Site icon Ullalavani

ಸಮುದ್ರಪಾಲಾಗುತ್ತಿದ್ದ ಬಾಲಕನ ರಕ್ಷಿಸಿದ ಯುವಕ

UN NETWORKS

ಉಳ್ಳಾಲ: ಬಿರುಸುಗೊಂಡಿರುವ ಸಮುದ್ರ ದಲ್ಲಿ ಸಮುದ್ರಪಾಲಾಗುತ್ತಿದ್ದ ಬಾಲಕನನ್ನು ಯುವಕನೋರ್ವ ಎರಡು ಗಂಟೆಗಳ ಕಾಲ ಈಜಾಡಿ ರಕ್ಷಿಸಿ ಸಾಹಸ ಮೆರೆದಿರುವ ಘಟನೆ ಉಳ್ಳಾಲ ಸಮೀಪದ ಕೈಕೋ ಎಂಬಲ್ಲಿ ಗುರುವಾರ ಸಂಜೆ ವೇಳೆ ಸಂಭವಿಸಿದೆ.

ಕೈಕೋ ನಿವಾಸಿ ರಾಹಿಲ್ (16) ರಕ್ಷಣೆಗೊಳಗಾದವ. ಈತನನ್ನು ನೆರೆಯ ನಿವಾಸಿ ಕಬೀರ್ ಎಂಬಾತ ಸಾಹಸ ಮೆರೆದು ರಕ್ಷಿಸಿದ್ದಾನೆ.
ರಾಹಿಲ್ ಸಂಜೆ ಹೊತ್ತಿಗೆ ಬಲೆ ಹಾಕಿ ಮೀನು ಹಿಡಿಯಲು ಯತ್ನಿಸುತ್ತಿದ್ದ. ಈ ವೇಳೆ ಜೋರಾಗಿ ಬಂದ ಅಲೆಯಿಂದಾಗಿ ಬಾಲಕ ನೀರುಪಾಲಾಗಿದ್ದ . ರಕ್ಷಣೆಗೆ ಯಾರೂ ಮುಂದಾಗದೇ ಇದ್ದಾಗ ಜೀವದ ಹಂಗು ತೊರೆದು ಸ್ಥಳದಲ್ಲೇ ಇದ್ದ ಕಬೀರ್ ಸಮುದ್ರಕ್ಕೆ ಹಾರಿ ನಿರಂತರ ಎರಡು ಗಂಟೆಗಳ ಕಾಲ ಕಾರ್ಯಾಚರಿಸಿ ರಾಹಿಲ್ ನನ್ನು ಮೇಲಕ್ಕೆತ್ತಿದ್ದಾನೆ. ಸಾಹಸ ಮೆರೆದ ಕಬೀರ್ ನನ್ನು ಸ್ಥಳೀಯರು ಅಭಿನಂದಿಸಿದ್ದಾರೆ.

Exit mobile version