Site icon Ullalavani

ನಿಟ್ಟೆ ವಿಶ್ವವಿದ್ಯಾನಿಲಯದಿಂದ ಕೇರಳಕ್ಕೆ 40ಲಕ್ಷ ರೂ. ಸಹಾಯಧನ

UN NETWORKS

ದೇರಳಕಟ್ಟೆ: ಭೀಕರ ನೆರೆಗೆ ನಲುಗಿದ ಕೇರಳ ನೆರೆ ಸಂತ್ರಸ್ತರ ನೆರವಿಗೆ ದೇರಳಕಟ್ಟೆಯ ನಿಟ್ಟೆ ವಿಶ್ವವಿದ್ಯಾಲಯ ಆಗಮಿಸಿದ್ದು, 40ಲಕ್ಷ ರೂ. ಸಹಾಯಧನವನ್ನು ಹಸ್ತಾಂತರ ಮಾಡಿದೆ.

ಕೇರಳ ನೆರೆ ಸಂತ್ರಸ್ತರಿಗೆ 40ಲಕ್ಷ ರೂ. ಸಹಾಯಧನವನ್ನು ನಿಟ್ಟೆ ವಿಶ್ವವಿದ್ಯಾಲಯದ ಆಡಳಿತ ವಿಭಾಗದ ಮುಖ್ಯಸ್ಥ ವಿಶಾಲ್ ಹೆಗ್ಡೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಚೆಕ್ ಮೂಲಕ ಹಸ್ತಾಂತರಿಸಿದ್ದಾರೆ. ಸಚಿವ ಟಿ.ಪಿ. ಜಯರಾಜನ್ ಹಾಗೂ ಕೇರಳ ರಾಜ್ಯ ವ್ಯಾಪಾರಿ ವ್ಯವಸಾಯ ಸಮಿತಿ ಜಿಲ್ಲಾ ಸಮಿತಿ ಸದಸ್ಯ ವಿ. ಮುರಲಿ, ನ್ಯಾಯವಾದಿ ಅಮಲ್ ತೊಪ್ಪಿಲ್, ಕ್ಷೇಮ ಸಾರ್ವಜನಿಕ ಸಂಪರ್ಕ ಅಧಿಕಾರಿ ಹೇಮಂತ್ ಶೆಟ್ಟಿ ಜೊತೆಗಿದ್ದರು.

ಕೊಡಗಿಗೂ 40ಲಕ್ಷ ರೂ. ಹಸ್ತಾಂತರಿಸಿದ್ದ ಸಂಸ್ಥೆ:
ನಿಟ್ಟೆ ವಿಶ್ವವಿದ್ಯಾಲಯ ವತಿಯಿಂದ ಕೊಡಗಿನ ನೆರೆ ಸಂತ್ರಸ್ತರ ನೆರವಿಗೂ ಆಗಮಿಸಿದ್ದ ನಿಟ್ಟೆ ಸಂಸ್ಥೆ, 40ಲಕ್ಷ ರೂ. ಸಹಾಯಧನವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಿತ್ತು. ಮಂಗಳೂರಿಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆಗಮಿಸಿದ್ದ ವೇಳೆ ನಿಟ್ಟೆ ವಿವಿ ಸಹಕುಲಾಧಿಪತಿ ವಿಶಾಲ್ ಹೆಗ್ಡೆ ಚೆಕ್ ಹಸ್ತಾಂತರಿಸಿದ್ದರು.

Exit mobile version