UN NETWORKS
ಮಂಗಳೂರು: ಬಂಟ್ವಾಳದ ಗೂಡಿನಬಳಿ ಅಪ್ರಾಪ್ತೆ ಬಾಲಕಿಯನ್ನು ಅತ್ಯಾಚಾರಗೈದ ಮೂವರು ಆರೋಪಿಗಳನ್ನು ಸಾರ್ವಜನಿಕವಾಗಿ ಕಲ್ಲೆಸೆದು ಕೊಂದು, ಅವರ ಮಾಂಸವನ್ನು ನಾಯಿಗೆ ಹಾಕಿ ಎಂದು ಕೆಪಿಸಿಸಿ ಕಾರ್ಮಿಕ ಘಟಕದ ರಾಜ್ಯ ಉಪಾಧ್ಯಕ್ಷ ಅಮೀರ್ ತುಂಬೆ ಹೇಳಿದ್ದಾರೆ.
ಗೂಡಿನಬಳಿ ಅಪ್ರಾಪ್ತ ಬಾಲಕಿ ಅತ್ಯಾಚಾರ ಪ್ರಕರಣ ತೀರಾ ಅಮಾನವೀಯ. ಪ್ರಕರಣಕ್ಕೆ ಸಂಬಂಧಿಸಿದ ಮೂವರು ಆರೋಪಿಗಳನ್ನು ಸಾರ್ವಜನಿಕವಾಗಿ ಕಲ್ಲೆಸೆದು ಕೊಲ್ಲಬೇಕಿದೆ. ಆನಂತರ ಅವರ ಮಾಂಸವನ್ನು ನಾಯಿಗಳಿಗೋ ಅಥವಾ ಪ್ರಾಣಿಗಳಿಗೋ ಹಾಕಬೇಕಿದೆ. ಈ ಮೂಲಕ ಅದನ್ನು ನೋಡಿ ಮುಂದೆ ಜನ ಭಯಭೀತರಾದರೆ ಮುಂದೆ ಇಂತಹ ಪ್ರಕರಣ ಸಂಭವಿಸುವುದಿಲ್ಲ. ಇಂತಹ ಗೋಮುಖ ವ್ಯಾಘ್ರರನ್ನು ಶೀಘ್ರವೇ ಗಲ್ಲಿಗೆ ಏರಿಸಬೇಕು. ಇಲ್ಲವಾದಲ್ಲಿ ಸಾರ್ವಜನಿಕರಿಗೆ ಒಪ್ಪಿಸುವಂತೆ ವಾಟ್ಸ್ಯಾಪ್ ಮೂಲಕ ವಾಯ್ಸ್ ರೆಕಾರ್ಡಿನಲ್ಲಿ ತಿಳಿಸಿದ್ದಾರೆ. ಇದೀಗ ವಾಯ್ಸ್ ವೈರಲ್ ಆಗುತ್ತಿದೆ.