UN NETWORKS
ಉಳ್ಳಾಲ: ಜಗತ್ತಿನಲ್ಲಿ ಶಿಕ್ಷಕರಿಗೆ ಶ್ರೇಷ್ಠ ಸ್ಥಾನ ನೀಡಲಾಗಿದೆ, ಆ ಹಿನ್ನೆಲೆಯಲ್ಲಿ ಶಿಕ್ಷಕರಿಗೆ ಸಿಗುವ ಗೌರವ ಪ್ರಧಾನಿಗೂ ಸಿಗುವುದಿಲ್ಲ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಅಭಿಪ್ರಾಯಪಟ್ಟರು.
ನಾವು ಮಾಡುವ ತಪ್ಪಿಗೆ ಸಮಾಜ ಶಿಕ್ಷಕರತ್ತ ಕೈ ತೋರಿಸುತ್ತದೆ. ಮಕ್ಕಳು ಶಿಕ್ಷಕರ ನಡೆ, ನುಡಿ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೆ. ಅಲ್ಲದೆ ದೇಶ ಕಟ್ಟುವ ಕಾರ್ಯದಲ್ಲಿ ಶಿಕ್ಷಕರ ಸೇವೆ ಅಗತ್ಯ. ಶಿಕ್ಷಕರದ್ದು ಕೇವಲ ಪಾಠ ಮಾಡುವ ಕೆಲಸವಲ್ಲ, ಸಮಾಜ ಕಟ್ಟುವ ಜವಾಬ್ದಾರಿ ಇದು ವೃತ್ತಿಯಲ್ಲ, ಸೇವೆಯಾಗಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಅತ್ತಾವರ ಪ್ರಾಥಮಿಕ ಶಾಲೆಯ ಶಿ ಹೇಮಾವತಿ ಅತ್ತಾವರ ವಾಮಂಜೂರು ಮಂಗಳಾ ಜ್ಯೋತಿ ಶಾಲೆಯ ಅಶೋಕ್ ಕುಮಾರ್ ಶೆಟ್ಟಿ, ನಿಕಟಪೂರ್ವ ದೈಹಿಕ ಶಿಕ್ಷಣಾಧಿಕಾರಿ ಗುರುನಾಥ ಬಾಗೇವಾಡಿ ಸಹಿತ 55 ಸಾಧಕ ಶಿಕ್ಷಕರನ್ನು ಸನ್ಮಾನಿಸಲಾಯಿತು.ಮಂಗಳೂರು ವಿವಿ ಪ್ರಾಧ್ಯಾಪಕ ಧನಂಜಯ ಕುಂಬ್ಳೆ ದಿಕ್ಸೂಚಿ ಭಾಷಣ ಮಾಡಿದರು.ವಿದಾನ ಪರಿಷತ್ ಸದಸ್ಯ ಐವನ್ ಡಿಸೋಜ, ತಾಲೂಕು ಪಂಚಾಯಿತಿ ಅಧ್ಯಕ್ಷ ಮೊಹಮ್ಮದ್ ಮೋನು, ಜಿಲ್ಲಾ ಪಂಚಾಯಿತಿ ಸದಸ್ಯೆ ಧನಲಕ್ಷ್ಮೀ ಗಟ್ಟಿ, ಮನಪಾ ಸದಸ್ಯ ಸುರೇಂದ್ರ, ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎಂ.ಕೆ.ಮಂಜನಾಡಿ, ವಿದ್ಯಾರತ್ನ ಶಾಲೆ ನಿರ್ದೇಶಕ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ದಕ್ಷಿಣ ವಲಯ ಪರಿವೀಕ್ಷಣಾಧಿಕಾರಿ ವಿಷ್ಣು ಹೆಬ್ಬಾರ್, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ತುಳಸೀ, ಜಗದೀಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಆರ್.ಲೋಕೇಶ್ ಸ್ವಾಗತಿಸಿದರು. ಎಂ.ಎಚ್.ಮಲಾರ್, ರಾಧಾಕೃಷ್ಣ ರಾವ್, ತ್ಯಾಗಂ ಹರೇಕಳ, ಸನ್ಮಾನಿತರ ಪತ್ರ ವಾಚಿಸಿದರು. ದಕ್ಷಿಣ ವಲಯ ಶಿಕ್ಷಣ ಸಮನ್ವಯಾಧಿಕಾರಿ ಡಾ.ಪ್ರಶಾಂತ್ ಕುಮಾರ್ ಕೆ.ಎಸ್. ವಂದಿಸಿದರು. ಚಿತ್ರಕಲಾ ಶಿಕ್ಷಕ ರಫೀಕ್ ತುಂಬೆ, ವಿಜಯಲಕ್ಷ್ಮಿ, ಸತೀಶ್ ಪೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು.
‘ಶಿಕ್ಷಕರು ಸಮಾಜದ ಬೆಳಕು. ಶಿಕ್ಷಕರಿಗೆ ಹಣ, ಗ್ಲಾಮರ್, ಹುಟ್ಟಿನಿಂದ ಗೌರವ ಬಂದಿಲ್ಲ, ವಿದ್ಯಾರ್ಥಿಗಳ ಭವಿಷ್ಯ ರೂಪಿಸಿ, ಪ್ರೀತಿ ಹಂಚಿದ್ದರಿಂದ ಸಿಕ್ಕ ಗೌರವ ಶಾಶ್ವತವಾಗಿರುತ್ತದೆ, ಸಮಾಜದಲ್ಲಿ ಸಂಭವಿಸುವ ತಪ್ಪಿಗೆ ಶಿಕ್ಷಕರ ಕಾರಣರಲ್ಲ’
ಧನಂಜಯ ಕುಂಬ್ಳೆ, ಮಂಗಳೂರು ವಿವಿ ಪ್ರಾಧ್ಯಾಪಕ