Site icon Ullalavani

ಮುಡಿಪು: 2018-19ನೇ ಸಾಲಿನ ಎನ್‍ಎಸ್‍ಎಸ್ ಘಟಕ ಉದ್ಘಾಟನೆ

UN NETWORKS

ಮುಡಿಪು: ಮುಡಿಪಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ 2018-19ನೇ ಸಾಲಿನಲ್ಲಿ ಹೊಸದಾಗಿ ಪ್ರಾರಂಭಿಸಿದ ಎನ್‍ಎಸ್‍ಎಸ್ ಘಟಕದ ಉದ್ಘಾಟನಾ ಸಮಾರಂಭ ಕಾಲೇಜಿನ ಸಭಾಭವನದಲ್ಲಿ ನಡೆಯಿತು.

ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಮಂಗಳೂರು ರಥಬೀದಿಯ ಡಾ. ದಯಾನಂದ ಪೈ-ಸತೀಶ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಸಹ ಪ್ರಾಧ್ಯಾಪಕ ಡಾ. ನವೀನ್ ಕೊಣಾಜೆ ಉದ್ಘಾಟಿಸಿ ಎನ್‍ಎಸ್‍ಎಸ್‍ನ ಮಹತ್ವವನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು.

ಕಾಲೇಜಿನ ಪ್ರಾಂಶುಪಾಲ ಡಾ. ಗಿರಿಧರ್ ರಾವ್ ಎಂ. ಎಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಜ್ವಲ್ ಡಿಸೋಜ ಸ್ವಾಗತಿಸಿದರು. ಎನ್‍ಎಸ್‍ಎಸ್ ಘಟಕದ ಯೋಜನಾಧಿಕಾರಿ ಶೋಭಾಮಣಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಎನ್‍ಎಸ್‍ಎಸ್‍ನ ವಿದ್ಯಾರ್ಥಿ ಪ್ರತಿನಿಧಿ ಅಭಯ ಅಶೋಕ ಭಟ್ ಕಾರ್ಯಕ್ರಮ ನಿರೂಪಿಸಿದರು. ಹರ್ಷಿತಾ ಪಿ. ಪ್ರಾರ್ಥಿಸಿದರು. ಎನ್‍ಎಸ್‍ಎಸ್‍ನ ವಿದ್ಯಾರ್ಥಿನಿ ಪ್ರತಿನಿಧಿ ದಾಕ್ಷಾಯಿನಿ ವಂದಿಸಿದರು.

Exit mobile version