Site icon Ullalavani

ದೇರಳಕಟ್ಟೆ ರೇಂಜ್ ಮದರಸ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ನ  ಸಭೆ

UN NETWORKS
ದೇರಳಕಟ್ಟೆ: ದೇರಳಕಟ್ಟೆ ರೇಂಜ್ ಮದರಸ ಮ್ಯಾನೇಜ್ಮೆಂಟ್ ಅಸೋಸಿಯೇಷನ್  ಇದರ ಸಾಮಾನ್ಯ ಸಬೆಯು  ದೇರಳಕಟ್ಟೆ ಬದ್ರಿಯಾ ಜುಮ್ಹಾ ಮಸೀದಿ ಸಭಾಂಗಣದಲ್ಲಿ ಅಸೋಸಿಯೇಷನ್ ಅಧ್ಯಕ್ಷರಾದ .ಇಸ್ಮಾಯಿಲ್ ಹಾಜಿಯವರ ಅಧ್ಯಕ್ಷತೆಯಲ್ಲಿ ಜರಗಿತು.
ಸಭೆಯನ್ನು ಸ್ಥಳೀಯ ಖತೀಬರಾದ ಶರೀಫ್ ಅರ್ಶದಿಯವರು ಉದ್ಘಾಟಿಸಿ ಮದರಸ ಮ್ಯಾನೇಜ್ಮೆಂಟ್ ನ ಕರ್ತವ್ಯ ಮತ್ತು ಜವಾಬ್ದಾರಿ ಗಳ ಬಗ್ಗೆ ಸಭೆಗೆ ತಿಳಿಸಿದರು.
ಮುಖ್ಯಾತಿಥಿಗಳಾಗಿ ದಕ್ಷಿಣ ಕನ್ನಡ ಜಿಲ್ಲಾ ಮದರಸ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ಅದ್ಯಕ್ಷರಾದ ಐ.ಮೊೃದಿನಬ್ಬ ಹಾಜಿ, ಪ್ರಧಾನ ಕಾರ್ಯದರ್ಶಿ ರಫೀಕ್ ಹಾಜಿ ಕೊಡಾಜೆ,ಮಂಗಳೂರು ಸೌತ್ ರೇಂಜಿನ ಹೆೃದರ್ ವಳಚ್ಚಿಲ್, ರೇಂಜ್ ಮ್ಯಾನೇಜ್ಮೆಂಟ್ ನ ಗೌರವಾಧ್ಯಕ್ಷರಾದ ಮಜಲ್ ಅಬ್ಬಾಸ್ ಹಾಜಿ  , ರೇಂಜ್ ಜಂ-ಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷರಾದ ಬಹು! ಲತೀಫ್ ದಾರಿಮಿ ರೆಂಜಾಡಿ ಮತ್ತು ಬದ್ರಿಯಾ ಜುಮ್ಹಾ ಮಸೀದಿ ಅಧ್ಯಕ್ಷರಾದ ಅಬ್ಬಾಸ್ ಹಾಜಿ ಮುಂತಾದವರು ಭಾಗವಹಿಸಿದರು.
ಸಭೆಯಲ್ಲಿ ರೇಂಜ್ ಮದರಸ ಮ್ಯಾನೇಜ್ಮೆಂಟ್ ನ ಉಪಾಧ್ಯಕ್ಷರುಗಳಾದ ಸ್ವಾಗತ್ ಅಬೂಬಕ್ಕರ್ ಹಾಜಿ, ಎಂ.ಎ. ಅಬ್ದುಲ್ಲಾ ಹಾಜಿ ಬೆಳ್ಮ ಹಾಗೂ ರೇಂಜ್ ವ್ಯಾಪ್ತಿಯಲ್ಲಿನ ವಿವಿಧ ಮದರಸ ಪದಾಧಿಕಾರಿಗಳು ಹಾಜರಿದ್ದರು.ರೇಂಜ್ ಮದರಸ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ನ ಪ್ರಧಾನ ಕಾರ್ಯದರ್ಶಿ ಇಬ್ರಾಹಿಮ್ ಕೊಣಾಜೆ ಸ್ವಾಗತಿಸಿ,ಕೊನೆಯಲ್ಲಿ ವಂದಿಸಿದರು
Exit mobile version