Site icon Ullalavani

ಅಲೋಶಿಯಸ್ ಕಾಲೇಜು ವಿದ್ಯಾರ್ಥಿಗಳಿಂದ ಸೋಮೇಶ್ವರ, ಉಳ್ಳಾಲ ಬೀಚ್ ಸ್ವಚ್ಚತೆ

UN NETWORKS

ಉಳ್ಳಾಲ: ವಿಶ್ವ ಬೀಚ್ ಸ್ವಚ್ಚತಾ ದಿನದ ಅಂಗವಾಗಿ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿಗಳು ಉಳ್ಳಾಲ ಹಾಗೂ ಸೋಮೇಶ್ವರ ಬೀಚ್‍ನ್ನು ಎರಡು ದಿನಗಳ ಶ್ರಮದಾನದ ಮೂಲಕ ಸ್ವಚ್ಚಗೊಳಿಸಿದರು.

ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಸೆಂಟರ್ ಫಾರ್ ಸೋಶಿಯಲ್ ಕನ್ಸರ್ನ್ ಸಹಯೋಗದಲ್ಲಿ ಎರಡು ದಿನ ಉಳ್ಳಾಲ ಮತ್ತು ಸೋಮೇಶ್ವರ ಕಡಲ ಕಿನಾರೆಯ ಸ್ವಚ್ಚತಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿ ಸಮುದ್ರ ಕಿನಾರೆಯನ್ನು ಕಸ ಮತ್ತು ಪ್ಲಾಸ್ಟಿಕ್ ಮುಕ್ತರಾಗಿಸಿದರು.

ಉಳ್ಳಾಲ ನಗರಸಭೆಯ ಪೌರಾಯುಕ್ತೆ ವಾಣಿ ವಿ. ಆಳ್ವ, ಸೋಮೇಶ್ವರ ದೇವಸ್ಥಾನ ಆಡಳಿತ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

Exit mobile version