Site icon Ullalavani

ತೊಕ್ಕೊಟ್ಟು: ದೈಹಿಕ ಶಿಕ್ಷಕರಿಗೆ ಅಭಿನಂದನಾ ಕಾರ್ಯಕ್ರಮ

UN NETWORKS

ತೊಕ್ಕೊಟ್ಟು: ಶಾಲಾ ಮಕ್ಕಳಲ್ಲಿ ದೈಹಿಕ ಸಧೃಡತೆಯಿದ್ದಲ್ಲಿ ಮಾನಸಿಕ ಸಧೃಡತೆ ಕಾಪಾಡಲು ಸಾಧ್ಯ, ಈ ಕೆಲಸವನ್ನು ದೈಹಿಕ ಶಿಕ್ಷಕರು ಮಾಡುತ್ತಾ ಬಂದಿದ್ದಾರೆ ಎಂದು ಪೆರ್ಮನ್ನೂರು ಸಂತ ಸೆಬಾಸ್ತಿಯನ್ನರ ಚರ್ಚ್‍ನ ಸಹಾಯಕ ಧರ್ಮಗುರು ಫಾ.ಲೈಝಿಲ್ ಡಿಸೋಜ ಅಭಿಪ್ರಾಯಪಟ್ಟರು.

ರಾಜ್ಯ ದೈಹಿಕ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ದಕ್ಷಿಣ ವಲಯ ವತಿಯಿಂದ ತೊಕ್ಕೊಟ್ಟು ಸಂತ ಸೆಬಾಸ್ತಿಯನ್ ಶಾಲಾ ಸಭಾಂಗಣದಲ್ಲಿ ಮಂಗಳವಾರ ನಡೆದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ದೈಹಿಕ ಶಿಕ್ಷಕರಿಗೆ ಅಭಿನಂದನೆ ಹಾಗೂ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಉಳ್ಳಾಲ ಭಾಗದಲ್ಲಿ ಅಯೋಜಿಸುವ ಕೀಡಾಕೂಟಗಳು ಯಶಸ್ವೀಯಾಗಿ ನಡೆಯುತ್ತಿದ್ದು ದೈಹಿಕ ಶಿಕ್ಷಕರ ಒಗ್ಗಟ್ಟಿನ ಕೆಲಸದಿಂದ ಸಾಧ್ಯವಾಗಿದೆ. ಇಂತಹ ಒಗ್ಗಟ್ಟು ಕಾಣುವ ಮಕ್ಕಳಿಗೂ ಮಾರ್ಗದರ್ಶನವಾಗಲಿದೆ ಎಂದು ಹೇಳಿದರು. ಶಾಲೆಗಳಲ್ಲಿ ಮಕ್ಕಳಿಗೆ ಸಿಗುವ ದೈಹಿಕ ಶಿಕ್ಷಣ ಸಾಧನೆಗೆ ಪೂರಕವಾಗುತ್ತದೆ, ಯಾವುದೇ ಶಾಲೆಗಳಲ್ಲೂ ದೈಹಿಕ ಶಿಕ್ಷಕರಿದ್ದರೆ ಆ ಶಾಲೆಗೆ ವಜ್ರವಿದ್ದಂತೆ. ಕ್ರೀಡೆಯೊಂದಿಗೆ ಮಕ್ಕಳ ಭವಿಷ್ಯ ನಿರ್ಮಿಸುವ ದೈಹಿಕ ಶಿಕ್ಷಕರು ಪ್ರಶಸ್ತಿ ತಾನಾಗಿಯೇ ಹರಸಿ ಬರುತ್ತದೆ ಎಂದು ಕಾಯುವುದು ಸರಿಯಲ್ಲ ಎಂದರು.

ಕಾರ್ಯಕ್ರಮದಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ದೈಹಿಕ ಶಿಕ್ಷಣಾಧಿಕಾರಿ ಲಿಲ್ಲಿ ಪಾಯಸ್ ಹಾಗೂ ದೈಹಿಕ ಶಿಕ್ಷಕ ಕೆ.ಎಚ್.ನಾಯಕ್ ಅವರನ್ನು ಅಭಿನಂದಿಸಲಾಯಿತು. ಮೂಡಾದ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ದಕ್ಷಿಣ ವಲಯ ಶಿಕ್ಷಣ ಸಮನ್ವಯಾಧಿಕಾರಿ ಡಾ.ಪ್ರಶಾಂತ್ ಕುಮಾರ್ ಕೆ.ಎಸ್., ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ವಿಷ್ಣು ಹೆಬ್ಬಾರ್, ಸಂತ ಸೆಬಾಸ್ತಿಯನ್ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಅನಿತ ನತಾಲಿಯಾ, ಪಿ.ಡಿ.ಶೆಟ್ಟಿ, ತಾರಾನಾಥ ರೈ, ಪ್ರತೀಕ್, ಲೋಕನಾಥ ರೈ, ಪ್ರೀತಂ, ಉರ್ಬನ್ ಮಸ್ಕರೇನಸ್ ಮೊದಲಾದವರು ಉಪಸ್ಥಿತರಿದ್ದರು.

ದೈಹಿಕ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ತ್ಯಾಗಂ ಹರೇಕಳ ಅಭಿನಂದನಾ ಭಾಷಣ ಮಾಡಿದರು. ಬಾಲಕೃಷ್ಣ ಮತ್ತು ರೊನಾಲ್ಡ್ ಅಭಿನಂದನಾ ಪತ್ರ ವಾಚಿಸಿದರು. ರಾಜೀವ ನಾಯ್ಕ್ ಸ್ವಾಗತಿಸಿದರು. ಲ್ಯಾನ್ಸಿ ಸಿಕ್ವೇರ ವಂದಿಸಿದರು. ಶೇಖರ್ ಕಡ್ತಲ ಕಾರ್ಯಕ್ರಮ ನಿರೂಪಿಸಿದರು.

`ಸಮಾಜ ಮತ್ತು ಶಾಲೆ ಒಂದೇ ದಾರಿಯಲ್ಲಿ ಕೊಂಡೊಯ್ಯಬೇಕಾದರೆ ದೈಹಿಕ ಶಿಕ್ಷಕರು ಅಗತ್ಯ, ಈ ಹಿನ್ನೆಲೆಯಲ್ಲಿ ದೈಹಿಕ ಶಿಕ್ಷಕರಿಗೆ ಸಮಾಜದಲ್ಲಿ ದೊಡ್ಡ ಗೌರವ ಇದೆ. ಸದಾ ಕರ್ತವ್ಯದಲ್ಲೇ ನಿರತರಾಗಿರುವ ದೈಹಿಕ ಶಿಕ್ಷಕರು ಪ್ರಶಸ್ತಿಗಳು, ಸನ್ಮಾನಕ್ಕಾಗಿ ಹೋರಾಡಿಲ್ಲ’
ತ್ಯಾಗಂ ಹರೇಕಳ, ಅಧ್ಯಕ್ಷ, ತಾಲೂಕು ದೈಹಿಕ ಶಿಕ್ಷಕರ ಸಂಘ.

Exit mobile version