Site icon Ullalavani

ಪಜೀರು: ಹೆಣ್ಮಕ್ಕಳ ಮಹತ್ವ, ಪ್ರಕೃತಿ ಸಂರಕ್ಷಣೆಯಲ್ಲಿ ನಮ್ಮ ಪಾತ್ರ

UN NETWORKS

ಪಜೀರು: ಧಾರ್ಮಿಕ, ಕೌಟುಂಬಿಕ ಏಕತೆ ಹೆಣ್ಮಕ್ಕಳ ಮಹತ್ವ ಹಾಗೂ ಪ್ರಕೃತಿ ಸಂರಕ್ಷಣೆ ಎಂಬ ನಾಲ್ಕು ಆಯಾಮಗಳನ್ನು ಮೋಂತಿ ಹಬ್ಬ ಹೊಂದಿದೆ ಎಂದು ಸಿಓಡಿಪಿ ಸಂಸ್ಥೆಯ ನಿರ್ದೇಶಕ ವಂ.ಫಾ. ಓಸ್ವಾಲ್ಡ್ ಮೊಂತೆರೋ ಹೇಳಿದರು.

ಮಂಗಳೂರಿನ ಕೆನರಾ ಅಭಿವೃದ್ಧಿ ಮತ್ತು ಶಾಂತಿ ಸಂಸ್ಥೆಯ ಪ್ರವರ್ತಿತ ಸ್ನೇಹ ಮಹಾಸಂಘ ಪಜೀರು ಸ್ವಸಹಾಯ ಸಂಘಗಳ ವತಿಯಿಂದ ಶನಿವಾರ ಪಜೀರು ಚರ್ಚ್ ಸಭಾಂಗಣದಲ್ಲಿ ನಡೆದ `ಹೆಣ್ಮಕ್ಕಳ ಮಹತ್ವ ಮತ್ತು ಪ್ರಕೃತಿ ಸಂರಕ್ಷಣೆ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರಕೃತಿ ಎಂಬ ಸ್ವಾಭಾವಿಕ ಸಂಪನ್ಮೂಲಗಳನ್ನು ದೇವರು ನಮಗೆ ನೀಡಿದ್ದು ಅದನ್ನು ಸಂರಕ್ಷಿಸಿ ಮುಂದಿನ ಜನಾಂಗಕ್ಕೆ ಬಿಟ್ಟು ಹೋಗುವ ಕೆಲಸ ನಡೆಯಬೇಕು. ಹೆಣ್ಣು ಮಗು ಎನ್ನುವ ಕಾರಣಕ್ಕೆ ತಾತ್ಸಾರ ಭಾವನೆ ತೋರದೆ ಭ್ರೂಣಹತ್ಯೆ, ಅತ್ಯಾಚಾರದಂತಹ ಪಿಡುಗುಗಳಿಂದ ಸಮಾಜ ಮುಕ್ತವಾಗಬೇಕು ಎಂದು ತಿಳಿಸಿದರು.ಮಂಜುಳಾ ಸುನಿಲ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.

ವಂ. ಸ್ವಾಮಿ ಫ್ರಾನ್ಸಿಸ್ ಆಸ್ಸಿಸಿ ಅಲ್ಮಾಡಾ, ಸಿಒಡಿಪಿ ಸಂಯೋಜಕ ರವಿ ಕುಮಾರ್ ಕ್ರಾಸ್ತಾ, ಸಂಯೋಜಕಿ ರೀಟಾ ಡಿಸೋಜ ಪಜೀರು ಚರ್ಚ್ ಪಾಲನಾ ಮಂಡಳಿ ಕಾರ್ಯದರ್ಶಿ ಜೋನ್ ವಿಕ್ಟರ್ ಮೆಂಡೋನ್ಸ ಹಾಗೂ ಎಸ್‍ವಿಪಿ ಸದಸ್ಯ ಜೋನ್ ಸಲ್ದಾನ ಹಾಗೂ ಸಿಒಡಿಪಿ ಕಾರ್ಯಕರ್ತೆ ಗುಲಾಬಿ ಉಪಸ್ಥಿತರಿದ್ದರು. ಸಿಒಡಿಪಿ ಅಧ್ಯಕ್ಷೆ ಲವೀನಾ ದಾಂತಿ ಸ್ವಾಗತಿಸಿದರು. ಫ್ಲೋರಿನ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು. ಬೆರ್ನಾರ್ಡ್ ಡಿಸೋಜ ವಂದಿಸಿದರು.

Exit mobile version