ಬ್ಲಡ್ ಕ್ಯಾನರ್ ಗೆ ತುತ್ತಾದ ಬಡ ಕುಟುಂಬದ ಮಹಿಳೆಗೆ ನರಿಂಗಾನ ಯುವಕ ಮಂಡಲದಿಂದ ಸಹಾಯಹಸ್ತ
UllalaVani
UN NETWORKS
ನರಿಂಗಾನ: ಕಳೆದ ಕೆಲವು ತಿಂಗಳಿನಿಂದ ಬ್ಲಡ್ ಕ್ಯಾನ್ಸರ್ ನಿಂದ ಬಳಲುತ್ತಿರುವ ಮಂಜೇಶ್ವರ ತಾಲೂಕಿನ ವರ್ಕಾಡಿ ಗ್ರಾಮದ ತೋಕೆ ನಿವಾಸಿ ಬಡ ಕೂಲಿ ಕಾರ್ಮಿಕ ಹರಿಶ್ಚಂದ್ರ ಶೆಟ್ಟಿಗಾರ ಅವರ ಪತ್ನಿ ಗೀತಾ ಶೆಟ್ಟಿಗಾರ್ ಅವರಿಗೆ ಚಿಕಿತ್ಸೆಗೆ ಸಹಾಯವಾಗಲೆಂದು ತೌಡುಗೋಳಿಯ ನರಿಂಗಾನ ಯುವಕ ಮಂಡಲದ ಸದಸ್ಯರು ಭಾನುವಾರ ಗೀತಾ ಶೆಟ್ಟಿಗಾರ ಅವರಿಗೆ 10ಸಾವಿರ ರೂ. ನೀಡುವ ಮೂಲಕ ಸಹಾಯ ಹಸ್ತ ನೀಡಿದರು.
ಯುವಕ ಮಂಡಲದ ಅಧ್ಯಕ್ಷ ಚಂದ್ರಹಾಸ್ ಎಲ್. ಸರ್ಕುಡೇಲು, ಪ್ರಧಾನ ಕಾರ್ಯದರ್ಶಿ ಗಿರೀಶ್ ಆಳ್ವ ಗರೋಡಿ, ಗೌರವಾಧ್ಯಕ್ಷ ಉದಯ ಶಂಕರ ಶೆಟ್ಟಿ ಬಲೆತ್ತೋಡು, ಮಾಜಿ ಅಧ್ಯಕ್ಷರುಗಳಾದ ನವೀನ್ ಶೆಟ್ಟಿ ಮಂಗಲ್ಪಾಡಿ, ವಿಜಯ್ ಎಲ್. ಸರ್ಕುಡೇಲು, ಅವಿನಾಶ್ ಸರ್ಕುಡೇಲು, ಶ್ರೀಕುಮಾರ್ ಸರ್ಕುಡೇಲು, ರಾಕೇಶ್ ಕೊರಕಟ್ಟ, ನಿಖಿಲ್ ಆಳ್ವ ಗರೋಡಿ, ಜೀತೇಶ್ ಕುಲಾಲ್ ತೌಡುಗೋಳಿ, ಶೇಖರ ಶೆಟ್ಟಿಗಾರ ಹಾಗೂ ಗೀತಾ ಶೆಟ್ಟಿಗಾರ ಪತಿ ಹರಿಶ್ಚಂದ್ರ ಶೆಟ್ಟಿಗಾರ ಜೊತೆಗಿದ್ದರು.