Site icon Ullalavani

ಉಳ್ಳಾಲ ನಗರಸಭೆ ಚುನಾವಣೆ ಜೆಡಿಎಸ್ ಪ್ರಣಾಳಿಕೆ ಬಿಡುಗಡೆ

UN NETWORKS

ಉಳ್ಳಾಲ: ಸ್ವಚ್ಛ ಉಳ್ಳಾಲ ನಿರ್ಮಾಣದೊಂದಿಗೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ರಾಜ್ಯದಲ್ಲೇ ಮಾದರಿ ನಗರಸಭೆಯನ್ನಾಗಿ ರೂಪಿಸಲು ಜನ ಸ್ಥಳೀಯಾಡಳಿತ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಬೆಂಬಲಿಸಬೇಕಿದೆ ಎಂದು ಜಾತ್ಯಾತೀತ ಜನತಾದಳ ವಕ್ತಾರ ನಝೀರ್ ಉಳ್ಳಾಲ್ ಹೇಳಿದ್ದಾರೆ.

ಅವರು ತೊಕ್ಕೊಟ್ಟು ಖಾಸಗಿ ಹೊಟೇಲಿನಲ್ಲಿ ಉಳ್ಳಾಲ ನಗರಸಭೆ ಚುನಾವಣೆ-2018ರ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ನಿಷ್ಕಳಂಕ, ನಿರಂತರ ಜನರೊಂದಿಗೆ ಇರುವ ಶಿಕ್ಷಿತ ಅಭ್ಯರ್ಥಿಗಳನ್ನೇ ಈ ಬಾರಿ ಅಭ್ಯರ್ಥಿಗಳನ್ನಾಗಿ ಆಯ್ಕೆ ಮಾಡಲಾಗಿದೆ. ರಾಜ್ಯದ ಮುಖ್ಯಮಂತ್ರಿಯವರು ವೃದ್ಧಾಪ್ಯಮಾಶಾಶನದಲ್ಲಿ ಏರಿಕೆ , ನಗರಾಭಿವೃದ್ಧಿ ಹಾಗೂ ಸ್ಥಳೀಯಾಡಳಿತಗಳಿಗೆ ಹೆಚ್ಚಿನ ಅನುದಾನವನ್ನು ಪೂರೈಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಜೆಡಿಎಸ್ ಆಡಳಿತಕ್ಕೆ ಬಂದಲ್ಲಿ ನಗರಸಭೆ ಸರ್ವತೋಮುಖ ಅಭಿವೃದ್ಧಿ ಆಗಲಿದೆ.
ಮಾಜಿ ಕೌನ್ಸಿಲರ್ ಯು.ಹೆಚ್ ಫಾರುಕ್ ಮಾತನಾಡಿ 24 ಗಂಟೆ ಕುಡಿಯುವ ನೀರಿನ ಪೂರೈಕೆ, ವೈಜ್ಞಾನಿಕ ರೀತಿಯಲ್ಲಿ ಘನತ್ಯಾಜ್ಯ ನಿರ್ವಹಣೆ, ಒಳಚರಂಡಿ ಯೋಜನೆ ಸಮಗ್ರ ಅನುಷ್ಠಾನ, ಭ್ರಷ್ಟಾಚಾರ ಮತ್ತು ಪಾರದರ್ಶಕ ಆಡಳಿತ, ಆಟದ ಮೈದಾನ ನಿರ್ಮಾಣ, ಈಜುಕೊಳ ಮತ್ತು ಉದ್ಯಾನವನ ನಿರ್ಮಾಣ, ಜನಸಾಮಾನ್ಯರಿಗೆ ಸವಲತ್ತುಗಳನ್ನು ತಲುಪಿಸುವುದು, ಕಡಲ್ಕೊರೆತಕ್ಕೆ ಸರಕಾರದ ಸವಲತ್ತುಗಳ ಅನುಷ್ಠಾನ, ವಸತಿಯೋಜನೆ ನಿರ್ವಸಿತರಿಗೆ ತಲುಪಿಸುವುದು, ಸೌಹಾರ್ದ ಮಾದರಿ ಉಳ್ಳಾಲ ನಗರವನ್ನು ರೂಪಿಸುವುದು, ಪ್ರವಾಸೋದ್ಯಮಕ್ಕೆ ಉತ್ತೇಜನ ಹಾಗೂ ಬೀಚ್ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳುವ ಭರವಸೆಗಳನ್ನು ಪ್ರಣಾಳಿಕೆ ಮೂಲಕ ಬಿಡುಗಡೆಗೊಳಿಸಲಾಗಿದೆ ಎಂದರು.

ಸುದ್ಧಿಗೋಷ್ಠಿಯಲ್ಲಿ ಸುದ್ಧಿಗೋಷ್ಠಿಯಲ್ಲಿ ಚುನಾವಣಾ ಪ್ರಚಾರ ಸಮಿತಿಯ ನಝೀರ್ ಉಳ್ಳಾಲ್, ಉಳ್ಳಾಲ ನಗರ ಸಭೆಯ ಸದಸ್ಯ ಫಾರೂಕ್ ಯು.ಎಚ್, ಜನತಾದಳ ಕ್ಷೇತ್ರ ಸಮಿತಿಯ ಅಧ್ಯಕ್ಷ ಮೋಹನ್ ದಾಸ್ ಶೆಟ್ಟಿ, ರಾಜ್ಯ ಸಮಿತಿ ಸದಸ್ಯ ಹಾಜಿ ಅಬೂಬಕ್ಕರ್ ನಾಟೆಕಲ್, ಸಮಿತಿ ಸದಸ್ಯರಾದ ಯು.ಕೆ ಮುಸ್ತಾಫ, ಅಲ್ಫ್ರೆಡ್ ಡಿಸೋಜಾ ಉಪಸ್ಥಿತರಿದ್ದರು.

ಕಣದಲ್ಲಿರುವ ಜೆಡಿಎಸ್ ಅಭ್ಯರ್ಥಿಗಳು
ವಾರ್ಡ್ 2ರಲ್ಲಿ ಹಸೀನಾ ಅಶ್ರಫ್, 4-ಅಶ್ರಫ್ ಬಾವ, 7-ಸಾರಮ್ಮ ಜುಬೇದಾ, 9-ಅಬ್ದುಲ್ ಬಶೀರ್, 10-ಅಬ್ದುಲ್ ಜಬ್ಬಾರ್, 11-ಮೀನಾ ಡಿಸೋಜ, 12-ಸೌಧಾ, 13-ಝಾಕೀರ್ ಹುಸೈನ್, 14-ಗಂಗಾಧರ ಉಳ್ಳಾಲ್, 15-ಲತೀಫ, 17-ಅಶೋಕ್ ರೂಪೇಶ್ ಮೊಂತೆರೋ, 18-ದಿನಕರ ಉಳ್ಳಾಲ್, 21-ರವೀಂದ್ರ, 23-ವೀಣಾ ಡಿಸೋಜ, 24-ಹಂಝ ಸುಂದರೀಭಾಗ್, 25-ಬಶೀರ್ ಇಸ್ಮಾಯಿಲ್, 27-ಖಲೀಲ್, 28-ಸಾಕಿರಾ, 29-ದಿನಕರ್, 30-ಹರಿಣಿ ಬಂಗೇರ ಹಾಗೂ 31-ಸುರೇಖ ಚಂದ್ರಹಾಸ್.

Exit mobile version