UN NETWORKS
ತೊಕ್ಕೊಟ್ಟು: ಸಂತ ಸೆಬೆಸ್ತಿಯನ್ನರ ಧರ್ಮಕೇಂದ್ರ ಪೆರ್ಮನ್ನೂರಿನಲ್ಲಿ ಮಾತೆ ಮರಿಯಮ್ಮನವರ ಜನ್ಮ ದಿನ, ತೆನೆ ಹಬ್ಬ ಹಾಗೂ ಕುಟುಂಬದ ಹಬ್ಬವನ್ನು ಆಚರಿಸಲಾಯಿತು.
ಫಾ| ವಲೇರಿಯನ್, ಫಾ| ವಿಪಿನ್, ಫಾ| ರೊಕ್ಕಿ ಉಪಸ್ಥಿತರಿದ್ದರು. ಧರ್ಮಭಗಿನಿಯರು, ಪಾಲನ ಮಂಡಳಿಯ ಸದಸ್ಯರು, ಭಕ್ತಾಧಿಗಳು ಭಕ್ತಿವಿಧಿಗಳಲ್ಲಿ ಭಾಗವಹಿಸಿ ದೇವರಿಗೆ ಹೂವುಗಳನ್ನು ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಚರ್ಚ್ ಶತಮನೋತ್ಸವದ ಸ್ಮಾರಕ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.
ಇದೇ ಸಂದರ್ಭ ಸಮುದಾಯದವರು ತಾವು ಬೆಳೆಸಿದ ತೆನೆಯನ್ನು ದೇವರಿಗೆ ಅರ್ಪಿಸಿ ಬಳಿಕ ವಿತರಿಸಲಾಯಿತು. ಇದರ ಜೊತೆಗೆ ಕಬ್ಬುಗಳನ್ನು ವಿತರಿಸಲಾಯಿತು.