Site icon Ullalavani

ಸೆ.16: ನೂತನ ಜೆಡಿಎಸ್ ಕೌನ್ಸಿಲರ್ ಳಿಗೆ ಸನ್ಮಾನ

UN NETWORKS

ಉಳ್ಳಾಲ‌: ಉಳ್ಳಾಲ‌ ಜನತಾದಳ(ಜಾತ್ಯಾತೀತ)ದಿಂದ ಉಳ್ಳಾಲ ನಗರಸಭೆಗೆ ನೂತನವಾಗಿ ಚುನಾಯಿತರಾದ ಕೌನ್ಸಿಲರ್ ಗಳಿಗೆ ಅಭಿನಂದನೆ ಮತ್ತು ಪಕ್ಷಕ್ಕೆ ದುಡಿದ ಕಾರ್ಯಕರ್ತರಿಗೆ ಕೃತಜ್ಞತಾ ಸಮರ್ಪಣಾ ಸಮಾರಂಭವು ತೊಕ್ಕೊಟ್ಟು ಗಂಗಾ ಕಾಂಪ್ಲೆಕ್ಸ್ ನಲ್ಲಿರುವ ಪಕ್ಷದ ಕಚೇರಿಯಲ್ಲಿ ಸೆ, 16 ಆದಿತ್ಯವಾರ ಸಂಜೆ 4.30ಘಂಟೆಗೆ ನಡೆಯಲಿದೆ.

ಕ್ಷೇತ್ರಾಧ್ಯಕ್ಷ ಮೋಹನದಾಸ ಶೆಟ್ಟಿಯವರು ಅಧ್ಯಕ್ಷತೆ ವಹಿಸಲಿದ್ದು .ರಾಜ್ಯ ಜನತಾದಳ ನಾಯಕರಾದ ಅಬೂಬಕ್ಕರ್ ಹಾಜಿ ನಾಟೆಕಲ್ ಹಾಗೂ ಜಿಲ್ಲಾ ನಾಯಕರು ಸಭೆಯಲ್ಲಿ ಭಾಗವಹಿಸಲಿರುವರು.ಪಕ್ಷದ ಕಾರ್ಯಕರ್ತರು, ಅಭಿಮಾನಿ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಉಳ್ಳಾಲ ನಗರ ಜನತಾದಳ ಚುನಾವಣಾ ಸಮಿತಿ ಸಂಚಾಲಕರಾದ ನಝೀರ್ ಉಳ್ಳಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version