Site icon Ullalavani

ಮಹಾತ್ಮರ ಹಾದಿಯಲ್ಲಿ ಮುನ್ನಡೆಯಿರಿ : ಮುಹಮ್ಮದ್ ಅಲಿ ಸಖಾಫಿ

UN NETWORKS

ಕಿನ್ಯ: ಇಸ್ಲಾಮಿನ ತತ್ವ, ಸಿದ್ಧಾಂತಗಳನ್ನು ಅಳವಡಿಸಿ ಪೂರ್ವಿಕ ಮಹಾತ್ಮರ ಹಾದಿಯಲ್ಲಿ ಮುನ್ನಡೆದರೆ ಇಹ-ಪರಗಳಲ್ಲಿ ವಿಜಯ ಹೊಂದಲು ಸಾಧ್ಯ ಎಂದು ಕಿನ್ಯ, ಬದ್ರಿಯಾ ನಗರ ಬುಖಾರಿ ಜುಮಾ ಮಸ್ಜಿದ್ ಅಧ್ಯಕ್ಷ ಅಶ್‍ಅರಿಯ್ಯಾ ಮುಹಮ್ಮದ್ ಅಲಿ ಸಖಾಫಿ ಹೇಳಿದರು.

ಅವರು ಕಿನ್ಯ ಬುಖಾರಿ ಜುಮುಅ ಮಸ್ಜಿದ್‍ನಲ್ಲಿ ನಡೆದ ಖ್ಯಾತ ಹಿರಿಯ ವಿದ್ವಾಂಸ ಮರ್ಹೂಂ ಖಾಝಿ ಸಯ್ಯಿದ್ ಮುಹಮ್ಮದ್ ಉಮರುಲ್ ಫಾರೂಖ್ ತಂಙಳ್ ರವರ ಅನುಸ್ಮರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸಯ್ಯಿದ್ ಅಲವಿ ತಂಙಳ್ ದುವಾ ನೆರವೇರಿಸಿದರು.ನೂರುಲ್ ಉಲಮಾ ಮದ್ರಸದ ಸದರ್ ಮುಅಲ್ಲಿಂ ಶೌಕತ್ ಅಲಿ ಸಖಾಫಿ ಬೆಳ್ಮ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸ್ಥಳೀಯ ಖತೀಬ್ ಉಸ್ಮಾನ್ ಸಖಾಫಿ ಸಂದೇಶ ಭಾಷಣ ನಡೆಸಿದರು.

ಎಸ್ಸೆಸ್ಸೆಫ್ ರಾಷ್ಟ್ರೀಯ ಕಾರ್ಯದರ್ಶಿ ಕೆ.ಎಂ ಅಬೂಬಕರ್ ಸಿದ್ದೀಖ್, ಕೆ.ಎಚ್ ಅಹ್ಮದ್ ಕುಂಞ, ಎಸ್‍ಎಂ.ಎ. ದೇರಳಕಟ್ಟೆ ರೀಜನಲ್ ಅಧ್ಯಕ್ಷ ಎಂ.ಕೆ.ಎಂ. ಇಸ್ಮಾಯಿಲ್ ಮೀಂಪ್ರಿ, ಅಬ್ದುಲ್ ಹಮೀದ್ ಮೀಂಪ್ರಿ, ಬುಖಾರಿ ಜುಮುಅ ಮಸ್ಜಿದ್ ಉಪಾಧ್ಯಕ್ಷ ಮೂಸಕುಂಞ ಬದ್ರಿಯಾನಗರ, ಮದ್ರಸದ ಮುಅಲ್ಲಿಂ ಹೈದರ್ ಮುಸ್ಲಿಯಾರ್‍ಮತ್ತಿತರರು ಉಪಸ್ಥಿತರಿದ್ದರು.ಮಹ್ಬೂಬುರ್ರಹ್ಮಾನ್ ಸಖಾಫಿ ಕಿನ್ಯ ಸ್ವಾಗತಿಸಿ, ವಿ.ಎ ಮುಹಮ್ಮದ್ ಮುಸ್ಲಿಯಾರ್ ಕೂಡಾರ ವಂದಿಸಿದರು.

Exit mobile version