Site icon Ullalavani

ಅಸೈಗೊಳಿ : ಹಲ್ಲೆ ಪ್ರಕರಣದ ಆರೋಪಿಗಳ ಬಂಧನ

UN NETWORKS

ಕೊಣಾಜೆ: ಅಸೈಗೋಳಿ ಬಳಿ ರಮೇಶ್ ಎಂಬಾತನಿಗೆ ಹಲ್ಲೆ ನಡೆಸಿ ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಅಸೈಗೋಳಿ ನಿವಾಸಿಗಳಾದ ಶಫೀತ್ ಆಲಿ ಯಾನೆ ಶಾಫಿ, ಅಬ್ದುಲ್ ಅಝೀಜ್ ಯಾನೆ ಸಮೀರ್ ಹಾಗೂ ಉಳ್ಳಾಲ ಮುಕ್ಕಚ್ಚೇರಿ ವಾಸಿ ಸವಾದ್ ಎಂದು ಗುರುತಿಸಲಾಗಿದೆ. ಆರೋಪಿಗಳು ಸೆ.30 ರಂದು ಅಸೈಗೋಳಿ ಬಾರ್ ಬಳಿ ಕೊಣಾಜೆ ನಿವಾಸಿ ರಮೇಶ್ ಎಂಬಾತನಿಗೆ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಕೊಣಾಜೆ ಪೊಲೀಸರು ಮಂಗಳವಾರ ನೆತ್ತಿಲಪದವು ಎಂಬಲ್ಲಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಗಳ ಪತ್ತೆ ಕಾರ್ಯದಲ್ಲಿ ಕೊಣಾಜೆ ಪೊಲೀಸ್ ಇನ್‍ಸ್ಪೆಕ್ಟರ್ ರವಿ ನಾಯ್ಕ್ ಮತ್ತು ಸಿಬ್ಬಂದಿಯವರು ಪಾಲ್ಗೊಂಡಿದ್ದರು.

Exit mobile version