UN NETWORKS
ಉಳ್ಳಾಲ: ಬ್ಲಡ್ ಡೋನರ್ಸ್ ಮಂಗಳೂರು ಹಾಗೂ ಫ್ರೆಂಡ್ಸ್ ಉಳ್ಳಾಲ ಆಶ್ರಯದಲ್ಲಿ ರೆಡ್ ಕ್ರಾಸ್ ಬ್ಲಡ್ ಬ್ಯಾಂಕ್ ಸಹಯೋಗದೊಂದಿಗೆ ರಕ್ತದಾನ ಶಿಬಿರ ಉಳ್ಳಾಲ ಕೋಡಿಯ ಸರಕಾರಿ ಉರ್ದು ಪ್ರೌಢ ಶಾಲಾ ವಠಾರದಲ್ಲಿ ನಡೆಯಿತು.
ಉಳ್ಳಾಲ ನಗರ ಸಭೆ ಸದಸ್ಯರುಗಳಾದ ಅಸ್ಗರ್ ಅಲಿ, ರಮೀಝ್ ಕೋಡಿ, ಇಂಡಿಯನ್ ರೆಡ್ ಕ್ರಾಸ್ ಬ್ಲಡ್ ಬ್ಯಾಂಕ್ ತಾಂತ್ರಿಕ ಮುಖ್ಯಸ್ಥ ಎಡ್ವರ್ಡ್, ಬ್ಲಡ್ ಡೋನರ್ಸ್ ಮಂಗಳೂರು ಇದರ ಪ್ರ.ಕಾರ್ಯದರ್ಶಿ ನವಾಝ್ ಎಂ.ಬಿ, ಉಪಾಧ್ಯಕ್ಷರುಗಳಾದ ಸಲಾಂ ಚೆಂಬುಗುಡ್ಡೆ , ಮುನೀರ್ ಚೆಂಬುಗುಡ್ಡೆ, ಕೋಶಾಧಿಕಾರಿ ಮುಸ್ತಫಾ ಕೆ.ಸಿ ರೋಡು, ಫ್ರೆಂಡ್ಸ್ ಉಳ್ಳಾಲ ಇದರ ಅಧ್ಯಕ್ಷ ತೌಫೀಕ್ ಕೋಡಿ, ರೆಡ್ ಕ್ರಾಸ್ ನ ಮುಖ್ಯಸ್ಥ ಪ್ರವೀಣ್ ಉಪಸ್ಥಿತರಿದ್ದರು.
