UN NETWORKS
ಯೇನೆಪೊಯ: ಔಷಧಿ ಕ್ಷೇತ್ರದಲ್ಲಿ ಸಂಶೋಧನೆಗೆ ಹೆಚ್ಚಿನ ಆದ್ಯತೆ ದೊರಕುತ್ತಿದ್ದು, ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಜೀವನದಿಂದಲೇ ಔಷಧಿ ಶಾಸ್ತ್ರದ ಸಂಶೋಧನೆ ಸೇರಿದಂತೆ ಹೊಸ ವಿಚಾರಗಳ ಅಧ್ಯಯನಕ್ಕೆ ಆದ್ಯತೆ ನೀಡಬೇಕು ಎಂದು ಯೇನೆಪೊಯ ವಿಶ್ವವಿಶ್ಯಾನಿಲಯದ ಉಪಕುಲಪತಿ ಡಾ| ಎಂ. ವಿಜಯಕುಮಾರ್ ಅಭಿಪ್ರಾಯಪಟ್ಟರು.
ಸಂಸ್ಥೆಯ ಎಲ್ಲಾ ವೈದ್ಯಕೀಯ ಮತ್ತು ಅರೆವೈದ್ಯಕೀಯ ತರಬೇತಿಯ ಭೋಧಕ, ಭೋಧಕೇತರ ಮತ್ತು ವಿದ್ಯಾರ್ಥಿ ವರ್ಗ ಸಕ್ರಿಯವಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬೆಂಗಳೂರಿನ ಫೈಟೋಟೆಕ್ ಎಕ್ಸ್ಟ್ರಾಕ್ಟ್ಸ್ ಪ್ರೈವೆಟ್. ಲಿಮಿಟೆಡ್‍ನ ಟೆಕ್ನಿಕಲ್ ಡೈರೆಕ್ಟರ್ ಡಾ| ಪಾರಂಜೋತಿ ಕನ್ನಿ, ಪಿ.ಎ. ಶೈಕ್ಷಣಿಕ ಟ್ರಸ್ಟ್ ಅಕಾಡೆಮಿಕ್ಸ್ ನಿರ್ದೇಶಕ ಸರ್ಫಾಜ್ ಜೆ ಹಾಶಿಮ್, ಯೇನೆಪೊಯ ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಡಾ| ಜಿ. ಶ್ರೀಕುಮಾರ್ ಮೆನನ್, ಸಹಾಯಕ ಪ್ರಾಧ್ಯಾಪಕಿ ಸೋನಾಲ್ ಡಿ’ಸೋಜಾ ಭಾಗವಹಿಸಿದ್ದರು.
ಯೇನೆಪೊಯ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಮತ್ತು ಸಂಶೋಧನಾ ಕೇಂದ್ರದ ಡಾ| ಮೊಹಮ್ಮದ್ ಗುಲ್ಜಾರ್ ಅಹ್ಮದ್ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕಿ ಹಲೀಮಾ ಶಾಹಿನ್ ಡಿ.ಎಚ್. ವಂದಿಸಿದರು.