UN NETWORKS
ದೇರಳಕಟ್ಟೆ: ದೇರಳಕಟ್ಟೆಯ ನೇತಾಜಿ ಸುಭಾಷ್ ಚಂದ್ರ ಭೋಸ್ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿ ಮತ್ತು ಹಳೇ ವಿದ್ಯಾರ್ಥಿ ಸಂಘದ ವತಿಯಿಂದ ಗುರು ವಂದನಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಬೆಳ್ಮ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಜಯ ಕೃಷ್ಣ ಪೂಜಾರಿ, ಉಪಾಧ್ಯಕ್ಷ ಬಿ.ಎಂ ಅಬ್ದುಲ್ ಸತ್ತಾರ್, ನಿವೃತ್ತ ತಹಶೀಲ್ದಾರ ನಾರಾಯಣ ಶೆಟ್ಟಿ, ಪಂಚಾಯತಿ ಸ್ಥಳೀಯ ಸದಸ್ಯ ಕಬೀರ್ ಡಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಇಸ್ಮಾಯಿಲ್ ಪಿ. ಐ, ಸಿಆರ್ ಪಿ ರಾಜೇಶ್ವರಿ, ನಯನ ಕುಮಾರಿ ಕೆ, ವಿಷ್ಣು ಹೆಬ್ಬಾರ್, ಅಂಬಿಕಾ, ವೆಂಕಟೇಶ್, ಅರುಣಾ, ವಿನಯ, ವಿಜಯ ಕೆ. ಆರ್, ಮನೋಜ್ ಕುಮಾರ್ ಟಿ ಎಮ್, ಮಹಮ್ಮದ್ ಇರ್ಷಾದ್ ಡಿ ಎಂ, ಆಸಿಫ್ ಮುಂಬೈ, ಮಹಮ್ಮದ್ ರಫೀಕ್ ಹಾಗೂ ಮೊೈದಿನ್ ಮನ್ಸೂರ್ ಉಪಸ್ಥಿತರಿದರು.
ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶಿಹಾಬುದ್ದೀನ್ ಡಿ. ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ಸಂದೀಪ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಹೃತಿಕ ವಂದಿಸಿದರು.