಳಾಲ ನಗರ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ವಿಜೇತರಾದ ಕೌನ್ಸಿಲರ್‍ಗಳನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಸದಾಶಿವ ಉಳ್ಳಾಲ್ ಕಣಚೂರು ಮೋನು, ಜಯರಾಜ್, ಜಿ.ಪಂ. ಸದಸ್ಯೆ ಮಮತಾಗಟ್ಟಿ, ತಾ.ಪಂ. ಅಧ್ಯಕ್ಷ ಮಹಮ್ಮದ್ ಮೋನು, ತಾ.ಪಂ. ಮಜಿ ಸದಸ್ಯ ಮುಸ್ತಫಾ ಹರೇಕಳ, ಉಳ್ಳಾಲ ನಗರಸಭೆ ಕೌನ್ಸಿಲರ್‍ಗಳಾದ ಮಹಮ್ಮದ್ ಮುಕಚೇರಿ, ಬಾಜಿಲ್‍ಡಿಸೋಜ, ಮಾಜಿ ಕೌನ್ಸಿಲರ್ ದಿನೆಶ್ ರೈ, ಮುಸ್ತಫಾ, ನಗರಸಭೆ ಮಾಜಿ ಅಧ್ಯಕ್ಷ ಕುಂಞಮೋನು, ಜಿಲ್ಲಾ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಎನ್‍ಎಸ್ ಕರೀಂ, ಆಲ್ವಿನ್ ಪನೀರ್, ಇಲ್ಯಾಸ್, ರಮೇಶ್ ಶೆಟ್ಟಿ ಬೋಳಿಯಾರ್, ಯೂತ್ ಕಾಂಗ್ರೆಸ್‍ನ ನಾಸಿರ್ ಟಿ.ಎಸ್. ಸಾಮಣಿಗೆ, ರವೂಫ್ ದೇರಳಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.
ಯು.ಬಿ. ಸಲೀಂ ಉಳ್ಳಾಲ್ ಅತಿಥಿಗಳನ್ನು ಸ್ವಾಗತಿಸಿದರು. ರೋಹಿತ್ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು.