Site icon Ullalavani

ಎಸ್ ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎ.ಕೆ ಫೈಝಿರವರಿಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಭವ್ಯ ಸ್ವಾಗತ

UN NETWORKS

ಮಂಗಳೂರು:ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಅಫ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ ಫೈಝಿ ರವರು ಸೋಮವಾರ ಮಂಗಳೂರು ವಿಮಾನ ನಿಲ್ದಾಣಕ್ಕೆ ಅಗಮಿಸಿದ ಸಂದರ್ಭ ಎಸ್ ಡಿಪಿಐ ಕಾರ್ಯಕರ್ತರು ಸ್ವಾಗತಿಸಿದರು.

ಮಂಗಳೂರಿನ ಜಮಿಯ್ಯತುಲ್ ಫಲಾಹ್ ನಲ್ಲಿ ಸೆ.25ರಂದು ನಡೆಯುವ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಅಫ್ ಇಂಡಿಯಾದ ಕಾರ್ಯಕರ್ತರ ಮೀಟ್ ದೀ ಪ್ರೆಸಿಡೆಂಟ್ ಸಭೆಗೆ ಮತ್ತು ಉಳ್ಳಾಲದಲ್ಲಿ ನಡೆಯುವ ನಗರ ಸಭೆ ಚುನಾವಣೆಯಲ್ಲಿ ವಿಜೇತ ಅಭ್ಯರ್ಥಿಗಳಿಗೆ ಅಯೋಜಿಸಿದ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಅಗಮಿಸಿದ್ದಾರೆ.

ಈ ಸಂದರ್ಭ ರಾಷ್ಟ್ರೀಯ ಉಪಾಧ್ಯಕ್ಷ ನ್ಯಾಯವಾದಿ ಶರಪ್ಪುದ್ದೀನ್, ಎಸ್ ಡಿಪಿಐ ದ.ಕ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ, ಕೋಶಾಧಿಕಾರಿ ನೂರುಲ್ಲಾ ಕುಲಾಯಿ, ಪ್ರ.ಕಾರ್ಯದರ್ಶಿ ಹಮೀದ್ ಎಸ್.ಎಚ್, ಕಾರ್ಯದರ್ಶಿ ಅಶ್ರಫ್ ಮಂಚಿ, ಉಪಾಧ್ಯಕ್ಷರುಗಳಾದ ಇಕ್ಬಾಲ್ ಐ.ಎಂ.ಅರ್, ಇಕ್ಬಾಲ್ ಬೆಳ್ಳಾರೆ, ಜಿಲ್ಲಾ ಸದಸ್ಯರಾದ ಯೂಸುಫ್ ಆಲಡ್ಕ, ಝಾಹೀರ್ ಮಲಾರ್, ಮನೀಬ್ ಬೆಂಗ್ರೆ, ಅಲ್ತಾಫ್ ಬೆಳ್ತಂಗಡಿ ಉಪಸ್ಥಿತರಿದ್ದರು.

Exit mobile version