Site icon Ullalavani

ಉಳ್ಳಾಲ ವಲಯ ಮಟ್ಟದ ಪ್ರೌಢ ಶಾಲೆಗಳ ಕ್ರೀಡಾಕೂಟ ಸಮಾರೋಪ

UN NETWORKS

ಉಳ್ಳಾಲ: ದ.ಕ. ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ದಕ್ಷಿಣ ವಲಯ ಮತ್ತು ಭಗವತಿ ಆಂಗ್ಲ ಮಾಧ್ಯಮ ಪ್ರೌಢ ಶಲೆ ಸಂಕೋಳಿಗೆ ಉಚ್ಚಿಲ ಇದರ ಸಂಯುಕ್ತ ಆಶ್ರಯದಲ್ಲಿ 17 ವರ್ಷ ವಯೋಮತಿಯೊಳಗಿನ ಉಳ್ಳಾಲ ವಲಯ ಮಟ್ಟದ ಪ್ರೌಢ ಶಾಲೆಗಳ ಕ್ರೀಡಾಕೂಟ ಸಮಾರೋಪ ಸಮಾರಂಭವು ಸೆ.28ರಂದು ಶುಕ್ರವಾರ ಮಂಗಳೂರು ವಿಶ್ವ ವಿದ್ಯಾಲಯದ ಕ್ರೀಡಾಂಗಣದಲ್ಲಿ ನಡೆಯಿತು.

ತಾಪಂ ಸದಸ್ಯೆ ಸುರೇಖ ಚಂದ್ರಹಾಸ್, ನಾಟಿ ವೈದ್ಯೆ ಶಂಕರನಾಂದ ಇನ್ನೋಳಿ, ದೈಹಿಕ ಶಿಕ್ಷಣ ಪರಿವೀಕ್ಷಕ ವಿಷ್ಣು ಹೆಬ್ಬಾರ್, ಮಂಗಳೂರು ತಾಲೂಕು ದೈಹಿಕ ಶಿಕ್ಷಣದ ಅಧ್ಯಕ್ಷ ತ್ಯಾಗಂ ಹರೇಕಳ, ಕಾರ್ಯದರ್ಶಿ ರಾಜೀವ್ ನಾಯಕ್, ಉಪಾಧ್ಯಕ್ಷ ಪ್ರೀತಂ ಉಳ್ಳಾಲ್, ದೈಹಿಕ ಶಿಕ್ಷಣ ಸಂಘದ ಉಳ್ಳಾಲ ವಲಯದ ನೋಡೆಲ್‍ ಅಧಿಕಾರಿ ಮೋಹನ್ ಶಿರ್ಲಾಲ್ ಮತ್ತು ಪ್ರಮೋದ್ ಪ್ರೌಢ ಶಾಲೆಯ ದೈಹಿಕ ಶಿಕ್ಷಣ ಸಂಘದ ನೋಡೆಲ್‍ ಅಧಿಕಾರಿ ಉರ್ಬನ್ ಮಸ್ಕರನೇಸ್, ಉಚ್ಚಿಲದ ಭಗವತೀ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಮುಖ್ಯೋಪಾದ್ಯಾಯಿನಿ ಸುರೇಖಜೆ, ಪ್ರಾಥಮಿಕ ಶಾಲೆಯ ಮುಖ್ಯೋಪಾದ್ಯಾಯಿನಿ ಪ್ರಮೀಳ, ನಿವೃತ್ತ ದೈಹಿಕ ಶಿಕ್ಷಕ ಲೋಕನಾಥ್‍ ರೈ ಮತ್ತು ತುಕರಾಂ ಉಳ್ಳಾಲ್ ಉಪಸ್ಥಿತರಿದ್ದರು.

14ರ ವಯೋಮಿತಿಯ ಬಾಲಕರ ವೈಯ್ಯಕ್ತಿಕ ಚಾಂಪಿಯನ್ ಶಿಪ್‍ನ್ನು ಸಂತ ಸೆಬೆಸ್ಟಿಯನ್ ಆಂಗ್ಲ ಮಾಧ್ಯಮ ಶಾಲೆಯ ಪೆರ್ಮನ್ನೂರಿನ ಮೊಹಮ್ಮದ್ ಸಾಝ್ ಮತ್ತು ಬಾಲಕಿಯರ ವೈಯ್ಯಕ್ತಿಕ ಚಾಂಪಿಯನ್ ಶಿಪ್‍ನ್ನು ಭಗವತಿ ಆಂಗ್ಲ ಮಾಧ್ಯಮ ಶಾಲೆ ಸಂಕೋಳಿಗೆಯ ಕುಮಾರಿ ನೈಸಾ ಎನ್‍ ಉಚ್ಚಿಲ್ ಮತ್ತು ಹರೇಕಳ ಶ್ರೀ ರಾಮ ಕೃಷ್ಣ ಪ್ರೌಢಶಾಲೆಯ ಕು. ಹರ್ಷಿತಾ ಪಡೆದರು.

17 ವಯೋಮತಿಯ ಬಾಲಕರ ವೈಯ್ಯಕ್ತಿಕ ಚಾಂಪಿಯನ್ ಶಿಪ್ ದೇರಳಕಟ್ಟೆಯ ನೇತಾಜಿ ಸುಭಾಷ್‍ಚಂದ್ರಭೋಸ್ ಸರಕಾರಿ ಪ್ರೌಢ ಶಾಲೆಯ ಹನುಮಂತಪ್ಪ, ಬಾಲಕಿಯರ ವೈಯ್ಯಕ್ತಿಕ ಕೊಣಾಜೆ ವಿಶ್ವಮಂಗಳ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ರಿಕ್ಟಾಕಿರಣ್ ಪಡೆದರು.
14 ವಯೋಮಿತಿಯ ಬಾಲಕರ ಸಮಗ್ರ ಚಾಂಪಿಯನ್‍ ಶಿಪ್‍ನ್ನು ಸಂತ ಸೆಬೆಸ್ಟಿಯನ್ ಆಂಗ್ಲಮಾಧ್ಯಮ ಶಾಲೆ ಪೆರ್ಮನ್ನೂರು ಮತ್ತು ಬಾಲಕಿಯರ ಚಾಂಪಿಯನ್‍ಶಿಪ್‍ನ್ನು ಸಂತ ಸೆಬೆಸ್ಟಿಯನ್ ಕನ್ನಡ ಮಾಧ್ಯಮ ಶಾಲೆ ಪಡೆದುಕೊಂಡಿತು.

17ರ ವಯೋಮಿತಿಯ ಬಾಲಕರ ಚಮಗ್ರಚಾಂಪಿಯನ್ ಶಿಪ್‍ನ್ನು ದೇರಳಕಟ್ಟೆ ನೇತಾಜಿ ಸುಭಾಷ್‍ಚಂದ್ರಭೋಸ್ ಸರಕಾರಿ ಪ್ರೌಢಶಾಲೆ ಮತ್ತು ಬಾಲಕಿಯರ ಚಾಂಪಿಯನ್ ಶಿಪ್‍ನ್ನು ಉಚ್ಚಿಲದ ಬೋವಿ ಆಂಗ್ಲ ಮಾಧ್ಯಮ ಶಾಲೆ ಪಡೆಯಿತು.

Exit mobile version